ಜಕ್ಕೂರು ನಿವಾಸಿ ಸಚಿನ್ ಅಲಿಯಾಸ್ ಕರಣ್ ಬಂಧಿತನಾಗಿದ್ದು, ಎರಡು ದಿನಗಳ ಹಿಂದೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ 53 ವರ್ಷದ ಮಹಿಳೆಯನ್ನು ಕರೆದೊಯ್ದು ಆರೋಪಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಈ ಬಗ್ಗೆ ಮೃತಳ ಪುತ್ರ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರು(ಏ.05): ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪೆಂಟರ್‌ವೊಬ್ಬನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಕ್ಕೂರು ನಿವಾಸಿ ಸಚಿನ್ ಅಲಿಯಾಸ್ ಕರಣ್ ಬಂಧಿತನಾಗಿದ್ದು, ಎರಡು ದಿನಗಳ ಹಿಂದೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ 53 ವರ್ಷದ ಮಹಿಳೆಯನ್ನು ಕರೆದೊಯ್ದು ಆರೋಪಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಈ ಬಗ್ಗೆ ಮೃತಳ ಪುತ್ರ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಜಕ್ಕೂರಿನಲ್ಲಿ ನೆಲೆಸಿದ್ದ ಸಚಿನ್, ಪೆಂಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ವರದರಾಜು ಬಡಾವಣೆಯ 8ನೇ ಅಡ್ಡರಸ್ತೆ ಬಳಿ ಬಾರ್‌ನಲ್ಲಿ ಸೋಮವಾರ ರಾತ್ರಿ 8.30ರ ಸುಮಾರಿಗೆ ಸಚಿನ್ ಮದ್ಯ ಸೇವಿಸುತ್ತಿದ್ದ. ಅದೇ ವೇಳೆ ಮಹಿಳೆ ಸಹ ಮದ್ಯ ಸೇವನೆಗೆ ಬಂದಿದ್ದಳು. ಆಗ ಆಕೆಯನ್ನು ಗಮನಿಸಿದ ಆರೋಪಿ, ಸಂತ್ರಸ್ತೆ ಮದ್ಯ ಸೇವಿಸಿ ಬಾರ್‌ನಿಂದ ತೆರಳುತ್ತಿದ್ದ ಹಿಂಬಾಲಿಸಿದ್ದಾನೆ. ಬಳಿಕ ರಸ್ತೆ ಬದಿಯ ನಿರ್ಮಾಣ ಹಂತದಲ್ಲಿದ್ದ ಕಟ್ಚಡಕ್ಕೆ ಬಲವಂತವಾಗಿ ಕರೆದೊಯ್ದು ಅತ್ಯಾಚಾರ ಎಸಗಿದ ನಂತರ ಉಸಿರುಗಟ್ಟಿಸಿ ಕೊಂದು ಪರಾರಿಯಾಗಿದ್ದ.
undefined
Bengaluru: ಆಟೋ ಚಾರ್ಜ್ ಕೊಟ್ಟಿಲ್ಲವೆಂದು ಯುವತಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆಗೈದ ಚಾಲಕ
ಇತ್ತ ತಡರಾತ್ರಿಯಾದರೂ ತಾಯಿ ಮನೆಗೆ ಬಾರದೆ ಹೋದಾಗ ಮೃತಳ ಮಕ್ಕಳು, ನೆರೆಹೊರೆಯಲ್ಲಿ ಹುಡುಕಾಡಿದರು. ಎಲ್ಲೂ ತಾಯಿ ಪತ್ತೆಯಾಗದೆ ಆತಂಕಗೊಂಡಿದ್ದರು. ಮರುದಿನ ಬೆಳಗ್ಗೆ ಮೃತಳ ಮಗನಿಗೆ ವರದರಾಜು ಬಡಾವಣೆಯ ನಿರ್ಮಾಣ ಹಂತದ ಕಟ್ಟಡದ ಬಳಿ ಅಪರಿಚಿತ ಮಹಿಳೆ ಮೃತದೇಹ ಸಿಕ್ಕಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ತಕ್ಷಣವೇ ಆ ಕಟ್ಟಡದ ಬಳಿ ತೆರಳಿ ಮೃತದೇಹವನ್ನು ನೋಡಿ ಆತ ಗುರುತು ಪತ್ತೆ ಹಚ್ಚಿದ್ದಾನೆ. ಈ ಬಗ್ಗೆ ಮೃತನ ಪುತ್ರ ದೂರು ನೀಡಿದ ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು, ಬಾರ್ ಸಿಸಿಟಿವಿ ಕ್ಯಾಮೆರಾದಲ್ಲಿ ಸಂತ್ರಸ್ತೆಯನ್ನು ಆರೋಪಿ ಹಿಂಬಾಲಿಸುವುದು ಗೊತ್ತಾಗಿದೆ. ಈ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಿಕ್ಷೆ ಬೇಡಿ ಜೀವನ
ರಾಯಚೂರು ಜಿಲ್ಲೆಯ ಮೃತ ಮಹಿಳೆ, ತನ್ನ ಮಕ್ಕಳ ಜತೆ ಅಮೃತಹಳ್ಳಿ ಸಮೀಪ ವಾಸವಾಗಿದ್ದಳು. ದೇವಾಲಯಗಳ ಬಳಿ ಆಕೆ ಭಿಕ್ಷಾಟನೆ ಮಾಡುತ್ತಿದ್ದರೆ, ಸಂತ್ರಸ್ತೆಯ ಸದಸ್ಯರು ಕೂಲಿ ಕಾರ್ಮಿಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.