
ಮೊರದಾಬಾದ್: ಮದ್ವೆಯಾದ ನಂತರ ಬೇರೆ ಯುವತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಹೆಂಡ್ತಿ ಮನೆಯವರು ವ್ಯಕ್ತಿಯೋರ್ವನನ್ನು ಕಿಡ್ನಾಪ್ ಮಾಡಿ ಅಮಾನವೀಯವಾಗಿ ಥಳಿಸಿ ಶೌಚಾಲಯದ ನೀರು ಕುಡಿಸಿ ಬಳಿಕ ಚಪ್ಪಲಿ ಹಾರ ಹಾಕಿ ಊರ ತುಂಬಾ ಮೆರವಣಿಗೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಲ್ಲದೇ ದುಷ್ಕರ್ಮಿಗಳು ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ವೈರಲ್ ಆಗಿರುವ ವೀಡಿಯೋದಲ್ಲಿ ಯುವಕನನ್ನು ಕಂಬಕ್ಕೆ ಕಟ್ಟಿ ಆತನಿಗೆ ಚಪ್ಪಲಿ ಹಾರ ಹಾಕಿ ಕೆಲವು ದುಷ್ಕರ್ಮಿಗಳು ಆತನನ್ನು ಎಳೆದುಕೊಂಡು ಮೆರವಣಿಗೆ ಮಾಡುತ್ತಿರುವ ದೃಶ್ಯವಿದೆ.
ಮಹಿಳೆಯೊಂದಿಗೆ ವಿವಾಹಿತ ಯುವಕನಿಗೆ ಇದ್ದ ಅನೈತಿಕ ಸಂಬಂಧವೇ ಈ ಘಟನೆಗೆ ಕಾರಣ ಎಂದು ವರದಿಯಾಗಿದೆ. ಸತತ 9 ಗಂಟೆಗಳ ಕಾಲ ಯುವಕನಿಗೆ ಟಾರ್ಚರ್ ನೀಡಿದ ಆತನ ಹೆಂಡತಿ ಮನೆಯವರು ಬಳಿಕ ಆತನನ್ನು ಬಿಡುಗಡೆ ಮಾಡಿದ್ದಾರೆ. ಆತ ತಾನಿದ್ದ ಪ್ರದೇಶದ ಬೇರೊಬ್ಬ ಹುಡುಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಅತ್ತೆ ಮನೆಯವರು ಈ ಕೃತ್ಯವೆಸಗಿದ್ದಾರೆ.
ಹೆಂಡ್ತಿನ ತವರಿಗೆ ಕಳಿಸೋಕೆ ಒಲ್ಲೆ ಅನ್ಬೇಡಿ... ಇಲ್ಲೇನಾಯ್ತು ನೋಡಿ
ಹೀಗೆ ಅಮಾನವೀಯವಾಗಿ ಹಲ್ಲೆಗೊಳಗಾದ ಯುವಕನನ್ನು ಮೊರದಾಬಾದ್‌ನ ಅಗ್ವಾನ್‌ಪುರ ನಿವಾಸಿ 21 ವರ್ಷದ ಯುವಕ ಎಂದು ಗುರುತಿಸಲಾಗಿದೆ. ಘಟನೆಯ ವೀಡಿಯೋ ವೈರಲ್ ಆದ ಬಳಿಕ ಯುವಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ 9 ಪರಿಚಿತ ಹಾಗೂ 10 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಯುವಕ ತನ್ನ ತಂದೆಯೊಂದಿಗೆ ಸೇರಿಕೊಂಡು ಗಿಡಮೂಲಿಕೆಯ ಔಷಧಿ ಮಾರಾಟ ಮಾಡುತ್ತಿದ್ದ ಎಂದು ವರದಿ ಆಗಿದೆ.
ಕೆಲ ವರದಿಯ ಪ್ರಕಾರ, ಈ ಯುವಕ ತಾನು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಮದುವೆಯಾಗಲು ಬಯಸಿದ್ದ. ಆದರೆ ಅವರಿಬ್ಬರೂ ಸಂಬಂಧಿಕರೇ ಆಗಿದ್ದರಿಂದ ಈ ಮದುವೆ ಸಾಧ್ಯವಾಗಲಿಲ್ಲ. ಇದಾದ ನಂತರ ಮಾರ್ಚ್ 5 ರಂದು ಆತನಿಗೆ ಬೇರೆ ಹುಡುಗಿಯೊಂದಿಗೆ ಮದ್ವೆಯಾಗಿದೆ. ಮದ್ವೆಯ ನಂತರ ಆತನ ಪತ್ನಿ ಆತನ ಮೊಬೈಲ್ ಫೋನ್ ಚೆಕ್ ಮಾಡಿದಾಗ ಆತ ಹಾಗೂ ಆ ಮಹಿಳೆಯ ಹಲವು ಅಶ್ಲೀಲ ಫೋಟೋ ವೀಡಿಯೋಗಳು ಆ ಮೊಬೈಲ್‌ನಲ್ಲಿ ಇದ್ದಿದ್ದು, ಪತ್ನಿಗೆ ಇವರ ಅನೈತಿಕ ಸಂಬಂಧ ಗೊತ್ತಾಗಿದೆ.
ಮುಸ್ಲಿಂ ಮಹಿಳೆ ಜತೆ ಅನೈತಿಕ ಸಂಬಂಧ ಆರೋಪ; ಸಾಮಾಜಿಕ ಕಾರ್ಯಕರ್ತನಿಗೆ ಹಿಗ್ಗಾಮುಗ್ಗಾ ಥಳಿತ!
ಇದಾದ ನಂತರ ಯುವತಿ ತನ್ನ ಪೋಷಕರಿಗೆ ತನ್ನ ಗಂಡನ ಈ ಅನೈತಿಕ ವ್ಯವಹಾರದ ಬಗ್ಗೆ ದೂರು ನೀಡಿದ್ದಾರೆ. ಇದಾದ ನಂತರ ಪತ್ನಿಯ ಪೋಷಕರು ಹಾಗೂ ಬಂಧುಗಳು ಮಾರ್ಚ್ 30 ರಂದು ಅಗ್ವಾನ್‌ಪುರ ರೈಲು ನಿಲ್ದಾಣದಿಂದ ಆತನನ್ನು ಕಿಡ್ನಾಪ್ ಮಾಡಿ ಸೀದಾ ಆತನ ಪ್ರೇಯಸಿ ಮನೆಗೆ ಕರೆತಂದಿದ್ದಾರೆ. ಬಳಿಕ ಅಲ್ಲಿ ಆತನಿಗೆ ಸರಿಯಾಗಿ ಥಳಿಸಿದ್ದಾರೆ ಅಷ್ಟೇ ಅಲ್ಲದೇ ಆತನಿಗೆ ಆತನ ಪ್ರೇಯಸಿ ಕೈನಿಂದಲೇ ಒತ್ತಾಯಪೂರ್ವಕವಾಗಿ ಮೂತ್ರ ಕುಡಿಸಿ ಶೌಚಾಲಯದ ನೀರು ಕುಡಿಸಿದ್ದಾರೆ ಎಂದು ವರದಿ ಆಗಿದೆ.
ಮದುವೆಯಾಗಿ ಏಳೇ ದಿನ, ಬೆಡ್‌ರೂಂನಲ್ಲಿದ್ದ ಗಂಡನ ಕತ್ತು ಕೊಯ್ದ ಹೆಂಡತಿ!
ನಂತರ ಆತನಿಗೆ ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಸತತ ಹಲವು ಗಂಟೆಗಳ ಟಾರ್ಚರ್ ಬಳಿಕ ಯುವಕನನ್ನು ಬಿಟ್ಟು ಕಳಿಸಿದ್ದಾರೆ. ಬಳಿಕ ಘಟನೆಯ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದ ಯುವಕನ ತಂದೆಗೆ ವಿಚಾರ ತಿಳಿದಿದ್ದು, ಬಳಿಕ ತಂದೆ ಹಾಗೂ ಕುಟುಂಬಸ್ಥರು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಹೋಗಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ