
ಮೈಸೂರು (ಜ.20): ಗಾಂಜಾ ಸೇವನೆ ಆರೋಪದಲ್ಲಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ತನ್ನನ್ನು ವಿಚಾರಣೆ ನಡೆಸಿದರಿಂದ ಮನನೊಂದ ಯುವಕ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಜಯನಗರದಲ್ಲಿ ಬುಧವಾರ ರಾತ್ರಿ ನಡೆದಿದೆ. ಜಯನಗರ ನಿವಾಸಿ ಅಭಿಷೇಕ್ (24) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ರಾರಯಪಿಡೋ ಬೈಕ್ ಸರ್ವಿಸ್ ಮೂಲಕ ಗ್ರಾಹಕರೊಬ್ಬರನ್ನು ಡ್ರಾಪ್ ಮಾಡಿ ಹಣ ಕೇಳಲು ಹೋದ ಜಾಗದಲ್ಲಿ ಪೊಲೀಸರು ನನ್ನನ್ನು ಹಿಡಿದು ಗಾಂಜಾ ಸೇವನೆ ಮಾಡುತ್ತಿಯಾ ಎಂದು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನೆಪದಲ್ಲಿ ಹೀಯಾಳಿಸಿದ್ದರು.
ಇದನ್ನು ಸಹಿಸಲು ಸಾಧ್ಯವಿಲ್ಲ. ಈ ತರಹದ ದೂರುಗಳು ಸಹಿಸಲು ಅಸಾಧ್ಯ. ನನ್ನನ್ನು ದಯವಿಟ್ಟು ಕ್ಷಮಿಸಿ, ಏನೇ ಕಷ್ಟ ಬಂದರು ಇರುವರೆಗೆ ಹೇಡಿತನ ಮಾಡದೆ ಇದ್ದಿದಕ್ಕೆ ನನಗೆ ಸಿಕ್ಕ ಪ್ರತಿಫಲ. ಕೊಲೆಯಾದ ಸ್ಥಳದಲ್ಲಿ ಇದ್ದ ಮಾತ್ರಕ್ಕೆ ಯಾರು ಕೊಲೆಗಾರ ಆಗುವುದಿಲ್ಲ. ಇನ್ನೊಂದು ಜನ್ಮ ಇದ್ದರೆ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ನಿಮ್ಮನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ. I AM VERY SORRY MOM DAD.ಇದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರು ಕಾರಣವಲ್ಲ ಎಂದು ಅಭಿಷೇಕ್ ಪತ್ರ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bengaluru: 6 ವರ್ಷದ ಪ್ರೀತಿಗೆ ಬ್ರೇಕ್ ಬಿದ್ದಿದ್ದಕ್ಕೆ ಪ್ರಿಯತಮ ಆತ್ಮಹತ್ಯೆ
ಪ್ರೇಮಿಗಳಿಬ್ಬರು ನೇಣಿಗೆ ಶರಣು: ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಜೈನಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ. ರಾಕೇಶ ರುದ್ರಪ್ಪ ಹಂಗರಗಿ (25) ಹಾಗೂ ಸಾವಿತ್ರಿ ಮಲ್ಲಪ್ಪ ಅಂಬಲಿ (18) ಮೃತ ಪ್ರೇಮಿಗಳಾಗಿದ್ದಾರೆ. ಜೈನಾಪುರ ಗ್ರಾಮದ ಸಂಗನಬಸಪ್ಪ ಹೊಸಮನಿ ಹೊಲದಲ್ಲಿರುವ ಬೇವಿನಮರಕ್ಕೆ ಎದುರು ಬದುರಾಗಿ ನೇಣು ಹಾಕಿಕೊಂಡಿದ್ದಾರೆ. ರಾಕೇಶ ಹಂಗರಗಿ ಟ್ರ್ಯಾಕ್ಟರ್ ಚಾಲಕನಾಗಿದ್ದನು. ಸಾವಿತ್ರಿ ಅಂಬಲಿ 9ನೇ ತರಗತಿ ಬಿಟ್ಟು ಮೂರು ವರ್ಷದಿಂದ ಮನೆಯಲ್ಲಿದ್ದಳು.
ಬೆಂಗಳೂರು: ಸಾಲು ತೀರಿಸಲು ರೋಗಿಗಳ ಚಿನ್ನ ಕದ್ದ ಡಾಕ್ಟರ್..!
ಇಬ್ಬರ ಮನೆಗಳು ಒಂದೇ ಕಡೆಯಲ್ಲಿದ್ದವು. ಇಬ್ಬರೂ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹುಡುಗಿಯನ್ನು ಈಚೆಗೆ ಬೇರೆ ಕಡೆಗೆ ಮದುವೆ ಮಾಡಲು ಮನೆಯಲ್ಲಿ ತಯಾರಿ ನಡೆಸಿದ್ದರು. ಇಬ್ಬರಿಗೂ ಇದು ಸರಿಯಲ್ಲ ಎಂದು ಎರಡು ಕಡೆಯ ಹಿರಿಯರು ಬುದ್ದಿ ಹೇಳಿದ್ದರು. ಬುಧವಾರ ನಸುಕಿನ ಜಾವ ರಾಕೇಶ ಮತ್ತು ಸಾವಿತ್ರಿ ಮನೆಯಿಂದ ಹೊರಹೋಗಿದ್ದರು ಎಂದು ತಿಳಿದುಬಂದಿದೆ. ಈ ಘಟನಾ ಸ್ಥಳಕ್ಕೆ ಪಿಎಸೈ ಎನ್.ಟಿ.ದಡ್ಡಿಮನಿ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ