Car Accident; ರಾಮನಗರ ಬಳಿ ಘೋರ ಅಪಘಾತ, ಊಟ ಬಿಟ್ಟು ಗಾಯಾಳುಗಳ ನೆರವಿಗೆ ಧಾವಿಸಿದ ಪ್ರತಾಪ್ ಸಿಂಹ

Published : Nov 22, 2021, 04:10 PM ISTUpdated : Nov 22, 2021, 04:22 PM IST
Car Accident; ರಾಮನಗರ ಬಳಿ ಘೋರ ಅಪಘಾತ, ಊಟ ಬಿಟ್ಟು ಗಾಯಾಳುಗಳ ನೆರವಿಗೆ ಧಾವಿಸಿದ ಪ್ರತಾಪ್ ಸಿಂಹ

ಸಾರಾಂಶ

* ಮುದುಗೆರೆ ಬಳಿ ಕಾರು ಪಲ್ಟಿ  * ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ  * ಚನ್ನಪಟ್ಟಣದ ಮುದುಗೆರೆ ಬಳಿ ಅವಘಡ  * ಕಾರ್ ನಲ್ಲಿದ್ದ 6 ಮಂದಿ ಪ್ರಾಣಾಪಾಯದಿಂದ ಪಾರು 

ರಾಮನಗರ (ನ. 22)  ಚನ್ನಪಟ್ಟಣದ ಮುದುಗೆರೆ ಬಳಿ ಅವಘಡ ಸಂಭವಿಸಿದೆ. ಕಾರ್ ನಲ್ಲಿದ್ದ 6 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಹತ್ತಿರದಲ್ಲಿಯೇ ಇದ್ದ ಸಂಸದ ಪ್ರತಾಪ್ ಸಿಂಹ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.  ಈ ಮೊದಲು ಸಂಸದ ಪ್ರತಾಪ್ ಸಿಂಹ (Pratap Simha) ಅವರ ಕಾರು ಮುದುಗೆರೆ ಬಳಿ(Accident)  ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿದೆ ಎಂದು ವರದಿಯಾಗಿತ್ತು.

ಚನ್ನಪಟ್ಟಣದ(Ramanagara) ಮುದುಗೆರೆ ಬಳಿ ಅವಘಡ ಸಂಭವಿಸಿದೆ.  ಕಾರ್ ನಲ್ಲಿದ್ದ 6 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಸಂಸದ ಪ್ರತಾಪ್ ಸಿಂಹ  ತಕ್ಷಣ ನೆರವಿಗೆ ಧಾವಿಸಿದ್ದಾರೆ.

ಬೆಂಗಳೂರಿನಿಂದ (Bengaluru) ಮೈಸೂರಿಗೆ (Mysuru) ತೆರಳುವಾಗ ಅಪಘಾತ ಸಂಭವಿಸಿದೆ. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಈ ವೇಳೆ ಪಕ್ಕದ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ಪ್ರತಾಪ್ ಸಿಂಹ ಅವರಿಗೆ ವಿಷಯ ಗೊತ್ತಾಗಿದೆ. ಅಪಘಾತ ನಡೆದ ತಕ್ಷಣ ಹೋಟೆಲ್ ನಿಂದ ಹೊರ ಬಂದ ಪ್ರತಾಪ್ ಸಿಂಹ ಗಾಯಳುಗಳನ್ನ ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ.

ನಿಂತಿದ್ದ ಕಾರ್ ಮೇಲೆ ಯಮನಾಗಿ ಬಂದ ಟ್ರಕ್

ಬಿಟ್ ಕಾಯಿನ್ ಯುದ್ಧ; ಸಂಸದ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ನಾಯಕ  ಪ್ರಿಯಾಂಕ್ ಖರ್ಗೆ ನಡುವೆ  ಬಿಟ್ ಕಾಯಿನ್ ಹಗರಣದ ವಿಚಾರದಲ್ಲಿ ಜಟಾಪಟಿ ನಡೆಯುತ್ತಲೇ ಇದೆ.  ಇಬ್ಬರು ನಾಯಕರು ಪರಸ್ಪರ ಆರೋಪಗಳನ್ನು ಮಾಡಿಕೊಂಡಿದ್ದು ವೈಯಕ್ತಿಕ ನೆಲೆಗಟ್ಟಿಗೂ ಬಂದು ನಿಂತಿದೆ. ಈ ನಡುವೆ ಕಲಬುರಗಿ ಸ್ವಾಮೀಜಿಗಳು ಅಖಾಡಕ್ಕೆ ಧುಮುಕಿದ್ದು ಪ್ರತಾಪ್ ಸಿಂಹ ಕ್ಷಮೆ ಕೇಳಬೇಕು ಇಲ್ಲವಾದರೆ ಅವರ ಮನೆಗೆ ಹೋಗಿ  ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದು ಬಳಸಬಾರದ ಪದಗಳನ್ನೆಲ್ಲ ಬಳಸಿಯಾಗಿದೆ. ಇಷ್ಟೆಲ್ಲ ರಾಜಕಾರಣ- ಗೊಂದಲ ಎಲ್ಲವೂ ಇದ್ದರೂ ಸಂಸದರು ಮಾತ್ರ ಮಾನವೀಯ ನೆಲೆಗಟ್ಟಿನಲ್ಲಿ ತಕ್ಷಣ ಸ್ಪಂದಿಸಿದ್ದಾರೆ. 

ಗೃಹ ಸಚಿವರ ಕಾರ್ಯ: ಗೃಹ ಸಚಿವ (Karnataka Home minister) ಆರಗ ಜ್ಞಾನೇಂದ್ರ (Araga Jnanendra) ಶಿವಮೊಗ್ಗಕ್ಕೆ (Shivmogga) ಬರುವಾಗ ಮಂಡಗದ್ದೆ ಬಳಿ ಕಾಡಿನಲ್ಲಿ ಬೈಕ್ ಅಪಘಾತವಾಗಿ (Acccident) ಎರಡು ಜನ ಗಂಭೀರ ಗಾಯಗೊಂಡಿದ್ದನ್ನು ಕಂಡಿದ್ದಾರೆ. ತಕ್ಷಣವೇ ತಮ್ಮ ವಾಹನ ನಿಲ್ಲಿಸಿ ಗಾಯಾಳು ಗಳ ನೆರವಿಗೆ ಧಾವಿಸಿದ್ದರು. ತಮ್ಮ ಎಸ್ಕಾರ್ಟ್ ವಾಹನದಲ್ಲಿ ಅಪಘಾತ ಕ್ಕೆ ಒಳಗಾದವರನ್ನು ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳಿಸಿಕೊಟ್ಟರು.

ಅಸ್ಪತ್ರೆಗೆ ಮಾಹಿತಿ ನೀಡಿ ಗಾಯಾಳು ಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದರು. ತೀರ್ಥಹಳ್ಳಿ ಮೂಲದ ಬೈಕ್ ಸವಾರರಿಬ್ಬರು ತೀವ್ರ ಗಾಯಾಳುಗಳಾಗಿದ್ದು ಮೆಗ್ಗಾನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ.    ಸಚಿವರೆ ಮುಂದಾಗಿ ನೆರವಿಗೆ ಧಾವಿಸಿದ್ದಾರೆ.  ಗಾಯಾಳುಗಳ ಪೂರ್ವಾಪರ  ವಿಚಾರಣೆ  ನಡೆಸಿದ್ದಾರೆ. ಸಚಿವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. 

ಭೀಕರ ಅಪಘಾತ; ಉತ್ತರ ಪ್ರದೇಶದ ಬಾರಾಬಂಕಿ ಬಳಿ ಸಮೀಪದ ಲಕ್ನೋ-ಅಯೋಧ್ಯಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 18 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ರಾಮ್ ಸನೇಹಿ ಘಾಟ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 1.30ಕ್ಕೆ  ಡಬಲ್ ಡೆಕ್ಕರ್ ಬಸ್‌ಗೆ  ಟ್ರಕ್‌ ಡಿಕ್ಕಿ ಹೊಡೆದು ಈ ದುರಂತವಾಗಿತ್ತು. ಹರ್ಯಾಣದ ಪಾಲ್ವಾಲ್‌ನಿಂದ ಹೊರಟು ಬಿಹಾರದ ಕಡೆಗೆ ಸಾಗುತ್ತಿದ್ದ ಬಸ್ ರಾತ್ರಿ 8 ಗಂಟೆ ಸುಮಾರಿಗೆ ಮಧ್ಯ ದಾರಿಯಲ್ಲಿ ಕೆಟ್ಟಿತ್ತು. ಹೀಗಾಗಿ ಚಾಲಕ ಬೇರೆ ವಿಧಿ ಇಲ್ಲದೇ ಇದನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿದ್ದ. ಆದರೆ ರಾತ್ರಿ ಸುಮಾರು 1.30ಕ್ಕೆ ಟ್ರಕ್ ಒಂದು ಡಬಲ್ ಡೆಕ್ಕರ್ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಅಪಾರ ಸಾವು ನೋವಿಗೆ ಕಾರಣವಾಗಿತ್ತು.

ಬೆಂಗಳೂರಿನಲ್ಲಿ ಅಕ್ಟೋಬರ್ ವೇಳೆ ಸರಣಿ ಅಪಘಾತಗಳು ಸಂಭವಿಸಿದ್ದವು, ಐಷಾರಾಮಿ ಕಾರಿ ಕೋರಮಂಗಲದಲ್ಲಿ ಪಲ್ಟಿಯಾದ ಪರಿಣಾಂ ಐವರು ಸಾವು ಕಂಡಿದ್ದರು. ಅತ್ಯಾಧಿನಿಕ ಕಾರಿನ ಏರ್ ಬ್ಯಾಗ್ ಓಪನ್ ಆಗದೆ ಇರುವುದರ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು. ಸೀಟ್ ಬೆಲ್ಟ್ ಧರಿಸದೆ ಇದ್ದ ಕಾರಣ ಪ್ರಯಾಣ ಮಾಡುತ್ತಿದ್ದವರು ಸಾವು ಕಂಡಿದ್ದರು. ಬೆಂಗಳೂರಿನ ವೈಟ್ ಫೀಲ್ಡ್ ಮೇತ್ಸೇತುವೆ ಮೇಲೆಯೂ ಘೋರ ಅವಘಡ ಸಂಭವಿಸಿತ್ತು. ಪೆಟ್ರೋಲ್ ಖಾಲಿಯಾಗಿದೆ ಎಂದು ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದ ಯುವಕ ಯುವತಿ ಮೇಲೆ ಮೃತ್ಯುವಾಗಿ ಬಂದ ಕಾರು ಹರಿದಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!