Drugs Mafia| ಬೆಂಗಳೂರಿಂದ ತಿರುವನಂತಪುರ, ವೆಲ್ಲೂರಿಗೆ ಕೊರಿಯರ್‌ನಲ್ಲಿ ಡ್ರಗ್ಸ್‌..!

By Kannadaprabha News  |  First Published Nov 22, 2021, 6:45 AM IST

*  ಎನ್‌ಸಿಬಿ ಕಾರ್ಯಾಚರಣೆ
*  2 ಕ್ವಿಂಟಾಲ್‌ ಗಾಂಜಾ ಸೇರಿ ಡ್ರಗ್ಸ್‌ ಜಪ್ತಿ, 6 ಸೆರೆ
*  ತೆಂಗಿನ ಸಸಿ ಮಣ್ಣಿನಲ್ಲಿ ಗಾಂಜಾ ಸಾಗಾಟ
 


ಬೆಂಗಳೂರು(ನ.22):  ದಕ್ಷಿಣ ಭಾರತದಲ್ಲಿ(South India) ಕೆಲ ದಿನಗಳಿಂದ ಚಂಡಮಾರುತ, ಭಾರಿ ಮಳೆಯ ಸಂದರ್ಭದ ಲಾಭ ಪಡೆದು ಬೆಂಗಳೂರು, ತಮಿಳುನಾಡು, ಕೇರಳ ಸೇರಿದಂತೆ ವಿವಿಧೆಡೆ ಮಾದಕವಸ್ತು ಅಕ್ರಮ ಸಾಗಾಟದ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ(NCB) 6 ಮಂದಿ ಡ್ರಗ್‌ ಪೆಡ್ಲರ್‌ಗಳನ್ನು(Drug Pedlers) ಬಂಧಿಸಿದೆ.

ಕಳೆದ ಕೆಲ ದಿನಗಳಿಂದ ಅಕ್ರಮವಾಗಿ ಮಾದಕವಸ್ತು ಸಾಗಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಎನ್‌ಸಿಬಿ ಅಧಿಕಾರಿಗಳು ಬೆಂಗಳೂರು(Bengaluru), ತಿರುವನಂತಪುರ(Thiruvananthapuram) ಮತ್ತು ವೆಲ್ಲೂರಿನಲ್ಲಿ(Vellur) ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ(Arrest). ಮೂರು ಪ್ರತ್ಯೇಕ ಪ್ರಕರಣಗಳಿಂದ 244 ಗ್ರಾಂ ಆಂಫೆಟಮೈನ್‌, 25 ಎಲ್‌ಎಸ್‌ಡಿ, 2 ಗ್ರಾಂ ಮೆಥಾಕ್ವಿಲೋನ್‌, 44 ಗ್ರಾಂ ಮೆಥಫಿಟಮೈನ್‌, 212.5 ಕೆ.ಜಿ. ಗಾಂಜಾ ಮತ್ತು 2 ವಾಹನ ಜಪ್ತಿ ಮಾಡಿರುವುದಾಗಿ ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಡ್ರಗ್ಸ್‌ ಕೇಸಲ್ಲಿ ವಾಟ್ಸಾಪ್‌ ಚಾಟ್‌ ಮಾತ್ರವೇ ಸಾಕ್ಷಿಯಲ್ಲ: ಕೋರ್ಟ್‌

ಬೆಂಗಳೂರಿನಿಂದ ಕೊರಿಯರ್‌(Courier) ಮೂಲಕ ತಿರುವನಂತಪುರದ ಕಡೆಗೆ ಆಂಫೆಟಮೈನ್‌ ಡ್ರಗ್ಸ್‌ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಬೆಂಗಳೂರು ವಿಭಾಗದ ಎನ್‌ಸಿಬಿ ಅಧಿಕಾರಿಗಳು, ನ.11ರಂದು ಕಾರ್ಯಾಚರಣೆ ನಡೆಸಿ 40 ಗ್ರಾಂ ಮೆಥಫಿಟಮೈನ್‌ ಡ್ರಗ್ಸ್‌(Drugs) ಜಪ್ತಿ ಮಾಡಿದ್ದಾರೆ. ಅಂತೆಯೆ ಕೊರಿಯರ್‌ ಸ್ವೀಕರಿಸುತ್ತಿದ್ದ ತಿರುವಂತಪುರದ ಪೆಡ್ಲರ್‌ ಬಗ್ಗೆ ಅಲ್ಲಿನ ಎನ್‌ಸಿಬಿ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ.

ಬೆಂಗಳೂರು ಎನ್‌ಸಿಬಿ ಘಟಕದಿಂದ ಮಾಹಿತಿ ಪಡೆದ ಕೊಚ್ಚಿನ ಎನ್‌ಸಿಬಿ ಅಧಿಕಾರಿಗಳು ನ.16ರಂದು ತಿರುವನಂತಪುರಂನಲ್ಲಿ ಕಾರ್ಯಾಚರಣೆ ನಡೆಸಿ ಮಾದಕವಸ್ತು ಜಪ್ತಿ ಮಾಡಿದ್ದಾರೆ. ಈ ವೇಳೆ ಕೊರಿಯರ್‌ ಪಾರ್ಸೆಲ್‌ನಲ್ಲಿ ಚ್ಯೂಯಿಂಗ್‌ ಗಮ್‌, ಚಾಕಲೆಟ್‌ಗಳಲ್ಲಿ ಮಾದಕವಸ್ತು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ತೆಂಗಿನ ಸಸಿ ಮಣ್ಣಿನಲ್ಲಿ ಗಾಂಜಾ ಸಾಗಾಟ

ಮತ್ತೊಂದು ಪ್ರಕರಣದಲ್ಲಿ ಆಂಧ್ರಪ್ರದೇಶದಿಂದ(Andhra Pradesh) ತಮಿಳುನಾಡು(Tamil Nadu) ಕಡೆ ದೊಡ್ಡ ಪ್ರಮಾಣದಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಮಾಹಿತಿ ಮೇರೆಗೆ ಚೆನ್ನೈ(Chennai) ವಿಭಾಗದ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿ 212 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ. ತೆಂಗಿನ ಸಸಿ ಮಣ್ಣಿನಲ್ಲಿ ಸಣ್ಣ ಪ್ಯಾಕೇಟ್‌ಗಳಲ್ಲಿ ಗಾಂಜಾ ಬಚ್ಚಿಟ್ಟು ಈರೋಡ್‌ಗೆ ಸಾಗಿಸಿ ಮನೆಯಲ್ಲಿ ಸಂಗ್ರಹಿಸಿದ್ದ ಇಬ್ಬರು ಆರೋಪಿಗಳು(Accused) ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಡುರಸ್ತೆಯಲ್ಲೇ ಮಾದಕ ವಸ್ತು ಮಾರಾಟ..!

ಬೆಂಗಳೂರು ವ್ಯಾಪಾರ ವೀಸಾದಡಿ(Visa) ನಗರಕ್ಕೆ ಬಂದು ಮಾದಕವಸ್ತು ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಗೆ ಇಳಿದಿದ್ದ ನೈಜೀರಿಯಾ ಮೂಲದ ಡ್ರಗ್‌ ಪೆಡ್ಲರ್‌ನನ್ನು ಕೇಂದ್ರ ಅಪರಾಧ ವಿಭಾಗ(CCB) ಪೊಲೀಸರು ಅ.27 ರಂದು ಬಂಧಿಸಿದ್ದಾರೆ.

‘ಫಾರಿನ್‌ ಡ್ರಗ್ಸ್‌’ ಅಡ್ಡವಾದ ಸಿಲಿಕಾನ್‌ ಸಿಟಿ..!

ಒಎಂಬಿಆರ್‌ ಲೇಔಟ್‌ ನಿವಾಸಿ ಜೋ(45) ಬಂಧಿತ. ರಾಮಮೂರ್ತಿನಗರ ಪೊಲೀಸ್‌(Police) ಠಾಣೆ ವ್ಯಾಪ್ತಿಯಲ್ಲಿ ಡ್ರಗ್‌ ಪೆಡ್ಲಿಂಗ್‌(Drug Pedling) ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಂಗಳವಾರ ಮನೆಯ ಮೇಲೆ ದಾಳಿ(Raid) ಆತನನ್ನು ಬಂಧಿಸಲಾಗಿದೆ. ಈ ವೇಳೆ ಸುಮಾರು .20 ಲಕ್ಷ ಮೌಲ್ಯದ 100 ಎಂಡಿಎಂಎ ಕ್ರಿಸ್ಟೆಲ್‌, 200 ಎಂಡಿಎಂಎ ಎಕ್ಸ್‌ಟೆಸಿ ಮಾತ್ರೆಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್‌ ಫೋನ್‌ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು(CCB Police) ತಿಳಿಸಿದ್ದರು.

ಆರೋಪಿ(Accused) ಜೋ 2019ರಲ್ಲಿ ಬಿಜಿನೆಸ್‌ ವೀಸಾದಡಿ(Business Visa) ನಗರಕ್ಕೆ ಬಂದಿದ್ದು, ಡ್ರಗ್‌ ಪೆಡ್ಲಿಂಗ್‌ಗೆ ಇಳಿದಿದ್ದ. ಗೋವಾದಲ್ಲಿ(Goa) ನೆಲೆಸಿರುವ ಈತನ ಸಹಚರ ಡ್ರಗ್‌(Drugs) ಪೆಡ್ಲರ್‌, ಪೋಲ್ಯಾಂಡ್‌ನಿಂದ ಅಂಚೆ ಮೂಲಕ ಮಾದಕ ವಸ್ತುಗಳನ್ನು ಗೋವಾಗೆ ತರಿಸಿಕೊಂಡು ಬಳಿಕ ದೇಶದ ವಿವಿಧ ನಗರಗಳಲ್ಲಿರುವ ಸಬ್‌ ಡೀಲರ್‌ಗಳಿಗೆ ಪೂರೈಸುತ್ತಿದ್ದ. ಆರೋಪಿ ಜೋ ಈತನಿಂದ ಎಂಡಿಎಂಎ ಕ್ರಿಸ್ಟೆಲ್‌ ಹಾಗೂ ಎಂಡಿಎಂಎ ಎಕ್ಸ್‌ಟೆಸಿ ಮಾತ್ರೆಗಳನ್ನು ಖರೀದಿಸುತ್ತಿದ್ದ. ಬಳಿಕ ನಗರದ ಐಟಿ-ಬಿಟಿ ಉದ್ಯೋಗಿಗಳು(IT-BT Employees) ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ(Students) ಮಾರಾಟ ಮಾಡಿ ಅಕ್ರಮ ಹಣ ಸಂಪಾದಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದರು. 
 

click me!