
ರಾಜಸ್ಥಾನ (ಜು. 22): ಮುಸ್ಲಿಂ ಯುವಕನೊಬ್ಬ ನಕಲಿ ಗುರುತು ಬಳಿಸಿ ಹಿಂದೂ ಯುವತಿಯೊಂದಿಗೆ ಸ್ನೇಹ ಬೆಳೆಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಶಾಹಿದ್ ಖಾನ್ ಎಂದು ಗುರುತಿಸಲಾದ ಮುಸ್ಲಿಂ ವ್ಯಕ್ತಿ 'ಮನೀಷ್ ಸೇನ್' ಎಂಬ ನಕಲಿ ಗುರುತನ್ನು ಹೊಂದಿದ್ದು ಹಿಂದೂ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದ. ಬಳಿಕ ಆಕೆಯನ್ನು ತನ್ನ ಮನೆಗೆ ಆಹ್ವಾನಿಸಿ ಅಲ್ಲಿ ಆಕೆಗೆ ಮಾದಕ ದ್ರವ್ಯ ಕುಡಿಸಿ ಆಕೆಯ ಅಶ್ಲೀಲ ಫೋಟೋಗಳನ್ನು ತೆಗೆದಿದ್ದಾನೆ. ನಂತರ ಆರೋಪಿ ಈ ಚಿತ್ರಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಮುಂದಾಗಿದ್ದು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೊಬೈಲ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಈ ಯುವಕ, ಪಾಲಿನ ಬಂಗಾರ್ ಕಾಲೇಜಿನ ವಿದ್ಯಾರ್ಥಿ ರಾಜಕಾರಣದಲ್ಲೂ ಸಕ್ರಿಯನಾಗಿದ್ದ. 2014-15ರಲ್ಲಿ ಬಂಗಾರ್ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿಯೂ ಗೆಲುವು ಸಾಧಿಸಿದ್ದ.
ಇದಲ್ಲದೆ ಯುವಕ ಎನ್‌ಎಸ್‌ಯುಐನ (NSUI) ಸಕ್ರಿಯ ಕಾರ್ಯಕರ್ತ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ಕಳೆದ 10 ವರ್ಷಗಳಲ್ಲಿ ಆರೋಪಿ ಪಾಲಿ ಮತ್ತು ಭಿಲ್ವಾರದಲ್ಲಿ ಬೇರೆ ಬೇರೆ ಹೆಸರುಗಳೊಂದಿಗೆ ವಾಸಿಸುತ್ತಿರುವುದಾಗಿ ತಿಳಿದುಬಂದಿದೆ.
"ಸಂತ್ರಸ್ತೆ ಆರೋಪಿಯೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹ ಬೆಳೆಸಿದ್ದಳು. ಫೇಸ್‌ಬುಕ್‌ನಲ್ಲಿ ನಕಲಿ ಖಾತೆಯಿಂದ ಆರೋಪಿ ಆಕೆಗೆ ವಿನಂತಿಯನ್ನು ಕಳುಹಿಸಿದ್ದು (Friend Request) ಆತ ಕಳೆದ 5 ತಿಂಗಳಿಂದ ಚಾಟ್ ಮಾಡುತ್ತಿದ್ದ" ಎಂದು ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಪ್ರಭಾರಿ ಮುಖೇಶ್ ಕುಮಾರ್ ವರ್ಮಾ ಹೇಳಿದ್ದಾರೆ.
ಫೇಸ್‌ಬುಕ್ ಫ್ರೆಂಡ್ ಭೇಟಿಯಾಗಲು ಬಂದ ಅಮೆರಿಕದ ಟಿಕ್‌ಟಾಕರ್, ಪಾಕಿಸ್ತಾನಿ ಸ್ನೇಹಿತರಿಂದ ಗ್ಯಾಂಗ್‌ರೇಪ್!
ಆರೋಪಿಯು ಯುವತಿಯನ್ನು ತನ್ನ ಕೋಣೆಗೆ ಕರೆದು ಮದ್ಯಪಾನ ಮಾಡಿಸಿ ನಂತರ ಆಕೆಯ ಅಶ್ಲೀಲ ಫೋಟೋ ತೆಗೆದಿರುವುದಾಗಿ ಬೆದರಿಕೆ ಹಾಕಲು ಆರಂಭಿಸಿದ್ದ. ಈ ಬೆದರಿಕೆಯ ಆಧಾರದ ಮೇಲೆ ಆಕೆಗೆ ಬಲವಂತವಾಗಿ ಕಿರುಕುಳ ನೀಡಿದ್ದ. ಯುವತಿ ತನ್ನ ಕುಟುಂಬಕ್ಕೆ ತನಗಾದ ಸಂಕಟವನ್ನು ವಿವರಿಸಿದ್ದು, ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಮತ್ತು ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ.
ಆಧಾರ್ ಕಾರ್ಡ್ ಎಡಿಟ್ ಮಾಡಿ ಹೆಸರು ಬದಲಾವಣೆ: ಯುವಕನ ಕೊಠಡಿಯಲ್ಲಿ ತಪಾಸಣೆ ನಡೆಸಿದಾಗ ನಕಲಿ ದಾಖಲೆ ಪತ್ರಗಳು ಹಾಗೂ ಆಧಾರ್ ಕಾರ್ಡ್ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನ ಕೊಠಡಿಯ ಹುಡುಕಾಟದಲ್ಲಿ ಪಾಲಿನ ಬಾದಶಾ ಝಂಡಾ ನಿವಾಸಿ ಮೊಹಮ್ಮದ್ ಶಾಹಿದ್ ಘೋರಿ ಎಂಬುವವರ ಹಲವು ದಾಖಲೆಗಳು ಪತ್ತೆಯಾಗಿವೆ. ನಕಲಿ ಆಧಾರ್ ಕಾರ್ಡ್‌ನಲ್ಲಿ ಶಾಹಿದ್ ಫೋಟೋ ಮತ್ತು ಮನೀಶ್ ಸೇನ್ ಹೆಸರು ಬರೆಯಲಾಗಿತ್ತು.
ಪೊಲೀಸರು ಆರೋಪಿಯನ್ನು ಮೊಬೈಲ್ ಕಂಪನಿ ಕಚೇರಿಯಿಂದ ವಶಕ್ಕೆ ಪಡೆದಾಗ, ಅವನ ನಿಜವಾದ ಗುರುತು ಮತ್ತು ಹೆಸರು ಪತ್ತೆಯಾಗಿದೆ. ತನಿಖೆ ವೇಳೆ ಆರೋಪಿ ಭಿಲ್ವಾರದ ಪಂಚವಟಿಯಲ್ಲಿ ಮನೀಶ್ ಹೆಸರಿನಲ್ಲಿ ಕೋಣೆಯನ್ನು ಬಾಡಿಗೆಗೆ ಪಡೆದಿರುವುದೂ ಪತ್ತೆಯಾಗಿದೆ.
ಕನಕಪುರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: 24 ವರ್ಷದ ಯುವಕ ಅರೆಸ್ಟ್
ಕೋಣೆಯ ಮಾಲೀಕರು ಗುರುತಿನ ದಾಖಲೆಗಳನ್ನು ಕೇಳುತ್ತಿದ್ದಾಗ ಆರೋಪಿ ಪ್ರತಿ ಬಾರಿ ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದ. ಕೊನೆಗೆ ಆತನಿಂದ ಬೇಸತ್ತ ಮಾಲೀಕ ಮನೆಯಿಂದ ಹೊರಹಾಕಲು ನಿರ್ಧರಿಸಿದ್ದ. ಆದರೆ ಶಾಹಿದ್‌ನನ್ನು ಯುವತಿ ಜೊತೆಗೆ ನೋಡಿದಾಗ ಇಡೀ ವಿಷಯ ಬೆಳಕಿಗೆ ಬಂದಿದೆ .
ಮೊಬೈಲ್‌ನಲ್ಲಿ ಯುವತಿಯ ಫೋಟೋ ಪತ್ತೆ: ಶಾಹಿದ್‌ನ ಮೊಬೈಲ್‌ನಿಂದ ಸಂತ್ರಸ್ತ ಯುವತಿಯ ಹಲವು ಫೋಟೋಗಳು ಪೊಲೀಸರಿಗೆ ಸಿಕ್ಕಿವೆ. ಈತ ಸಾಮಾಜಿಕ ಜಾಲತಾಣಗಳ ಮೂಲಕ ಹಲವು ಹುಡುಗಿಯರಿಗೆ ವಂಚಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಆರೋಪಿಯನ್ನು ಎರಡು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ