ಉತ್ತರಪ್ರದೇಶ: ಗ್ರಾಮ ದೇವಸ್ಥಾನಕ್ಕೆ ದಲಿತರ ಪ್ರವೇಶ ನಿರ್ಬಂಧ: ಜೀವ ಬೆದರಿಕೆ

By Suvarna NewsFirst Published Jul 22, 2022, 8:07 PM IST
Highlights

Uttar Pradesh: ಗ್ರಾಮದ ದೇವಸ್ಥಾನಕ್ಕೆ ತಮಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ದಲಿತ ಸಮುದಾಯಕ್ಕೆ ಸೇರಿದ ಜನರು ಆರೋಪಿಸಿದ್ದಾರೆ. 
 

ಆಗ್ರಾ (ಜು. 22): ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ದಲಿತ ಸಮುದಾಯಕ್ಕೆ ಸೇರಿದ ಜನರು ಸೋಮವಾರ ಗ್ರಾಮದ ದೇವಸ್ಥಾನಕ್ಕೆ ತಮಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿರುವ ದೇವಸ್ಥಾನಕ್ಕೆ ಮೇಲ್ಜಾತಿ ಜನರು ಪ್ರವೇಶ ನಿಷೇಧಿಸಿದ್ದಾರೆ ಎಂದು ದಲಿತ ಸಮುದಾಯದವರು ಆರೋಪಿಸಿದ್ದಾರೆ.  ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಆದರೆ ಈ ಆರೋಪಗಳು ಆಧಾರರಹಿತವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಇಟಾಹ್ ಜಿಲ್ಲೆಯ ಮರ್ಹರಾ ಬ್ಲಾಕ್‌ನ ಹಿಮ್ಮತ್‌ನಗರ ಬಜೆರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಗ್ರಾಮದ 1150 ಜನರಲ್ಲಿ 600 ಮಂದಿ ದಲಿತರು ಇದ್ದಾರೆ.  ಕಳೆದ ಒಂದು ತಿಂಗಳ ಹಿಂದೆ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ ದಲಿತ ಸಮುದಾಯದ 12 ಮಂದಿಯನ್ನು ಥಳಿಸಲಾಗಿದೆ ಎಂದು ದೇವಸ್ಥಾನದ ಮಾಜಿ ಉಸ್ತುವಾರಿ ಮಥುರಾ ಪ್ರಸಾದ್ ಹೇಳಿದ್ದಾರೆ.

Latest Videos

ಈ ದೇವಾಲಯವನ್ನು ಸುಮಾರು 10 ವರ್ಷಗಳ ಹಿಂದೆ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಇನ್ನು ಈ ಘಟನೆ ಬೆನ್ನಲ್ಲೇ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಮುದಾಯದವರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. 

ಮೇಲ್ಜಾತಿಯವರು ದೇವಸ್ಥಾನವನ್ನು ಅತಿಕ್ರಮಣ ಮಾಡಿದ್ದಾರೆ ಮತ್ತು ಅವರಿಗೆ ಪ್ರವೇಶ ಮತ್ತು ಪೂಜೆಯನ್ನು ನಿಷೇಧಿಸಿದ್ದಾರೆ ಎಂದು ದಲಿತ ಸಮುದಾಯದವರು ಆರೋಪಿಸಿದ್ದಾರೆ. ಅಲ್ಲದೇ ದೇವಸ್ಥಾನ ಪ್ರವೇಶಿಸಲು ಮುಂದಾದರೆ ಕೊಲೆ ಮಾಡುವುದಾಗಿ ಮೇಲ್ಜಾತಿಯ ಪ್ರಬಲರು ಬೆದರಿಕೆ ಹಾಕಿದ್ದರೆ ಎಂದು ಆರೋಪಿಸಿದ್ದಾರೆ.

ದಲಿತರೆಂದು ಮನೆಯೊಳಗೆ ಸೇರಿಸಲ್ಲ ಸರ್..ಹೇಗೆ ಕೆಲಸ ಮಾಡ್ಲಿ, ಆಶಾ ಕಾರ್ಯಕರ್ತೆ ಕಣ್ಣೀರು

ದೇವಸ್ಥಾನದ ಅರ್ಚಕನಿಗೆ ವ್ಯಕ್ತಿಗಳು ಥಳಿಸಿ ಬಲವಂತವಾಗಿ ರಜೆ ಹಾಕಿಸಿದ್ದಾರೆ ಎಂದು ದಲಿತ ಸಮುದಾಯದ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳೊಂದಿಗೆ ಪೊಲೀಸರು ಕೈಜೋಡಿಸಿದ್ದಾರೆ ಎಂದು ದಲಿತ ಗ್ರಾಮಸ್ಥರು ಆರೋಪಿಸಿದ್ದಾರೆ. 

ದೂರು ನೀಡಿದರೂ ಎಫ್‌ಐಆರ್‌ ದಾಖಲಿಸಿಲ್ಲ ಎಂದು ಅವರು ತಿಳಿಸಿದ್ದಾಎರ. ದಲಿತ ಸಮುದಾಯದವರು ತಮ್ಮ ಸಮಸ್ಯೆಗಳನ್ನು  ಮುನ್ನೆಲೆಗೆ ತರಲು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಯಿತು ಎಂದು ತಿಳಿಸಿದ್ದಾರೆ. 

click me!