
ಉಡುಪಿ, (ಜುಲೈ.22): ಕರವಾಳಿ ಭಾಗದಲ್ಲಿ ಹೆಚ್ಚಾಗಿ ಲವ್ ಜಿಹಾದ್ ಪ್ರಕರಣಗಳು ಕಂಡುಬಂದಿವೆ. ಇದರ ಮಧ್ಯೆ ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಯುವತಿಯನ್ಉ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದಾನೆ.
ಈ ವಿಷಯ ತಿಳಿದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ನಡೆದಿದೆ.
ಹೌದು.... ಬೈಂದೂರು ತಾಲೂಕಿನ ಉಪ್ಪುಂದ ನಂದನವನ ವಸತಿ ಗೃಹಕ್ಕೆ ಭಿನ್ನಮತೀಯ ಜೋಡಿಗಳು ಹೋಗಿವೆ. ವಿಷಯ ತಿಳಿದು ಹಿಂದೂ ಸಂಘಟನೆಯ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ಬೈಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.
ಮದುವೆಯಾಗೋದಾಗಿ ನಂಬಿಸಿ ಸೆಕ್ಸ್ ಮಾಡಿದ ಎಲ್ಲಾ ಪ್ರಕರಣ ರೇಪ್ ಅಲ್ಲ; ಹೈಕೋರ್ಟ್!
ಉಳ್ಳಾಲದ ಉಳ್ಳಾಲ ಬೈಲು ನಿವಾಸಿ ಅಮೀರ್ ಅಲಿ(45), ಉಳ್ಳಾಲದ 28 ವರ್ಷದ ಯುವತಿಯೊಂದಿಗೆ ಆಗಮಿಸಿದ್ದರು. ಅಮೀರ್ ಅಲಿ ಗುಜರಿ ವ್ಯಾಪಾರಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕುಟ್ಟುವಿನಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದಾನೆ.
ಯುವತಿ ಆತನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆಕೆಯ ಒಪ್ಪಿಗೆಯಿಂದಲೇ ಲಾಡ್ಜ್ ಗೆ ಕರೆತಂದಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸುವ ಎಲ್ಲಾ ಪ್ರಕರಣಗಳು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ದೆಹಲಿ ಹೈಕೋರ್ಟ್ ಹೇಳಿದೆ. ಮದುವೆಯ ನಂಬಿಕೆಯೊಂದಿಗೆ ಮಹಿಳೆ ಸುದೀರ್ಘ ದಿನಗಳ ಕಾಲ ಪುರುಷನ ಜೊತೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದರೆ, ಇಂತಹ ಎಲ್ಲಾ ಪ್ರಕರಗಳು ರೇಪ್ ಪ್ರಕರಣ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದ್ರೆ, ಈ ಯುವತಿ ಒಪ್ಪಿಗೆ ಮೇರೆಗೆ ಆತನೊಂದಿಗೆ ಲಾಡ್ಜ್‌ಗೆ ಹೋಗಿದ್ದಾಳೆಯೇ? ಅಥವಾ ಯಾವುದೋ ಬ್ಲ್ಯಾಕ್ ಮೇಲ್ ಮಾಡಿ ಆಕೆಯನ್ನು ಕರೆದೊಯ್ದಿದ್ದಾನೆ ಎನ್ನುವುದು ಪೊಲೀಸ್ ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ