Belagavi Crime: ಗುಟಕಾ ತಿಂದು ಉಗಿದಿದ್ದಕ್ಕೆ ಕೊಲೆ: ಕುಡಿದ ಮತ್ತಿನಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿದ ಕ್ರೂರಿ

By Sathish Kumar KHFirst Published Jan 2, 2023, 1:45 PM IST
Highlights

ಗುಟಕಾ ತಿನ್ನುವುದು ಆರೋಗ್ಯಕ್ಕೆ ಹಾನಿಕರ ಎನ್ನುವುದು ನಮಗೆ ಈವರೆಗೆ ತಿಳಿದಿರುವ ಸಂಗತಿಯಾಗಿದೆ. ಆದರೆ, ಬೆಳಗಾವಿ ಜಿಲ್ಲೆಯ ಅನಿಗೋಳ ಗ್ರಾಮದಲ್ಲಿ ಇದೇ ಗುಟಕಾವನ್ನು ತಿಂದು ಉಗಿದ ವಿಚಾರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಬೆಳಗಾವಿ (ಜ.02):  ಉತ್ತರ ಕರ್ನಾಟಕದ ಬಹುತೇಕ ಗ್ರಾಮೀಣ ಯುವಕರು ಗುಟಕಾ ತಿನ್ನುವುದನ್ನು ಸಮಾನ್ಯ ಸಂಗತಿ ಆಗಿದೆ. ಆದರೆ, ಇದು ಆರೋಗ್ಯಕ್ಕೆ ಹಾನಿಕರ ಎನ್ನುವುದು ನಮಗೆ ಈವರೆಗೆ ತಿಳಿದಿರುವ ಸಂಗತಿಯಾಗಿದೆ. ಆದರೆ, ಈಗ ಇದೇ ಗುಟಕಾವನ್ನು ತಿಂದು ಉಗಿದ ವಿಚಾರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಅನಿಗೋಳ ಗ್ರಾಮದಲ್ಲಿ ತಡರಾತ್ರಿ ಮಂಜುನಾಥ ಸುಣಗಾರ(45) ಹತ್ಯೆಯಾದ ವ್ಯಕ್ತಿಯಾಗಿದ್ದಾನೆ. ಈ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ನಡೆದಿದ್ದು, ಕುಡಿದ ಮತ್ತಿನಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕ್ಷುಲ್ಲಕ ಕಾರಣಕ್ಕೆ ಮಂಜುನಾಥ ಸುಣಗಾರನನ್ನು ಹತ್ಯೆಗೈದ ಆರೋಪಿ ಅಜಯ್ ಹಿರೇಮಠ ಪರಾರಿ ಆಗಿದ್ದಾನೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಜಯ್ ಹಿರೇಮಠಗಾಗಿ ಮುಂದುವರಿದ ಶೋಧ ಕಾರ್ಯ ಮುಂದುವರೆಸಿದ್ದಾರೆ.

New Year Party: ಹೊಸ ವರ್ಷ ಸಂಭ್ರಮಾಚರಣೆ ವೇಳೆ ಗನ್‌ಫೈರ್‌: ಗುಂಡು ಹಾರಿಸಿದ-ತಗುಲಿದ ಇಬ್ಬರೂ ಸಾವು

ಘಟನೆ ನಡೆದಿದ್ದಾದರೂ ಹೇಗೆ?: ಬೈಲಹೊಂದಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ನಿನ್ನೆ ರಾತ್ರಿ ಮಂಜುನಾಥ ಸುಣಗಾರ ಮತ್ತು ಅಜಯ್ ಹಿರೇಮಠ ಇಬ್ಬರೂ ಸೇರಿ ಮದ್ಯಪಾನ ಮಾಡಿದ್ದಾರೆ. ನಂತರ ಗ್ರಾಮದಲ್ಲಿರುವ ಪಾನ್ ಶಾಪ್ ಬಳಿ ನಿಂತಿದ್ದಾರೆ. ಈ ವೇಳೆ ಗುಟಕಾ ತಿಂದು ಉಗಿದ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ಆರಂಭವಾಗಿದೆ. ಈ ಗಲಾಟೆಯಲ್ಲಿ ಅಜಯ್‌ ಹಿರೇಮಠ, ಮಂಜುನಾಥನನ್ನು ನೆಲಕ್ಕೆ ಕಡವಿ ಹಾಕಿದ್ದಾನೆ. ನಂತರ ಪಕ್ಕದಲ್ಲಿಯೇ ಇದ್ದ ದೊಡ್ಡ ಕಲ್ಲನ್ನು ಎತ್ತಿಕೊಂಡು ಬಂದು ಕೆಳಗೆ ಬಿದ್ದು ಒದ್ದಾಡುತ್ತಿದ್ದ ಮಂಜುನಾಥ ಸಣಗಾರನ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಗುಟಕಾ ತಿಂದು ಎಲ್ಲೆಂದರಲ್ಲಿ ಉಗಿದೀರಿ ಜೋಕೆ: ಉತ್ತರ ಕರ್ನಾಟಕದ ಜಿಲ್ಲೆಗಳಾದ ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಬೀದರ್, ಕಲಬುರಗಿ ಸೇರಿ ಜಿಲ್ಲೆಗಳಲ್ಲಿ ಗುಟಕಾ ಮತ್ತು ಅಡಿಕೆ ಎಲೆ ತಿನ್ನುವುದು ಸಾಮಾನ್ಯವಾಗಿದೆ. ಆದರೆ, ಹೀಗೆ ಗುಟಕಾ ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರ ಎನ್ನುವುದು ಗೊತ್ತಿದ್ದರೂ ಅದನ್ನು ಯಾರೊಬ್ಬರೂ ಕೇರ್‌ ಮಾಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಬಹುತೇಕ ಯುವಕರಿಂದ ವೃದ್ಧರವರೆಗೂ ಗುಟಕಾ ದಾಸರಾಗಿದ್ದಾರೆ. ಇನ್ನು ಇವರ ಗುಟಕಾ ಚಟದಿಂದ ಗ್ರಾಮದ ಬಹುತೇಕ ಬೀದಿಗಳು, ಊರಿನಲ್ಲಿ ಜನರು ಬಂದು ಕುಳಿತುಕೊಳ್ಳಲು ಇರುವ ಕಟ್ಟೆಗಳು, ದೇವಸ್ಥಾನ, ಬಸ್‌ ನಿಲ್ದಾಣ, ಪಾನ್‌ಶಾಪ್‌, ಬೀಡಾ ಅಂಗಡಿಗಳ ಬಳಿ ಗುಟಕಾ ತಿಂದು ಉಗಿದ ಹೊಲಸು ಘಾಟು ಇರುತ್ತದೆ. 

New year : ಹೊಸ ವರ್ಷದ ಸಂಭ್ರಮಾಚರಣೆಗೆ 2 ಬಲಿ

ಬಸ್‌ ಬಳಿ ಹೋಗುವವರಿಗೂ ಗುಟಕಾ ಸಂಕಟ: ಇನ್ನು ರೈಲು, ಬಸ್‌ಗಳಲ್ಲಿ ಕುಳಿತುಕೊಂಡು ಬೇರೊಬ್ಬರ ಮೇಲೆ ಗುಟಕಾ ಉಗಿದು ಹೊಡೆದಾಡಿಕೊಂಡ ಸಾಕಷ್ಟು ಘಟನೆಗಳು ನಡೆದಿವೆ. ಈಗ ಅದರ ಮುಂದುವರಿದ ಭಾಗವಾಗಿ ಒಂದು ಹೆಜ್ಜೆ ಮುಂದೆ ಹೋಗಿರುವ ಮದ್ಯ ವ್ಯಸನಿಗಳು ಗುಟಕಾ ತಿಂದು ಉಗಿದನೆಂದು ತನ್ನ ಪರಿಚಿತನನ್ನೇ ಕೊಲೆ ಮಾಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಅದು ಕೂಡ ರಸ್ತೆಯ ಮೇಲೆ ಬಿದ್ದು ಒದ್ದಾಡುವವನ ಮೇಲೆ ಕಲ್ಲು ಎತ್ತು ಹಾಕಿದ್ದು, ಮುಖ ಗುರುತು ಸಿಗದ ರೀತಿಯಲ್ಲಿ ಅಪ್ಪಚ್ಚಿಯಾಗಿದೆ.

click me!