Belagavi: ಮಲಗಿದಲ್ಲೇ ಶವವಾದ ಕಾವಿಧಾರಿ: ಕೊಲೆ ಶಂಕೆ..?

Published : Mar 26, 2022, 10:55 AM IST
Belagavi: ಮಲಗಿದಲ್ಲೇ ಶವವಾದ ಕಾವಿಧಾರಿ: ಕೊಲೆ ಶಂಕೆ..?

ಸಾರಾಂಶ

*   ಬೆಳಗಾವಿ ಜಿಲ್ಲೆಯ ಮುಗಳಖೋಡ ಪಟ್ಟಣದಲ್ಲಿ ನಡೆದ ಘಟನೆ *   ಕಾವಿಧಾರಿಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ *   ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹಾರೂಗೇರಿ ಪೊಲೀಸರು

ಚಿಕ್ಕೋಡಿ(ಮಾ.26):  ಕಾವಿಧಾರಿಯೊಬ್ಬ(Swamiji) ಮಲಗಿದಲ್ಲೇ ಶವವಾದ ಘಟನೆ ಬೆಳಗಾವಿ(Belagavi) ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಇಂದು(ಶನಿವಾರ) ನಡೆದಿದೆ. ಕಾವಿಧಾರಿ ಹೆಸರು ಇನ್ನೂ ತಿಳಿದು ಬಂದಿಲ್ಲ. ಮುಗಳಖೋಡ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಕಾವಿಧಾರಿ ರಾತ್ರಿ ತಂಗಿದ್ದರು.  

ತಲೆಗೆ ಗಂಭೀರಗಾಯವಾಗಿ ಸ್ಥಳದಲ್ಲೇ ಕಾವಿಧಾರಿ ಅಸುನೀಗಿದ್ದಾರೆ(Death). ಕಾವಿಧಾರಿಯ ಶವಕಂಡು ಮುಗಳಖೋಡ ಪಟ್ಟಣದ ಜನರು ಬೆಚ್ಚಿ ಬಿದ್ದಿದ್ದಾರೆ. ಮೃತ ಕಾವಿಧಾರಿ ಸಾರ್ವಜನಿಕರ ಬಳಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. 

ಮಲವಿಸರ್ಜನೆಗೆ ತೆರಳಿದ್ದ 8 ವರ್ಷದ ಕಂದನ ತಲೆ ಕಡಿದು, ರುಂಡದೊಂದಿಗೆ ಊರಿಡೀ ತಿರುಗಾಡಿದ!

ಕಾವಿಧಾರಿಯ ಕೊಲೆಗೆ(Murder) ನಿಖರವಾದ ಕಾರಣ ತಿಳಿದು ಬಂದಿಲ್ಲ. ಕಾವಿಧಾರಿಯ ಹತ್ಯೆ ಯಾಕಾಗಿರಬಹುದು ಎಂಬುದುಇ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಘಟನಾ ಸ್ಥಳಕ್ಕೆ ಹಾರೂಗೇರಿ ಪೊಲೀಸರು(Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಕಾರಿನಲ್ಲಿತ್ತಾ 70 ಲಕ್ಷ ಹಾರ್ಡ್‌ಕ್ಯಾಶ್?

ಬೆಳಗಾವಿ: ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಹತ್ಯೆ ಪ್ರಕರಣ ಸಂಬಂಧ ಎರಡನೇ ಹೆಂಡತಿ, ಆತನ ಬ್ಯುಸಿನೆಸ್ ಪಾರ್ಟ್ನರ್ 10 ಲಕ್ಷಕ್ಕೆ ಸುಪಾರಿ ನೀಡಿದ್ದು ಗೊತ್ತಿರೋ ವಿಚಾರ. ಮಾರ್ಚ್ 15ರಂದು ವಾಕಿಂಗ್‌ಗೆ ಅಂತಾ ಕಾರಿನಲ್ಲಿ ತೆರಳುತ್ತಿದ್ದ ರಾಜು ದೊಡ್ಡಬೊಮ್ಮನ್ನವರ್ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆದರೆ ಈಗ ಕೊಲೆಯಾದ ರಾಜು ಕಾರಿನಲ್ಲಿ 60 ರಿಂದ 70 ಲಕ್ಷ ಹಣ ಇತ್ತು ಅದನ್ನ ಆರೋಪಿಗಳ ಬಳಿ ಇದೆ ಅಂತಾ ನಮಗೆ ಅನುಮಾನ ಇದೆ ಅಂತಾ ರಾಜು ದೊಡ್ಡಬೊಮ್ಮನ್ನವರ್ ಅಣ್ಣನ ಮಗ ಅಖಿಲ್ ಆರೋಪಿಸಿದ್ದನು. 

ಕೊಲೆಯಾದ ರಾಜು ದೊಡ್ಡಬೊಮ್ಮನ್ನವರ್ ಮೊದಲನೇ ಹೆಂಡತಿ, ಮೂರನೇ ಹೆಂಡತಿ, ತಾಯಿ, ಅಣ್ಣನ ಮಗ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ಪ್ರಕರಣದಲ್ಲಿ ಮತ್ತಷ್ಟು ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಕುಳಗಳು ಇವೆಯಾ ಎಂಬ ಅನುಮಾನ ಕಾಡ್ತಿದೆ. ಕೊಲೆಯಾದ ರಾಜು ದೊಡ್ಡಬೊಮ್ಮನ್ನವರ್ ಅಣ್ಣನ ಮಗ ಅಖಿಲ್ ಹೇಳುವ ಪ್ರಕಾರ, 'ರಾಜು ದೊಡ್ಡಬೊಮ್ಮನ್ನವರ್ ವ್ಯವಹಾರದಲ್ಲಿ ನಮಗೆ ಮೋಸ ಮಾಡಿ ತಾನು ಮುಂದೆ ಹೋದ ಅಂತಾ ಪೊಲೀಸರ ಮುಂದೆ ಹೇಳಿಕೆ ನೀಡುತ್ತಿದ್ದರು. 

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ, ಬಿಜೆಪಿ ನಾಯಕನ ಪುತ್ರನ ಕೊಲೆಯಲ್ಲಿ ಅಂತ್ಯ!

ಆದರೆ ರಾಜು ಕೊಲೆಯಾದ ಮಾರನೇ ದಿನ ನನ್ನ ಹಾಗೂ ಮೊದಲನೇ ಹೆಂಡತಿ ಮಗನ ಮನೆಗೆ ಕರೆಯಿಸಿಕೊಂಡು ಮೂರನೇ ಹೆಂಡತಿ ದೀಪಾ ದುಡ್ಡಿನ ಸಲುವಾಗಿ ಕೊಲೆ ಮಾಡಿಸಿದ್ದಾಳೆ ಅಂತಾ ಮೈಂಡ್ ಡೈವರ್ಟ್ ಮಾಡಲು ಯತ್ನಿಸಿದರು. ಕಳೆದ ಕೆಲ ದಿನಗಳ ಹಿಂದೆ ಒಂದು ಕೋಟಿ ಹದಿನೈದು ಲಕ್ಷ ರೂಪಾಯಿಗೆ ಒಂದು ಆಸ್ತಿ ಮಾರಾಟ ಮಾಡಿದ್ರು. ಸೇಲ್ ಡೀಡ್ ಆದ್ಮೇಲೆ 95 ಲಕ್ಷ ಹಾರ್ಡ್ ಕ್ಯಾಶ್ ಪಡೆದಿದ್ದರಂತೆ. ಅಂದಾಜು 70 ಲಕ್ಷ ರೂಪಾಯಿ ಹಣ ರಾಜು ಬಳಿ ಇದೆ ಮನೆಯಲ್ಲಿರಬೇಕು ನೋಡು ಅಂತಾ ನಮಗೆ ಹೇಳಿದ್ದರು. 

ಮೂರನೇ ಹೆಂಡತಿ ಮೇಲೆ ಕೊಲೆ ಮಾಡಿದ್ದಾಳೆಂದು ಬಿಂಬಿಸಲು ಯತ್ನಿಸುತ್ತಿದ್ದರು. ಹೀಗಾಗಿ ಆ 70 ಲಕ್ಷ ಹಣವನ್ನು ಈ ಮೂವರೇ ಲಪಟಾಯಿಸಿದ್ದಾರೆ ಅಂತಾ ಅನುಮಾನ ಇದೆ. ಕಾರಿನಲ್ಲಿ 60 ರಿಂದ 70 ಲಕ್ಷ ಹಣ ಇತ್ತು. ರಾಜು ದೊಡ್ಡಬೊಮ್ಮನ್ನವರ್ ಕಾರಿನಲ್ಲಿಯೇ ದುಡ್ಡು ಇಡುತ್ತಿದ್ರು. ಪೊಲೀಸರು ಕಾರಿನಲ್ಲಿ ಹಣ ಇಲ್ಲ ಅಂತಾ ತಿಳಿಸಿದ್ರು. ಹೀಗಾಗಿ  ಆ ಹಣವನ್ನು ಆರೋಪಿಗಳಾದ ಎರಡನೇ ಹೆಂಡತಿ ಕಿರಣಾ, ಬ್ಯುಸಿನೆಸ್ ಪಾರ್ಟ್ನರ್‌ಗಳಾದ ಶಶಿಕಾಂತ, ಧರಣೇಂದ್ರ ಬಳಿಯೇ ಇದೆ' ಅಂತಾ ಅನುಮಾನ ವ್ಯಕ್ತಪಡಿಸಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!