Suicide Cases in Karnataka: ರೈಲಿಗೆ ಸಿಲುಕಿ ಜೋಡಿ ಆತ್ಮಹತ್ಯೆ: ಕಾರಣ ನಿಗೂಢ?

Published : Mar 26, 2022, 06:56 AM ISTUpdated : Mar 26, 2022, 08:04 AM IST
Suicide Cases in Karnataka: ರೈಲಿಗೆ ಸಿಲುಕಿ ಜೋಡಿ ಆತ್ಮಹತ್ಯೆ: ಕಾರಣ ನಿಗೂಢ?

ಸಾರಾಂಶ

*    ಪ್ರೇಮ ವಿವಾಹದ ಹಿನ್ನೆಲೆಯಲ್ಲಿ ಜೋಡಿ ಆತ್ಮಹತ್ಯೆ ಶಂಕೆ *   ಮೃತದೇಹ ನೋಡಿದ ಪೊಲೀಸರಿಗೆ ಮಾಹಿತಿ ನೀಡಿದ್ದ ಸಾರ್ವನಿಕರು *   ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು  

ಬೆಂಗಳೂರು(ಮಾ.26):  ಹೊರಮಾವು ಸಮೀಪ ರೈಲಿಗೆ(Railway) ಸಿಲುಕಿ ಯುವ ಜೋಡಿಯೊಂದು ಆತ್ಮಹತ್ಯೆಗೆ(Suicide) ಶರಣಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕನ್ನಮಂಗಲದ ಎನ್‌.ಚೇತನ(19) ಹಾಗೂ ಶಿರಿಚಂದ್ರ(20) ಮೃತ(Death) ದುರ್ದೈವಿಗಳು. ಬೆಂಗಳೂರಿನಿಂದ(Bengaluru) ಶುಕ್ರವಾರ ರಾತ್ರಿ 7.30ರಲ್ಲಿ ಹೊರಟ ಕಾಕಿನಾಡ ಎಕ್ಸ್‌ಪ್ರೆಸ್‌ ರೈಲಿಗೆ ಹೊರಮಾವು ಬಳಿ ಸಿಲುಕಿ ಈ ಇಬ್ಬರು ಸಾವನ್ನಪ್ಪಿದ್ದಾರೆ. ಪ್ರೇಮ ವಿವಾಹದ(Love Marriage) ಹಿನ್ನೆಲೆಯಲ್ಲಿ ಈ ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು(Police) ಶಂಕಿಸಿದ್ದಾರೆ.

ರೈಲ್ವೆ ಹಳಿಗಳ ಬಳಿ ರಾತ್ರಿ ಮೃತದೇಹ(Deadbody) ನೋಡಿದ ಸಾರ್ವನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಮೃತರ ಗುರುತು ಪತ್ತೆಯಾಗಿದೆ. ಈ ಸಂಬಂಧ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಮ್ ಸ್ಕೂಲಿಂಗ್ ಬಂಧನಕ್ಕೆ ಹೆದರಿ, 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ನಾಲ್ವರು!

ಅನಾರೋಗ್ಯದಿಂದ ಮನನೊಂದು ಯುವಕ ಆತ್ನಹತ್ಯೆಗೆ ಶರಣು

ಸಂಕೇಶ್ವರ(Sankeshwar): ಮಾನಸಿಕ ಅಸ್ವಸ್ಥತೆಯಿಂದ(Mental Illness) ಹಾಗೂ ಮೂರ್ಛೆರೋಗದಿಂದ ಬಳಲುತ್ತಿದ್ದ ಯುವಕ ಮನನೊಂದ ನೇಣುಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ .

ಸಂಕೇಶ್ವರ ಪಟ್ಟಣದ ಹೊಸ ಓಣಿ ನಿವಾಸಿ ಶಿವಾನಂದ ರಾಜೀವ ಶೆಡ್ಲ್ಯಾಳೆ (21) ಮೃತ ಯುವಕ. ಕಳೆದ ಆರು ತಿಂಗಳಿನಿಂದ ಈತ ಮಾನಸಿಕ ಅಸ್ವಸ್ಥತೆ ಹಾಗೂ ಮೂರ್ಛೆ ರೋಗದಿಂದ ಬಳಲುತ್ತಿದ್ದ. ಇದರಿಂದ ಮನನೊಂದ ಯುವಕ ಪಟ್ಟಣದ ಗೌರಿ ಹಳ್ಳದಲ್ಲಿ ನೇಣು ಬಿಗಿದುಕೊಂಡ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಸಂಕೇಶ್ವರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದಾಗ ಮಹಿಳಾ ಟೆಕ್ಕಿ ನೇಣಿಗೆ ಶರಣು

ಬೆಂಗಳೂರು: ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಹಿಳಾ ಟೆಕ್ಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಾ.24 ರಂದು ನಡೆದಿತ್ತು.

ಕೆಂಪಾಪುರದ ನಿಖಿಲಾ(37) ಆತ್ಮಹತ್ಯೆ ಮಾಡಿಕೊಂಡವರು. ಸಾಫ್ಟ್‌ವೇರ್‌ ಎಂಜಿನಿಯರ್‌(Software Engineer) ಆಗಿರುವ ನಿಖಿಲಾ 10 ವರ್ಷದ ಹಿಂದೆ ಅರ್ಜುನ್‌ ಎಂಬುವವರನ್ನು ವಿವಾಹವಾಗಿದ್ದರು. ಅರ್ಜುನ್‌ ಕಾರ್ಯ ನಿಮಿತ್ತ ಬುಧವಾರ ಮೈಸೂರಿಗೆ ಹೋಗಿದ್ದರು. ಹೀಗಾಗಿ ನಿಖಿಲಾ ಒಬ್ಬರೇ ಮನೆಯಲ್ಲಿದ್ದರು. ಬುಧವಾರ ರಾತ್ರಿ ನಿಖಿಲಾ ಅವರ ತಂದೆ ಕರೆ ಮಾಡಿದ್ದಾರೆ. ಆದರೆ, ನಿಖಿಲಾ ಕರೆ ಸ್ವೀಕರಿಸಿಲ್ಲ. ಇದರಿಂದ ಗಾಬರಿಗೊಂಡು ಸಂಬಂಧಿಕರೊಬ್ಬರಿಗೆ ಮನೆ ಬಳಿ ಹೋಗಿ ನೋಡುವಂತೆ ಸೂಚಿಸಿದ್ದಾರೆ. ಈ ವೇಳೆ ಸಂಬಂಧಿಕರು ಮನೆ ಬಳಿ ಬಂದು ನೋಡಿದಾಗ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದರು. 

Suicide Cases: ಕಾಪಿ ಹೊಡೆದಾಗ ಸಿಕ್ಕಿಬಿದ್ದ 8ನೇ ಕ್ಲಾಸ್‌ ವಿದ್ಯಾರ್ಥಿ ಆತ್ಮಹತ್ಯೆ

ನಿಖಿಲಾ ಮತ್ತು ಅರ್ಜುನ್‌ ದಂಪತಿ ಅನೋನ್ಯವಾಗಿದ್ದರು ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಯಾವುದೇ ಮರಣ ಪತ್ರ ಸಿಕ್ಕಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹೊಟ್ಟೆನೋವು ತಾಳಲಾರದೇ ವ್ಯಕ್ತಿ ಆತ್ಮಹತ್ಯೆ

ಕೊರಟಗೆರೆ: ಹೊಟ್ಟೆನೋವು ತಾಳಲಾರದೇ ವ್ಯಕ್ತಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಕೊರಟಗೆರೆ(Koratagere) ತಾಲೂಕಿನ ಕೋಳಾಲ ಹೋಬಳಿಯ ವೀರಸಾಗರ ಗ್ರಾಮದ ಲೇ.ಮುತ್ತಯ್ಯನ ಮಗನಾದ ರಂಗಶಾಮಯ್ಯ (65) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಳೆದ ಹಲವು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. 

ಬುಧವಾರ ತೀವ್ರವಾಗಿ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕೋಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ