ಚರ್ಚ್ ವಿರುದ್ಧ ಅವಹೇಳನ ಕಾರಿ ಪೋಸ್ ಹಾಕುತ್ತಿದ್ದ ಕೇರಳದ ಅಜೀಲ್, ಸಜ್ಜು ಫ್ರಾನ್ಸಿಸ್
ಶಿವಮೊಗ್ಗ(ಜು.25): ಕೇರಳದ ಎಂಪರರ್ ಇಮ್ಯಾನುಯಲ್ ಚರ್ಚ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಇಬ್ಬರ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂಬ ಅಂಶ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಜುಲೈ 17ರಂದು ಖಾಸಗಿ ಬಸ್‌ನಲ್ಲಿ ಮಂಗಳೂರಿನಿಂದ ಶಿವಮೊಗ್ಗಕ್ಕೆ ಅಕ್ರಮವಾಗಿ ಗಾಂಜಾವನ್ನು ಸಾಗಿಸುತ್ತಿದ್ದ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ತೀರ್ಥಹಳ್ಳಿ ಡಿವೈಎಸ್‌ಪಿ ಮತ್ತು ಸಿಬ್ಬಂದಿ ತಂಡ ತೀರ್ಥಹಳ್ಳಿ ತಾಲೂಕಿನ ಕೈಮರ ಬಸ್ ನಿಲ್ದಾಣಕ್ಕೆ ಬಂದಿದ್ದ ಖಾಸಗಿ ಬಸ್ ಅನ್ನು ತಪಾಸಣೆ ಮಾಡಿತ್ತು. ಆಗ ಬಸ್‌ನಲ್ಲಿದ್ದ .70 ಸಾವಿರ ಮೌಲ್ಯದ 2 ಕೆಜಿ 300 ಗ್ರಾಂ ತೂಕದ ಗಾಂಜಾವನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದರು.
ನಂತರ ತನಿಖೆ ನಡೆಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.22ರಂದು ಬೆಂಗಳೂರು ಮೂಲದ ನಿಸಾರ್, ಅಲೆಕ್ಸ್ ಎಂಬುವನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದರು. ಆಗ ಇವರಿಬ್ಬರೂ ಕೇರಳದ ಎಂಪರರ್ ಇಮ್ಯಾನುಯಲ್ ಚರ್ಚೆಯಲ್ಲಿ ಪ್ರಾರ್ಥನೆಗೆ ಹೋಗುತ್ತಿದ್ದರು. 6 ತಿಂಗಳ ಹಿಂದೆ ಕೇರಳದ ಅಜೀಲ್ ಮತ್ತು ಸಜ್ಜು ಫ್ರಾನ್ಸಿಸ್ ಅವರು ಈ ಚರ್ಚ್ ವಿರುದ್ಧವಾಗಿ ಅವಹೇಳನಕಾರಿ ಹೇಳಿಕೆ ನೀಡಿ, ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಹೀಗಾಗಿ ಅಜಿಲ್ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಸಲುವಾಗಿ ಅಜಿಲ್ ವಿರುದ್ಧ ಗಾಂಜಾ ಸಾಗಾಟ ಪ್ರಕರಣ ದಾಖಲಿಸುವ ಉದ್ದೇಶದಿಂದ ಆತ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಗಾಂಜಾವನ್ನು ಇಟ್ಟಿದ್ದೆವು.
Suvarna Fir: ಮದುವೆಯಾದ ಬಳಿಕ ಮಾಜಿ ಪ್ರೇಯಸಿಯನ್ನು ಕೊಂದ ಪಾಗಲ್ ಪ್ರೇಮಿ!
ಅಲ್ಲದೇ, ಸಜ್ಜು ಫ್ರಾನ್ಸಿಸ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿ ಅಪ್ರೋಜ್ ಅಹಮ್ಮದ್ ಎಂಬಾತನಿಗೆ ಸಜ್ಜು ಫ್ರಾನ್ಸಿಸ್‌ನ ಪೋಟೊ, ವಿಳಾಸ ಕೊಟ್ಟು ಗಾಡಿಯಲ್ಲಿ ಗುದ್ದಿ ಕೊಲೆ ಮಾಡಲು ಹೇಳಿದ್ದೆವು. ಆದರೆ, ಇದು ಸಾಧ್ಯವಾಗಲಿಲ್ಲ ಎಂದು ಆರೋಪಿಗಳು ಬಾಯಿಬಿಟ್ಟಿದ್ದಾರೆ.
ಈ ಹಿನ್ನೆಲೆ ಅಪ್ರೋಜ್ ಅಹಮ್ಮದ್ ಎಂಬವನನ್ನು ಬಂಧಿಸಿರುವ ತೀರ್ಥಹಳ್ಳಿ ಪೊಲೀಸರು, ಈ ಮೂವರು ಆರೋಪಿಗಳಿಂದ .80 ಸಾವಿರ ನಗದು ಮತ್ತು ಮೊಬೈಲ್ ಪೋನ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.