ನಾನು ಲಿಂಗಾಯತ, ವೆಜಿಟೇರಿಯನ್‌... ಎಂದಿದ್ದ ರೇಣುಕಾಸ್ವಾಮಿ ಬಾಯಿಗೆ ಚಿಕನ್‌ ಪೀಸ್‌ ತುರುಕಿದ್ದ ದರ್ಶನ್‌!

By Suvarna News  |  First Published Jun 14, 2024, 1:46 PM IST

ದರ್ಶನ್ ಮತ್ತು ಗ್ಯಾಂಗ್ ನಿಂದ ಕೊಲೆಯಾದ ಲಿಂಗಾಯತ ಸಮುದಾಯದ ರೇಣುಕಾಸ್ವಾಮಿ ಪರಿಪರಿಯಾಗಿ ಬೇಡಿಕೊಂಡರೂ ಮಾಂಸ  ಬಾಯಿಗೆ ತುರುಕಲಾಗಿತ್ತು ಎಂದು ತಿಳಿದುಬಂದಿದೆ.


ಬೆಂಗಳೂರು (ಜೂ.14): ಬೆಂಗಳೂರಿನಲ್ಲಿ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ಮುಂದುವರೆದಂತೆ ದರ್ಶನ್ ಮತ್ತು ಗ್ಯಾಂಗ್ ನ ಕರಾಳ ಮುಖ ಒಂದೊಂದೇ  ಬಯಲಾಗುತ್ತಿದೆ. ಹಲ್ಲೆ ಸಮಯದಲ್ಲಿ ನಡೆದ ಮಿನಿಟ್ ಟು ಮಿನಿಟ್ ಮಾಹಿತಿ ಸಂಗ್ರಹಿಸಲಾಗಿದ್ದು, ಹಲ್ಲೆ ಮಾತ್ರವಲ್ಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ರೇಣುಕಾಸ್ವಾಮಿಗೆ ಮಾಂಸ ತಿನ್ನಿಸುವ ಯತ್ನ ನಡೆದಿತ್ತು ಎಂದು ತಿಳಿದುಬಂದಿದೆ. 

ಶೆಡ್ ನಲ್ಲಿ ಕೂಡಿ ಹಾಕಿದ್ದ ವೇಳೆ ದರ್ಶನ್ ಮತ್ತು ಗ್ಯಾಂಗ್  ಬಿರಿಯಾನಿ ತರಿಸಿತ್ತು. ಈ ವೇಳೆ ಹಲ್ಲೆ ನಡೆಸಿದ ಬಳಿಕ ಆರೋಪಿ ದರ್ಶನ್, ರೇಣುಕಾಸ್ವಾಮಿ ಮುಂದೆ ತಿನ್ನು ಅಂತ ಬಿರಿಯಾನಿ ಮುಂದಿಟ್ಟಿದ್ದನಂತೆ. ಒಂದು ತುತ್ತು ತಿನ್ನುತ್ತಿದ್ದಂತೆ 'ಇದು ನಾನ್ ವೆಜ್ ' ನಾನು ತಿನ್ನಲ್ಲ ಎಂದು  ರೇಣುಕಾಸ್ವಾಮಿ ನಿರಾಕರಿಸಿದ್ದಾರೆ. ಈ ವೇಳೆ ನಟ ದರ್ಶನ್ ತಿನ್ನುವಂತೆ ಒತ್ತಾಯ ಮಾಡಿದ್ದಾನೆ.

Tap to resize

Latest Videos

ರೇಣುಕಾಸ್ವಾಮಿ ಕೊಲೆ ಆರೋಪಿಗಳು 13ರಲ್ಲ 17 ಮಂದಿ, ನಾಪತ್ತೆಯಾದವರಿಗೆ ಶೋಧ

ಈ ವೇಳೆ ರೇಣುಕಾಸ್ವಾಮಿ ನನ್ನ ಜಾತಿ ಕೆಡಿಸಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದ, ತಿನ್ನಲು ನಿರಾಕರಿಸಿದಾಗ ಬಿರಿಯಾನಿಯಲ್ಲಿದ್ದ ಒಂದು ಮಾಂಸದ ಪೀಸ್ ಬಾಯಿಗೆ ತುರುಕಿದ್ದ ದರ್ಶನ್, ಬಿರಿಯಾನಿ ತಿನ್ನಿಸಿ ಬಳಿಕ ಎದೆಗೆ ಜಾಡಿಸಿ ಹೊಡೆದಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಇಷ್ಟು ಮಾತ್ರವಲ್ಲ ನಟ ದರ್ಶನ್ ಕರಾಳಮುಖ ತನಿಖೆಯಲ್ಲಿ ಬಯಲಾಗಿದ್ದು, ದರ್ಶನ್ ಹಲ್ಲೆ ನಡೆಸಿದ್ದ ಬಗ್ಗೆ ಖಾಕಿ ಪಡೆಗೆ ಸಿಕ್ಕಿವೆ ಸ್ಪಷ್ಟ ಸಾಕ್ಷ್ಯಗಳು ಸಿಕ್ಕಿವೆ. ಇತರ ಆರೋಪಿಗಳು ಹೇಳಿರುವ ಹೇಳಿಕೆಗಳು ಮತ್ತು ಸಿಕ್ಕಿರುವ ಸಾಕ್ಷಿಗಳಿಗೆ ಪಕ್ಕಾ ಹೋಲಿಕೆಯಾಗುತ್ತಿದೆ.

ದರ್ಶನ್ ಮತ್ತು ಎರಡನೇ ಪತ್ನಿ ಪವಿತ್ರಾ ವಯಸ್ಸಿನ ಅಂತರ 14 ವರ್ಷ! ಮೊದಲ ಭೇಟಿ ಎಲ್ಲಿ?

ರೇಣುಕಾಸ್ವಾಮಿ ಎದೆಗೆ ದರ್ಶನ್ ಜಾಡಿಸಿ ಹೊಡೆದ ಬಗ್ಗೆ ಇತರ ಆರೋಪಿಗಳು ಹೇಳಿದ್ದರು. ಈ ಬಗ್ಗೆ ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿಯೂ ಉಲ್ಳೇಖವಿದೆ. ಅಲ್ಲದೆ, ದರ್ಶನ್ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದರು. ಮರ್ಮಾಂಗದ ಬಳಿಯೂ ಹಲ್ಲೆ ಎಂದು ಪಿಎಂ ರಿಪೋರ್ಟ್ ನಲ್ಲಿ ಉಲ್ಲೇಖವಾಗಿದೆ.

ಪೋಸ್ಟ್ ಮಾರ್ಟಂ ಬಳಿಕ ನಿರಂತವಾಗಿ  ಪೊಲೀಸರು ಸಂಪರ್ಕ ದಲ್ಲಿದ್ದ ವೈದ್ಯರು ನೀಡಿರುವ ವರದಿ ಹಾಗೂ ಇತರ ಆರೋಪಿಗಳ ಹೇಳಿಕೆಗೂ 100% ಹೋಲಿಕೆ ಇದೆ ಎಂದು ವರದಿ ತಿಳಿಸಿದೆ.

click me!