ಚಿಕ್ಕೋಡಿ: ಅತ್ತೆಯ ಕಾಟದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಯೋಧನ ಪತ್ನಿ..!

By Girish Goudar  |  First Published Jun 14, 2024, 10:46 AM IST

ಮೃತಳ‌ ಪತಿ ಬಾಳು ರೂಪನವರ ಅವರು ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯೋಧ ಬಾಳು ಅರುಣಾಚಲ ಪ್ರದೇಶ ಗ್ಯಾಂಟುಕನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತ್ತೆ ಸೇವಂತಾ ಸಿದರಾಯ ರೂಪನವರ ಅವರು ರೂಪಾಬಾಯಿಗೆ ದಿನಂಪ್ರತಿ ಕಿರಿಕಿರಿ ಕೊಡುತ್ತಿದ್ದರು ಎಂದು ಹೇಳಲಾಗುತ್ತಿದೆ. 

ಚಿಕ್ಕೋಡಿ(ಜೂ.14):  ಅತ್ತೆಯ ಕಾಟದಿಂದ ಸೊಸೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಇಂದು(ಶುಕ್ರವಾರ) ನಡೆದಿದೆ. ರೂಪಾಬಾಯಿ ಬಾಳು ರೂಪನವರ (31) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ. 

ಮೃತಳ‌ ಪತಿ ಬಾಳು ರೂಪನವರ ಅವರು ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯೋಧ ಬಾಳು ಅರುಣಾಚಲ ಪ್ರದೇಶ ಗ್ಯಾಂಟುಕನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತ್ತೆ ಸೇವಂತಾ ಸಿದರಾಯ ರೂಪನವರ ಅವರು ರೂಪಾಬಾಯಿಗೆ ದಿನಂಪ್ರತಿ ಕಿರಿಕಿರಿ ಕೊಡುತ್ತಿದ್ದರು ಎಂದು ಹೇಳಲಾಗುತ್ತಿದೆ. 

Tap to resize

Latest Videos

undefined

ಪತ್ನಿ ಅತ್ತಿಗೆ ಜೊತೆಗಿತ್ತು ಅಕ್ರಮ ಸಂಬಂಧ, ಸಾಬೀತುಪಡಿಸಲು ವ್ಯಕ್ತಿ ಆತ್ಮಹತ್ಯೆ!

ಅತ್ತೆಯ ಕಿರಿ ಕಿರಿ ಹಿನ್ನೆಲೆಯಲ್ಲಿ ಮನನೊಂದಿದ್ದ ರೂಪಾಬಾಯಿ ನೇಣಿಗೆ ಶರಣಾಗಿದ್ದಾಳೆ. ಮೃತ ರೂಪಾಬಾಯಿಗೆ ಎರಡು ಮಕ್ಕಳು ಇವೆ. ಘಟನಾ ಸ್ಥಳಕ್ಕೆ ಕಾಗವಾಡ ಪೋಲಿಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.  ಈ ಸಂಬಂಧ ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!