ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನ ಬರ್ಬರ ಕೊಲೆ!

By Suvarna News  |  First Published Jun 7, 2022, 11:55 AM IST

* ಮುಳಬಾಗಿಲು ನಗರಸಭಾ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷನ ಕೊಲೆ.

* ಕೋಲಾರ ಜಿಲ್ಲೆ ಮುಳಬಾಗಿಲು ನಗರಸಭೆ ಸದಸ್ಯ ಜಗನ್ ಮೋಹನ್ / ಪಳ್ಳಿ ಮೋಹನ್ ಕೊಲೆಯಾದ ಸದಸ್ಯ.

* ಇಂದು ಬೆಳಿಗ್ಗೆ ಮುತ್ಯಾಲಪೇಟೆಯ ಗಂಗಮ್ಮ ದೇವಾಲಯಕ್ಕೆ ಹೋಗುವಾಗ ಅಪರಿಚಿತ ಗುಂಪಿನಿಂದ ಕೊಲೆ.


ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ(ಜೂ.07): ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಆಪ್ತ ಹಾಗೂ ಮುಳಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನನ್ನ ಲಾಂಗು ಮಚ್ಚಿನಿಂದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು ಬೆಳಗಿನ ಜಾವ 5.30ರಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಮುತ್ಯಾಲಪೇಟೆಯ ಗಂಗಮ್ಮ ಗುಡಿ ದೇವಾಲಯದ ಬಳಿ ಈ ದುರ್ಘಟನೆ ಜರುಗಿದೆ. 

Tap to resize

Latest Videos

ಜಗನ್ ಮೋಹನ್ ರೆಡ್ಡಿ (50) ಸಾವನ್ನಪ್ಪಿರುವ ಮೃತ  ದುರ್ದೈವಿಯಾಗಿದ್ದು ಕಳೆದ ಎರಡು ದಿನಗಳ ಹಿಂದಷ್ಟೇ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದ ಕೊಲೆಯಾದ ಜಗನ್ ಮೋಹನ್ ರೆಡ್ಡಿ, ಗಂಗಮ್ಮ ಗುಡಿ ದೇವಾಲಯದ ದೇವಸ್ಥಾನದ ಗಂಟೆ ಬಾರಿಸಿ ಮನೆಯಲ್ಲಿದ್ದ ಜಗನ್ ಮೋಹನ್ ರೆಡ್ಡಿಯನ್ನ ಹೊರ ಕರೆಯಿಸಿಕೊಂಡು ಕಿಡಿಗೇಡಿಗಳು ಮನೆಯಲ್ಲಿದ್ದ ಜಗನ್ ಮೋಹನ್ ರೆಡ್ಡಿ ದೇವಸ್ಥಾನಕ್ಕೆ ಯಾರೋ ಭಕ್ತರು ಬಂದಿದ್ದಾರೆಂದು ಬಾಗಿಲು ತೆಗೆಯಲು ಹೋದ ವೇಳೆ ಓರ್ವ ದುಷ್ಕರ್ಮಿ ಅಟ್ಯಾಕ್ ಮಾಡುತ್ತಾನೆ, ಬಳಿಕ ಅಕ್ಕಪಕ್ಕದ ಲ್ಲಿ ಅಡಗಿ ಕುಳಿತಿದ್ದ ಮೂವರು ದುಷ್ಕರ್ಮಿಗಳು ಸೇರಿಕೊಂಡು ಒಟ್ಟು ನಾಲ್ವರು ದುಷ್ಕರ್ಮಿಗಳು ಸೇರಿಕೊಂಡು ಜಗನ್ ಮೋಹನ್ ರೆಡ್ಡಿಯ ಚಾಕು, ಲಾಂಗ್ ಗಳಿಂದ ಮನಬಂದಂತೆ ಚಾಕುನಿಂದ ಕುತ್ತಿಗೆ ತಿವಿದು, ಲಾಂಗ್ ನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಇನ್ನೂ ಈ ವೇಳೆ ಸ್ಥಳದಲ್ಲೇ ಕುಸಿದು ಬಿದ್ದಿದ್ದ ಜಗನ್ ಮೋಹನ್ ರೆಡ್ಡಿ ಯನ್ನ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಷ್ಟರಲ್ಲಿ ಮರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.ಹಳೇ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು,ದುಷ್ಕರ್ಮಿಗಳು ಕೊಲೆ ಮಾಡಿರುವ  ದೃಶ್ಯ ಸಿಸಿ ಟಿಯಲ್ಲಿ ಸೆರೆಯಾಗಿದೆ, ಕೊಲೆ ಮಾಡಿರುವ ಆರೋಪಿಗಳಿಗಾಗಿ ಎಸ್ಪಿ ಡಿ ದೇವರಾಜ್ ನೇತೃತ್ವದಲ್ಲಿ ಪೊಲೀಸರು ತೀವ್ರ ಶೋದ ನಡೆಸುತ್ತಿದ್ದಾರೆ.

ಇನ್ನು ಘಟನೆಗೆ ಒಂದು ದ್ವಿಚಕ್ರ ವಾಹನ ಸಹ ಬಳಸಿಕೊಂಡಿದ್ದು ವಾಹನದ ನಂಬರ್ ಜೊತೆ ಮೊಬೈಲ್ ನೆಟ್ವರ್ಕ್ ಆಧಾರದಲ್ಲಿ ಪೊಲೀಸರು ಆರೋಪಿಗಳಿಗಾಗಿಬಲೆ ಬೀಸಿದ್ದಾತೆ.ಘಟನೆ ಖಂಡಿಸಿ ಪ್ರತಿಭಟನೆ ನಡೆಸುವ ಸಾಧ್ಯತೆ ಇರೋದ್ರಿಂದ ಮುಂಜಾಗ್ರತವಾಗಿ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ.ಜಗನ್ ಮೊಹನ್ ರೆಡ್ಡಿ ಮೃತ ದೇವಹನ್ನ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಶವಗಾರಕ್ಕೆ ರವಾನಿಸಲಾಗಿದೆ.ಈ ವೇಳೆ ಆರ್ ಎಲ್ ಜಾಲಪ್ಪ ಆಸ್ಪತ್ರೆಯ ಶವಗಾರಕ್ಕೆ ಎಂಎಲ್ಸಿ ಅನಿಲ್ ಕುಮಾರ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸೇರಿದಂತೆ ನೂರಾರು ಮುಖಂಡರು ಭೇಟಿ ನೀಡಿದ್ದರು.

click me!