ರಾಣಿಬೆನ್ನೂರು: ಹಿರೇಮಠದಲ್ಲಿದ್ದ ದಕ್ಷಿಣ ಭಾರತದ ಬೃಹತ್ ಸ್ಪಟಿಕಲಿಂಗ ಕಳ್ಳತನ

By Girish Goudar  |  First Published Jun 7, 2022, 11:47 AM IST

*  ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದ ಘಟನೆ
*  ಲಿಂಗದಹಳ್ಳಿ ಹಿರೇಮಠದಲ್ಲಿದ್ದ ದಕ್ಷಿಣ ಭಾರತದ ಬೃಹತ್ ಸ್ಪಟಿಕಲಿಂಗ
*  ಸ್ವಾಮೀಜಿ ಮಠದಲ್ಲಿ ಇಲ್ಲದಿದ್ದಾಗ ನಡೆದ ಕೃತ್ಯ


ಹಾವೇರಿ(ಜೂ.07): ಮಠದಲ್ಲಿನ ಪುರಾತನ ಸ್ಪಟಿಕಲಿಂಗವನ್ನ ದುಷ್ಕರ್ಮಿಗಳು ಕಳ್ಳತನ ಮಾಡಿದ ಘಟನೆ ಮಾಡಿದ ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. 

ಲಿಂಗದಹಳ್ಳಿ ಗ್ರಾಮದಲ್ಲಿ ಲಿಂಗದಹಳ್ಳಿ ಹಿರೇಮಠದಲ್ಲಿದ್ದ ದಕ್ಷಿಣ ಭಾರತದ ಬೃಹತ್ ಸ್ಪಟಿಕಲಿಂಗವನ್ನ ಖದೀಮರು ಕದ್ದಿದ್ದಾರೆ.  ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿರುವ ಈ‌ ಮಠ ಬಹಳಷ್ಟು ಹೆಸರುವಾಸಿಯಾಗಿದೆ. 

Tap to resize

Latest Videos

undefined

Belagavi; RCF ಕಂಪನಿಯ 900 ಚೀಲ ರಸಗೊಬ್ಬರ ಕದ್ದಿದ್ದವರು ಅರೆಸ್ಟ್

ಸ್ವಾಮೀಜಿ ಮಠದಲ್ಲಿ ಇಲ್ಲದಿದ್ದಾಗ ಕೃತ್ಯ ನಡೆದಿದೆ ಅಂತ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ಮಾಹಿತಿ ನೀಡಿದ್ದಾರೆ. ಸುಮಾರು 8ನೇ ಶತಮಾನದ ಬೆಲೆಕಟ್ಟಲಾಗದ ಸ್ಪಟಿಕಲಿಂಗವನ್ನ ಖದೀಮರಿ ಕದ್ದಿದ್ದಾರೆ. ಸ್ವಾಮೀಜಿ ದುಷ್ಕರ್ಮಿಗಳು ಇಲ್ಲದಿದ್ದಾಗ ಹೊಂಚುಹಾಕಿ ಕಳ್ಳತನ ಮಾಡಿದ್ದಾರೆ. 

 

click me!