ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಲವರ್ ಜೊತೆ ಸೇರಿಕೊಂಡು ಪತ್ನಿ ತನ್ನ ಗಂಡನನ್ನೇ ದಾರುಣವಾಗಿ ಸಾಯಿಸಿರುವ ಘಟನೆ ನಡೆದಿದೆ. ಪತಿ ಇರುವ ಸ್ಥಳವನ್ನು ಪತ್ನಿ ಇನ್ಸ್‌ಟಾಗ್ರಾಮ್ ಮೆಸೇಜ್ ಮೂಲಕ ತನ್ನ ಲವರ್‌ಗೆ ನೀಡಿದ್ದಳು ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ನವದೆಹಲಿ (ಜು.23): ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಪತ್ನಿಯೊಬ್ಬಳು ತನ್ನ ಲವರ್ ಜೊತೆ ಸೇರಿಕೊಂಡು ತನ್ನ ಪತಿಯನ್ನೇ ದಾರುಣವಾಗಿ ಕೊಲ್ಲಿಸಿದ ಘಟನೆ ನಡೆದಿದೆ. ಬಾಯ್‌ಫ್ರೆಂಡ್ ಮೇಲೆ ಹುಚ್ಚು ಪ್ರೀತಿ ಇರಿಸಿಕೊಂಡಿದ್ದ ಪತ್ನಿ, ತನ್ನ ಗಂಡ ಇರುವ ಸ್ಥಳವನ್ನು ಇನ್ಸ್‌ಟಾಗ್ರಾಮ್ ಮೆಸೇಜ್ ಮೂಲಕ ನೀಡಿದ್ದಳು. ಇದರ ಸಹಾಯದಿಂದ ಆಕೆಯ ಬಾಯ್‌ಫ್ರೆಂಡ್, ತನ್ನ ಗೆಳತಿಯ ಗಂಡನನ್ನು ಕೊಲೆ ಮಾಡಿದ್ದಾರೆ.ಕೊತ್ವಾಲಿ ನಗರ ಪೊಲೀಸರು ಮತ್ತು ಎಸ್‌ಒಜಿ ತಂಡ ಜಂಟಿ ಕಾರ್ಯಾಚರಣೆಯಲ್ಲಿ ಘಟನೆಯನ್ನು ಬಹಿರಂಗಪಡಿಸಿದ್ದು, ಮೂವರು ಆರೋಪಿಗಳೊಂದಿಗೆ ಮೃತನ ಪತ್ನಿಯನ್ನು ಬಂಧಿಸಿದ್ದಾರೆ. ಕೊತ್ವಾಲಿ ಪ್ರದೇಶದ ಕಲ್ವಾರಿ ರಸ್ತೆಯಲ್ಲಿರುವ ಎಫ್‌ಸಿಐ ಗೋಡೌನ್ ಎದುರು ಶುಕ್ರವಾರ ಬೆಳಗ್ಗೆ ಮುನೇಂದ್ರ ಉಪಾಧ್ಯಾಯ ಎನ್ನುವ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮುನೇಂದ್ರ ಅವರು ಬೆಳಗಿನ ವಾಕಿಂಗ್‌ಗೆ ತೆರಳಿದ್ದ ವೇಳೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಆದರೆ, ಅವರನ್ನು ಗುಂಡಿಕ್ಕಿ ಹತ್ಯೆ ಮಾಡುವಂಥ ಯಾವುದೇ ಕಾರಣಗಳೂ ಇದ್ದಿರಲಿಲ್ಲ.
ತನ್ನ ಸಹೋದರ ಎಂದಿನಂತೆ ಬೆಳಗ್ಗೆ 5 ಗಂಟೆಗೆ ವಾಕಿಂಗ್‌ಗೆ ತೆರಳಿದ್ದು, ಕಲ್ವಾರಿ ರಸ್ತೆಯಲ್ಲಿರುವ ಎಫ್‌ಸಿಐ ಗೋಡೌನ್ ಬಳಿ ಬಂದಾಗ ಆರೋಪಿ ಭಾನು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎಂದು ಮೃತನ ಸಹೋದರ ಅಶೋಕ್ ಕೊತ್ವಾಲಿಯಲ್ಲಿ ದೂರು ದಾಖಲು ಮಾಡಿದ್ದರು. ಈ ಕೊಲೆಯಲ್ಲಿ ಮೃತನ ಪತ್ನಿ ಪ್ರಿಯಾಂಕಾ ಕೂಡ ಭಾಗಿಯಾಗಿದ್ದಾಳೆ ಎಂದು ಅಶೋಕ್ ತಿಳಿಸಿದ್ದರು.
ಪತಿ ಹತ್ಯೆಗೆ ಸಂಚು ರೂಪಿಸಿ ಸಿಕ್ಕಿಬಿದ್ದ ಪತ್ನಿ: ಘಟನೆಯ ತನಿಖೆ ನಡೆಸಿದ ಪೊಲೀಸರು 3 ಆರೋಪಿಗಳಾದ ಭೋಲಾ ಪಚೌರಿ, ರಾಜೀವ್ ಗೌತಮ್, ರಜತ್ ಕುಮಾರ್ ಮತ್ತು ಮೃತನ ಪತ್ನಿ ಪ್ರಿಯಾಂಕಾ ಅವರನ್ನು ಬಂಧಿಸಿದ್ದಾರೆ. ಅವರಿಂದ 2 ಪಿಸ್ತೂಲ್‌ಗಳು, 4 ಜೀವಂತ ಮತ್ತು 1 ಖಾಲಿ ಕಾಟ್ರಿಡ್ಜ್ ಮತ್ತು ಘಟನೆಗೆ ಬಳಸಿದ ಮೋಟಾರ್‌ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ರೇಣುಕಾಸ್ವಾಮಿ ಕೊಲ್ಲೋದಕ್ಕೂ ಮೊದಲು ವಿಡಿಯೋ..? ಕೊಲೆ ಕೇಸ್‌ನ ಮತ್ತೊಂದು ರಹಸ್ಯ ಬಯಲು!
ವಿಚಾರಣೆ ವೇಳೆ ಪ್ರಿಯಾಂಕಾ ತನಗೆ ಭಾನು ಜೊತೆ ಪ್ರೇಮ ಸಂಬಂಧವಿದ್ದು, ಒಂದೂವರೆ ವರ್ಷಗಳ ಹಿಂದೆ ಭಾನು ಜೊತೆ ಓಡಿ ಹೋಗಿದ್ದೆ ಎಂದು ಹೇಳಿದ್ದಾಳೆ. ಪ್ರತಿದಿನ ಮದ್ಯ ಸೇವಿಸಿ ಪತಿ ತನಗೆ ಥಳಿಸುತ್ತಿದ್ದ ಎಂದು ಪ್ರಿಯಾಂಕಾ ಹೇಳಿದ್ದು, ಮೊದಲು ನಾನು ಭಾನುವನ್ನು ಸಾಯಿಸುತ್ತೇನೆ ನಂತರ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳುತ್ತಿದ್ದ. ಇದನ್ನು ಪ್ರಿಯಾಂಕಾ ಭಾನುವಿಗೆ ತಿಳಿಸಿದಳು ಮತ್ತು ನಂತರ ಭಾನು, ಭೋಲಾ ಮತ್ತು ಪ್ರಿಯಾಂಕಾ ಸೇರಿಕೊಂಡು ಮುನೇಂದ್ರನನ್ನು ಕೊಲ್ಲಲು ಯೋಜನೆ ರೂಪಿಸಿದ್ದರು.. ಪ್ರಿಯಾಂಕಾ ತನ್ನ ಪತಿಯ ಲೊಕೇಶನ್ ಅನ್ನು ಭಾನು ಮತ್ತು ಭೋಲಾಗೆ ಇನ್‌ಸ್ಟಾಗ್ರಾಮ್ ಮೂಲಕ ನೀಡಿದ್ದಳು. ಆ ಬಳಿಕ ಚಾಟ್ ಹಾಗೂ ಭಾನುವಿಗೆ ಕರೆ ಮಾಡಿರುವ ಡಿಟೇಲ್ ಅನ್ನು ಮೊಬೈಲ್‌ನಿಂದ ಅಳಿಸಿಹಾಕಿದ್ದಳು.
ಮಾಗಡಿ: 4 ವರ್ಷದ ಬಾಲಕಿ ಮೇಲೆ ಅತ್ಯಾಚಾರವಸಗಿ ಕೊಲೆಗೈದ ಕಾಮುಕ, ಸಂಬಂಧಿಕನಿಂದಲೇ ಹೇಯಕೃತ್ಯ..!