ಬಸ್ಸಿನಲ್ಲಿ ಸುಮ್ಮನೇ ನಿಂತುಕೊಂಡಿದ್ದ ಪೊಲೀಸ್ ಅಧಿಕಾರಿ ಯುವತಿಯ ಮೋಡಿಗೆ ಒಳಗಾಗಿ ತಾವೂ ಡಾನ್ಸ್ ಮಾಡಿಬಿಟ್ಟಿದ್ದಾರೆ. ಆದರೆ ಮುಂದಾದದ್ದೇ ದುರಂತ. ಏನಿದು ವಿಷಯ?
ಪಾಪ ಈ ಪೊಲೀಸ್ ಸಿಬ್ಬಂದಿ ತಮ್ಮ ಪಾಡಿಗೆ ತಾವು ಬಸ್‌ನಲ್ಲಿ ಹೋಗುತ್ತಿದ್ದರು. ಅವರ ಮುಂದೆ ಬಂದ ಈ ಯುವತಿ ಕುಣಿಯಲು ಶುರು ಮಾಡಿದ್ಲು. ಅಷ್ಟಕ್ಕೂ ಅವಳು ಸುಮ್ಮನೇ ಡಾನ್ಸ್ ಮಾಡ್ತಿರಲಿಲ್ಲ. ಬದಲಿಗೆ ರೀಲ್ಸ್ ಮಾಡುತ್ತಿದ್ದಳು. ಅತ್ತ-ಇತ್ತ ಕುಣಿದಳು. ಪೊಲೀಸಪ್ಪನ ಎದುರೇ ಕುಣಿದಾಡಿದಳು. ಇಷ್ಟೆಲ್ಲಾ ಆದರೂ ಆ ಸುಂದರಿಯನ್ನು ನೋಡಿ ಸುಮ್ಮನೇ ಕಣ್ತುಂಬಿಸಿಕೊಳ್ಳುತ್ತಿದ್ದರು ಈ ಪೊಲೀಸ್. ಆದರೂ ಯುವತಿ ಬಿಡಲಿಲ್ಲ. ಅವರ ಸುತ್ತಲೇ ಸುತ್ತುತ್ತು ಡಾನ್ಸ್ ಮಾಡಲು ಪುಸಲಾಯಿಸಿದಳು.
ವಿಶ್ವಾಮಿತ್ರನ ಎದುರು ಮೇನಕೆ ಬಂದ ರೀತಿಯಲ್ಲಿ ಡಾನ್ಸ್‌ನಿಂದ ಕೊನೆಗೂ ಪೊಲೀಸನ ಮೋಡಿ ಮಾಡಿಯೇ ಬಿಟ್ಟಳು ಈ ಸುಂದ್ರಿ. ಅಲ್ಲಿಯವರೆಗೆ ಸುಮ್ಮನಿದ್ದ ಈ ಪೊಲೀಸ್‌ಗೆ ಅದೇನಾಯಿತೋ ಗೊತ್ತಿಲ್ಲ. ಯುವತಿಯ ಜೊತೆ ಒಂದಿಷ್ಟು ಸ್ಟೆಪ್ ಹಾಕಿಯೇ ಬಿಟ್ಟರು. ಇಷ್ಟು ಆದರೆ ಏನೂ ಆಗ್ತಿರಲಿಲ್ಲವೇನೋ. ಪೊಲೀಸಪ್ಪನ ಜೊತೆ ಡಾನ್ಸ್ ಮಾಡಿರೋ ವಿಡಿಯೋ ಅನ್ನು ಯುವತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಳು. ಇದು ಸಕತ್ ವೈರಲ್ ಆಗೋಯ್ತು.
ಹೊಸ ವರ್ಷಕ್ಕೆ ಹೊಸ ಹುಡುಗನ ಜೊತೆ ಫಾರಿನ್ನಲ್ಲಿ ನಿವೇದಿತಾ ಗೌಡ: ಮತಾಂತರಗೊಂಡ್ರಾ ಕೇಳ್ತಿರೋ ಫ್ಯಾನ್ಸ್!
ಸಮವಸ್ತ್ರದಲ್ಲಿ ಇರುವ ಪೊಲೀಸರಿಗೆ ಅವರದ್ದೇ ಆದ ರೀತಿಯ ಪ್ರೊಟೋಕಾಲ್‌ಗಳು, ನೀತಿ-ನಿಯಮ ಎಲ್ಲವೂ ಇರುತ್ತದೆ. ಈ ರೀತಿಯಾಗಿ ಬೇಕಾಬಿಟ್ಟೆಯಾಗಿ ಅವರು ಡಾನ್ಸ್ ಮಾಡುವಂತಿಲ್ಲ. ಸಮವಸ್ತ್ರ ಧರಿಸಿದ ಸಂದರ್ಭದಲ್ಲಿ ಹೀಗೆಲ್ಲಾ ಮಾಡಿಕೊಂಡರೆ ಅದು ಎಡವಟ್ಟೇ ಆಗೋದು. ಈ ರೀಲ್ಸ್ ಸಾಕಷ್ಟು ವೈರಲ್ ಆಗಿ, ಯುವತಿಗೆ ಅಗತ್ಯಕ್ಕಿಂತ ಹೆಚ್ಚು ವ್ಯೂಸ್, ಲೈಕ್ಸ್ ಬಂದು ಆಕೆ ಫುಲ್ ಖುಷಿಯಾಗಿಯೇ ಇದ್ದಾಳೆ. ಆದರೆ ಗ್ರಹಚಾರ ಬಂದಿದ್ದು ಮಾತ್ರ ಈ ಪೊಲೀಸಪ್ಪನಿಗೆ. ಯೂನಿಫಾರ್ಮ್‌ನಲ್ಲಿ ರೀಲ್ಸ್ ಮಾಡಿರುವ ಹಿನ್ನೆಲೆಯಲ್ಲಿ, ಈ ಪೊಲೀಸ್ ಮೇಲೆ ಇಲಾಖೆ ಕ್ರಮ ತೆಗೆದುಕೊಂಡಿದೆ.
ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಲೇ ಪೊಲೀಸ್ ಇಲಾಖೆಯ ಗಮನಕ್ಕೂ ಬಂದಿದೆ. ಸಮವಸ್ತ್ರದಲ್ಲಿ ಹೀಗೆ ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಿರುವ ಹಿನ್ನೆಲೆಯಲ್ಲಿ ಸದ್ಯ ಅವರನ್ನು ಅಮಾನತುಗೊಳಿಸಲಾಗಿದೆ. ಈ ಘಟನೆ ದೆಹಲಿಯಲ್ಲಿ ನಡೆದಿರುವುದು ಎನ್ನಲಾಗಿದೆ. ಪೊಲೀಸ್ ಸದ್ಯ ಕೆಲಸದ ಕಳೆದುಕೊಂಡಿದ್ದಾರೆ. ಸುಮ್ಮನೇ ನಿಂತಿದ್ದ ಪೊಲೀಸ್‌ಗೆ ಈ ಗತಿಯಾಗಿದ್ದು ನೋಡಿ ನೆಟ್ಟಿಗರು ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರಲ್ಲಿ ಇವರದ್ದು ಏನೂ ತಪ್ಪು ಇಲ್ಲ, ಎಲ್ಲಾ ಯುವತಿಯದ್ದೇ ಎನ್ನುತ್ತಿದ್ದಾರೆ. ಯುವತಿಗೆ ಹೆಚ್ಚೆಚ್ಚು ಲೈಕ್ಸ್, ಕಮೆಂಟ್ಸ್ ಬಂದ್ರೆ ಪೊಲೀಸನಿಗೆ ಮಾತ್ರ ಆಗಬಾರದ್ದು ಆಗಿದ್ದು ಸರಿಯಾದದ್ದಲ್ಲ. ಈ ಬಗ್ಗೆ ಇನ್ನೊಮ್ಮೆ ಯೋಚನೆ ಮಾಡುವ ಅಗತ್ಯವಿದೆ ಎಂದಿದ್ದಾರೆ. ಆದರೆ, ಸದ್ಯ ಯುವತಿಯ ಮೋಡಿಗೆ ಒಳಗಾದ ಪೊಲೀಸ್ ಸ್ಥಿತಿ ಮಾತ್ರ ಯಾರಿಗೂ ಬೇಡ!
ಹುಡುಗಿಯರ ಇಂಪ್ರೆಸ್ ಮಾಡಲು ಭಾಗ್ಯಲಕ್ಷ್ಮಿ ತಾಂಡವ್ ಕೊಟ್ಟ ಟಿಪ್ಸ್ ಕೇಳಿ ಯುವತಿಯರು ಕಿಡಿಕಿಡಿ!