ಪತಿ ಮಾರುತಿ ಜೋಗಾಣಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. ಮದುವೆ ನಂತರ ಪತಿ ಮಾರುತಿ ಹಾಗೂ ಅವನ ಕುಟುಂಬಸ್ಥರು ನಿರಂತರವಾಗಿ ಸವಿತಾಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಬೆಳಗಾವಿ(ಡಿ.29): ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ನೇಣಿಗೆ ಶರಣಾದ ಘಟನೆ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಸಾಂಬ್ರಾ ಗ್ರಾಮದ ಸವಿತಾ ಮಾರುತಿ ಜೋಗಾನಿ(32) ನೇಣಿಗೆ ಶರಣಾದ ದುರ್ದೈವಿ ಮಹಿಳೆಯಾಗಿದ್ದಾಳೆ.
ಮೂಲತಃ ರಾಕಸಕೊಪ್ಪ ಗ್ರಾಮದ ಮಾರುತಿ ಜೋಗಾನಿ(40) ಕುಟುಂಬಸ್ಥರು ನಮ್ಮ ಮಗಳುಗೆ ಕಿರುಕುಳ ನೀಡಿದ್ದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. 2018ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿಯೇ ಮಾರುತಿ-ಸವಿತಾ ಮದುವೆ ಆಗಿದ್ದರು.
ಮಂಡ್ಯ: ಪ್ರೀತಿಸುತ್ತಿದ್ದ ಅಪ್ರಾಪ್ತೆ ಮನೆ ಮುಂದೆಯೇ ಜಿಲೆಟಿನ್ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ
ಪತಿ ಮಾರುತಿ ಜೋಗಾಣಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. ಮದುವೆ ನಂತರ ಪತಿ ಮಾರುತಿ ಹಾಗೂ ಅವನ ಕುಟುಂಬಸ್ಥರು ನಿರಂತರವಾಗಿ ಸವಿತಾಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಪತಿ ಮಾರುತಿ ಸವಿತಾ ಮೇಲೆ ಹಲ್ಲೆ ಮಾಡುತ್ತಿದ್ದನು ಎಂದು ಆರೋಪಿಸಲಾಗಿದೆ. ಮಾರುತಿ-ಸವಿತಾ ದಂಪತಿಗೆ ನಾಲ್ಕು ವರ್ಷ ವಯಸ್ಸಿನ ಗಂಡು ಮಗು ಇದೆ. ನಿರಂತರ ಕಿರುಕುಳದ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದಾಗ ಸವಿತಾ ನೇಣಿಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಮಗಳು ನೇಣು ಹಾಕಿಕೊಂಡಿಲ್ಲ ಗಂಡನೇ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆಂದು ಮೃತ ಮಹಿಳೆಯ ಸಹೋದರಿ ಆರೋಪಿಸಿದ್ದಾರೆ. ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಸಂಬಂಧ ದೂರು ದಾಖಲಾಗಿದೆ.