2 ಮಕ್ಕಳ ತಾಯಿಯೊಂದಿಗೆ ಪ್ರೇಮ: ಯುವಕನ ಜತೆ ಓಡಿ ಬಂದಿದ್ದ ಪ್ರಿಯತಮೆ ತಮಿಳುನಾಡಿಗೆ ರಿಟರ್ನ್

Published : Aug 27, 2022, 05:27 PM IST
2 ಮಕ್ಕಳ ತಾಯಿಯೊಂದಿಗೆ ಪ್ರೇಮ: ಯುವಕನ ಜತೆ ಓಡಿ ಬಂದಿದ್ದ ಪ್ರಿಯತಮೆ ತಮಿಳುನಾಡಿಗೆ ರಿಟರ್ನ್

ಸಾರಾಂಶ

Uttara Kannada News: ಕಾರವಾರಕ್ಕೆ ಓಡಿ ಬಂದ ಪ್ರೇಮಿಗಳನ್ನು ಟ್ರ್ಯಾಕ್ ಮಾಡಿ ತಮಿಳುನಾಡಿನ ಪೊಲೀಸರಿಗೆ ಕಾರವಾರ ಪೊಲೀಸರು ಒಪ್ಪಿಸಿದ್ದಾರೆ

ಉತ್ತರಕನ್ನಡ (ಆ. 27): ತಮಿಳುನಾಡಿನಿಂದ ಕಾರವಾರಕ್ಕೆ ಓಡಿ ಬಂದ ಪ್ರೇಮಿಗಳನ್ನು ಟ್ರ್ಯಾಕ್ ಮಾಡಿ ತಮಿಳುನಾಡಿನ ಪೊಲೀಸರಿಗೆ ಕಾರವಾರ ಪೊಲೀಸರು ಒಪ್ಪಿಸಿದ್ದಾರೆ. ಎರಡು ಮಕ್ಕಳ ತಾಯಿಯೊಂದಿಗೆ ಯುವಕ ಪ್ರೀತಿಯಲ್ಲಿ ಬಿದ್ದಿದ್ದು, ಆಕೆಯೊಂದಿಗೆ ತಮಿಳುನಾಡಿನಿಂದ ಕಾರವಾರಕ್ಕೆ ಓಡಿ ಬಂದಿದ್ದ. ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಗಣೇಶ್‌ ನಗರದ ನಿವಾಸಿಗಳಾದ ಅಯಿಷಾ ರೆಹಮತುಲ್ಲಾಹ್ (24) ಹಾಗೂ ಬೀರ್ ಮೈದಿನ್ (27) ನಡುವೆ ಪ್ರೇಮಾಂಕುರವಾಗಿತ್ತು. ಆರು ತಿಂಗಳಿನಿಂದ ಪ್ರೇಮಿಗಳು ಕಾರವಾರದ ಸೋನಾರವಾಡದಲ್ಲಿದ್ದರು.  

ಮಹಿಳೆ ಈಗ ಮತ್ತೆ ಮೂರು ತಿಂಗಳು ಗರ್ಭಿಣಿಯಾಗಿದ್ದಾರೆ. ತನಗೆ ಇಷ್ಟವಿಲ್ಲದೇ ಪೋಷಕರ‌ ಒತ್ತಾಯಕ್ಕೆ ಮಹಿಳೆ ಆಯಿಷಾ ಮದುವೆಯಾಗಿದ್ದರು ಎನ್ನಲಾಗಿದೆ.  ಈ ಕಾರಣದಿಂದ ತನ್ನ ಪ್ರೇಮಿಯೊಂದಿಗೆ  ಆಯಿಷಾ ಓಡಿ ಬಂದಿದ್ದಾರೆ. ಮೆಕಾನಿಕಲ್ ಎಂಜಿನಿಯರ್ ಪದವೀಧರ ಬೀರ್ ಮೈದಿನ್ ಜತೆ ಆಯಿಷಾ ಓಡಿಬಂದಿದ್ದರು. ಮೈದಿನ್ ಬಿಇ ಪದವೀಧರನಾಗಿದ್ದು ಗಾರೆ ಕೆಲಸ ಮಾಡಿ ತನ್ನ ಪ್ರೇಮಿಯೊಂದಿಗೆ ಜೀವನ ನಡೆಸುತ್ತಿದ್ದ. 

ಕ್ರೈಂ ಸಿನಿಮಾ, ವೆಬ್ ಸೀರೀಸ್‌ಗಳಿಂದ ಪ್ರೇರಣೆ: ಮಾಜಿ ಗೆಳತಿಯ ಪತಿಯನ್ನು ಕೊಂದವ ಬೀದರ್‌ನಲ್ಲಿ ಅರೆಸ್ಟ್

ತನ್ನ ಬಾಲ್ಯದ ಗೆಳತಿ ಅಯಿಷಾಳಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ಮೈದಿನ್ ಹಾರಿಸಿಕೊಂಡು ಬಂದಿದ್ದ.  ಆದರೆ ಸದ್ಯ ಪ್ರೇಮಿಗಳನ್ನು ಪತ್ತೆ ಮಾಡಿ ತಮಿಳುನಾಡಿನ ಪೊಲೀಸರಿಗೆ ಮತ್ತು ಯುವತಿಯ ಮಾವನಿಗೆ ಕಾರವಾರ ಪೊಲೀಸರು ಒಪ್ಪಿಸಿದ್ದಾರೆ. 

ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ: ಪೊಲೀಸರಿಗೆ ಪತಿ ದೂರು: ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿಯನ್ನು ಪತ್ತೆ ಮಾಡಿಕೊಡುವಂತೆ ಪತಿ ಮದ್ದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ, ಪತಿ ಕಾಣೆಯಾಗಿರುವ ಬಗ್ಗೆ ಪತ್ನಿ ಸಹಾ ಪ್ರತಿ ದೂರು ನೀಡಿದ್ದಾರೆ.

ಪಟ್ಟಣದ ಎಲ್ಐ‌ಸಿ.ಬಡಾವಣೆ ಮರಗೆಲಸದ ವ್ಯಾಪಾರಿ ಲೋಕೇಶ್‌ ತಮ್ಮ ಪತ್ನಿ ಎಂ.ಕವಿತಾ (28) ಆಕೆಯ ಪ್ರಿಯಕರ ಆಲೂರು ಗ್ರಾಮದ ರತನ್‌ಕುಮಾರ್‌ (26) ಮನೆಯಲ್ಲಿದ್ದ 50 ಸಾವಿರ ನಗದು, ಒಂದು ಲಕ್ಷ ರು. ಬೆಲೆ ಬಾಳುವ ಚಿನ್ನಾಭರಣ ಹಾಗೂ ಆಧಾರ್‌ ಕಾರ್ಡ್‌ ಸಮೇತ ಪರಾರಿಯಾಗಿದ್ದಾರೆ ಎಂದು ಲೋಕೇಶ್‌ ದೂರಿನಲ್ಲಿ ಆರೋಪಿಸಿದ್ದಾರೆ. ನಾಪತ್ತೆಯಾಗಿರುವ ಎಂ.ಕವಿತಾ ಕೋಲುಮುಖ, ದೃಢಕಾಯ ಶರೀರ, ಎಣ್ನೆಗೆಂಪು ಮೈ ಬಣ್ಣ, ಕಪ್ಪು ತಲೆ ಕೂದಲು ಸುಮಾರು 5.2 ಅಡಿ ಎತ್ತರ ಇದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಒಬ್ಬನಿಗಾಗಿ ಇಬ್ಬರು ಹುಡುಗಿಯರ ಬೀದಿ ಜಗಳ, ರಂಪಾಟ ನೋಡಿ ಕಾಲ್ಕಿತ್ತ ಬಾಯ್‌ಫ್ರೆಂಡ್!

ಪ್ರತಿದೂರು: ರತನ್‌ ಕುಮಾರ್‌ ಪತ್ನಿ ಆರ್‌.ರೋಜಾ ಪೊಲೀಸರಿಗೆ ಪ್ರತಿದೂರು ನೀಡಿದ್ದಾರೆ. ತನ್ನ ಪತಿ ರತನ್‌ಕುಮಾರ್‌ ಜು.25 ರಂದು ಸ್ವಗ್ರಾಮ ಆಲೂರಿನಿಂದ ಧಾರಾವಾಡಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದಾರೆ ಎಂದು ಆರ್‌.ರೋಜಾ ಪೊಲೀಸರಿಗೆ ಪ್ರತಿದೂರು ನೀಡಿದ್ದಾರೆ. ರತನ್‌ಕುಮಾರ್‌ ವಯಸ್ಸು 26, ಎಣ್ಣೆಗೆಂಪುಬಣ್ಣ, 5.2 ಅಡಿ ಎತ್ತರ, ನೈಂಚ್‌ ಪ್ಯಾಂಚ್‌, ಪಾಚಿ ಕಲರ್‌ ಬ್ಲೂ ಷರ್ಚ್‌, ಎಡಗೈನಲ್ಲಿ ಆರ್‌ .ಕೆ. ಎಂದು ಅಚ್ಚೆ ಗುರುತು ಇದೆ. 2 ಪ್ರಕರಣಗಳನ್ನು ದಾಖಲು ಮಾಡಿಕೊಂಡಿರುವ ಮದೂರು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?