ತನ್ನ ಕಾಮದ ತೀಟೆಗೆ ಹೆತ್ತ ಮಗನನ್ನೇ ಕೊಂದ ಪಾಪಿ ತಾಯಿ

By Suvarna NewsFirst Published Aug 6, 2022, 8:42 PM IST
Highlights

ತನ್ನ ಕಾಮದ ದಾಹಕ್ಕೆ ಪಾಪಿ ತಾಯಿಯೊಬ್ಬಳು ತಾನು ಹೆತ್ತ ಮಗನನ್ನೇ ಬಲಿಪಡೆದುಕೊಂಡಿದ್ದಾಳೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಾಗನಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
 

ಬಾಗಲಕೋಟೆ, (ಆಗಸ್ಟ್. 06): ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಕಾರಣಕ್ಕೆ ಹಾಗೂ ಆಸ್ತಿ ವಿವಾದ ಸಲುವಾಗಿ ತಾಯಿಯೇ ತನ್ನ ಹೆತ್ತ ಮಗನನ್ನೇ ಕೊಲೆ ಮಾಡಿಸಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣ ಭೇದಿಸುವಲ್ಲಿ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪೋಲಿಸರು ಯಶಸ್ವಿಯಾಗಿದ್ದಾರೆ. 

ಕೊಲೆಯಾದ ವ್ಯಕ್ತಿಯನ್ನು ಮುಧೋಳ ತಾಲೂಕಿನ  ನಾಗಣಾಪುರ ಗ್ರಾಮದ ವಸಂತ ಮಹಾಲಿಂಗಪ್ಪ ಕುರಬಳ್ಳಿ (24) ಎಂದು ಗುರುತಿಸಲಾಗಿದೆ.  ಆರೋಪಿಗಳಾದ ಮೂಡಲಗಿ ತಾಲೂಕಿನ ರಡ್ಡೇರಹಟ್ಟಿಗ್ರಾಮದ  ಲಕ್ಷ್ಮಣ ಉರ್ಫ ಸಿಂಧೂರ ಬೀರನ್ನವರ, ಗೋಕಾಕ ತಾಲೂಕಿನ ವೆಂಕಟಾಪುರ ಗ್ರಾಮದ ಭೀಮಪ್ಪಮಳಲಿ, ಮುಧೋಳ ತಾಲೂಕಿನ ಜೀರಗಾಳ ಗ್ರಾಮದ ನಿಂಗಪ್ಪ ಬಳಗನ್ನವರ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.  ಇವುಗಳ ಮಧ್ಯೆ ತಾಯಿ ಪತ್ತೆಗಾಗಿ ಪೋಲಿಸರು ಶೋಧ ಕಾರ್ಯ ನಡೆಸಿದ್ದಾರೆ. 

ಪ್ರೇಯಸಿಗಾಗಿ ಸ್ನೇಹಿತೆಯರನ್ನೇ ಕೊಂದುಬಿಟ್ಟ: ಮಂಡ್ಯದಲ್ಲಿ ಸಿಕ್ಕ ಅರ್ಧ ದೇಹಗಳ ಇನ್ಸೈಡ್ ಸೀಕ್ರೆಟ್!

ಇನ್ನು ಕೊಲೆ ಆರೋಪಿ ನಿಂಗಪ್ಪ ಬಳಗನ್ನವರ ಜೊತೆ ಕೊಲೆಯಾದ ವಸಂತನ ತಾಯಿ ಕಮಲವ್ವ ಕುರಬಳ್ಳಿಗೆ ಅನೈತಿಕ ಸಂಬಂಧ ಇತ್ತು. ಹಾಗೂ ವಸಂತನ ಅಕ್ಕನ ಗಂಡಂದಿರಾದ ಆರೋಪಿಗಳಾದ ಲಕ್ಷ್ಮಣ ಉರ್ಫ ಸಿಂಧೂರ ಬೀರನ್ನವರ, ಭೀಮಪ್ಪ ಮಳಲಿ ಇಬ್ಬರು ತಮ್ಮ ಪತ್ನಿಯರ ಹೆಸರಿಗೆ ಆಸ್ತಿಯನ್ನು ನೊಂದಣಿ ಮಾಡಲು ಒಪ್ಪಿಗೆ ನೀಡದಿದ್ದರಿಂದ ನಾಲ್ವರು ಸೇರಿ ವಸಂತನನ್ನು 19-6-2022 ರಂದು ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿಕೊಂಡು ಸವದತ್ತಿ ತಾಲೂಕಿನ ದಾಸನಾಳ ಗ್ರಾಮದ ಕಾಲುವೆಯಲ್ಲಿ ಎಸೆದು ಬಂದಿದ್ದರು, ಬಳಿಕ ವಸಂತನ ತಾಯಿನೇ 6-7-2022 ರಂದು ನನ್ನ ಮಗ ಕಾಣೆಯಾಗಿದ್ದಾನೆ ಎಂದು ಲೋಕಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. 

ಆದರೆ ಇವುಗಳ ಮಧ್ಯೆ ಕೊಲೆಯಾದ ವಸಂತನ ಪತ್ನಿ ಭಾಗ್ಯಶ್ರೀ ಕುರಬಳ್ಳಿ ತನ್ನ ಗಂಡನನ್ನು ಅತ್ತೆ ಹಾಗೂ ನಾದನಿಯರ ಗಂಡಂದಿರು ಕೊಲೆಮಾಡಿ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಎಲ್ಲಿಯೋ ಒಗೆದು ಮುಚ್ಚಿಹಾಕಿರುತ್ತಾರೆ ಎಂದು 30-7-2022 ರಂದು ಪ್ರಕರಣ ನೀಡಿದ್ದಳು, ಇದರಿಂದ ಪ್ರಕರಣ ಬೆನ್ನತ್ತಿ ಹೋದಾಗ ಕೊಲೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 

ಇನ್ನು ಬಾಗಲಕೋಟೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಯಪ್ರಕಾಶ ಅವರ ಮಾರ್ಗದರ್ಶನದಲ್ಲಿ ನಡೆದ ತನಿಖೆ ನೇತೃತ್ವವನ್ನು ಮುಧೋಳ ಸಿಪಿಐ ಅಯ್ಯನಗೌಡ ಪಾಟೀಲ ಹಾಗೂ ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ ತನಿಖಾ ತಂಡವನ್ನು ರಚಿಸಿ ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲಿಸ್ ಸಿಬ್ಬಂದಿ ಜಗದೀಶ ಕಾಂತಿ, ಜಿ.ಎಂ. ಕ್ಯಾತನ್, ಎಸ್.ಎಸ್. ಗಾಳಿ, ಎಂ.ಎಸ್. ಗುಲಗಾಲಜಂಬಗಿ, ಸಾತಪ್ಪ ಗಂಗಾಯಿ,  ಆರ್.ಬಿ. ಗಲಗಲಿ, ಚಂದ್ರಶೇಖರ ಬಡಿಗೇರ, ಮೌನೇಶ ಪತ್ತಾರ, ದಾದಾಪೀರ ಅತ್ರಾವತ್ತ, ಬಸವರಾಜ ತಂಗಡಿ ಇವರ ಕರ್ತವ್ಯವನ್ನು ಶ್ಲಾಘೀಸಿ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಸೂಕ್ತ ಬಹುಮಾನ ಘೋಷಿಸಿದ್ದಾರೆ.

ಈ ಮಧ್ಯೆ ಇದೊಂದು ಮುಚ್ಚಿ ಹಾಕುವ ಪ್ರಕರಣವಾಗಿತ್ತು, ಆದರೆ  ನಮ್ಮ ಎಲ್ಲ ಪೋಲಿಸ್ ಇಲಾಖೆಸಿಬ್ಬಂದಿಯವರ ಚಾಣಾಕ್ಷತನದಿಂದ ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ತನಿಖೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಂಸನಾ ಪತ್ರ ಹಾಗೂ ಸೂಕ್ತ ಬಹುಮಾನ ಘೋಷಣೆ ಮಾಡಲಾಗಿದೆಎಂದು ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ತಿಳಿಸಿದ್ದಾರೆ.

click me!