ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ ಕಾರ್ಯಕರ್ತರು ಹತ್ಯೆ ಖಂಡಿಸಿ ಪಕ್ಷಕ್ಕೆ ರಾಜೀನಾಮೆ ನೀಡಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಇದರ ಬೆನ್ನಲ್ಲೇ ಇದೀಗ ಆರ್‌ಎಸ್ಎಸ್ ಮುಖಂಡನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಕೋಲಾರ, (ಆಗಸ್ಟ್.06): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ಬೆಳ್ಳಾರೆ ಹತ್ಯೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಕೋಲಾರದಲ್ಲಿ ಆರ್‌ಎಸ್‌ಎಸ್ ಮುಖಂಡನಿಗೆ ಚಾಕುವಿನಿಂದ ತಿವಿದಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ವೆಂಕಟೇಶ್ವರ ದೇವಾಲಯದ ಈ ಘಟನೆ ನಡೆದಿದ್ದು, ಇಂದು(ಶನಿವಾರ) ಮಧ್ಯಾಹ್ನ ಅಂಗಡಿ ಮುಂದೆ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ ನಡೆದಿದೆ. ಗಲಾಟೆ ಬಿಡಿಸಲು ಹೋದ ಎಬಿವಿಪಿ ಅಧ್ಯಕ್ಷ. ರವಿ ಎನ್ನುವರಿಗೆ ಅನ್ಯ ಕೋಮಿನ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಇರಿದಿದ್ದಾರೆ. ಸಧ್ಯ ಗಾಯಗೊಂಡಿರುವ ರವಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಕೇಸ್: ತನಿಖೆ ಕೈಗೆತ್ತಿಕೊಳ್ಳಲು NIAಗೆ ಕೇಂದ್ರ ಗೃಹ ಇಲಾಖೆ ಆದೇಶ
ಈ ಘಟನೆ ಸಂಭಸುತ್ತಿದ್ದಂತೆ ಆರ್‌ಎಸ್‌ಎಸ್ ಮುಖಂಡರು ಮಾಲೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಇನ್ನು ಮಾಲೂರು ಪೊಲೀಸ್ ಠಾಣೆಯ ಮುಂಭಾಗ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡಿದ್ದು, ಉದ್ವಗ್ನ ಸ್ಥಿತಿ ನಿರ್ಮಾಣವಾಗಿದೆ.
ರವಿ ಮಾಲೀಕತ್ವದ ಸ್ಟೀಲ್ ಅಂಗಡಿಯ ಮುಂಭಾಗ ಇಬ್ಬರು ಗಲಾಟೆ ಮಾಡುತ್ತಿದ್ದರು. ಈ ವೇಳೆ ಗಲಾಟೆಯನ್ನು ಬಿಡಿಸಿ ಅಂಗಡಿಗೆ ವಾಪಸ್ಸಾಗುವಾಗ ಇಬ್ಬರು ಅನ್ಯ ಕೋಮಿನ ಯುವಕರು ರವಿಗೆ ಚಾಕುವಿನಿಂದ ತಿವಿದಿದ್ದಾರೆ.
ಹಲ್ಲೆ ನಡೆದ ಆರೋಪಿಗಳು ಓರ್ವ ಆಟೋ ಚಾಲಕನಾಗಿದ್ದರೆ, ಮತ್ತೋರ್ವ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಈಗ ಬಂದ ಮಾಹಿತಿ ಪ್ರಕಾರ ಓರ್ವ ಆರೋಪಿಯನ್ನು ಮಾಲೂರು ಪೊಲೀಸರು ಬಂಧಿಸಿದ್ದು, ಎಸ್ಕೇಪ್ ಆಗಿರುವ ಮತ್ತೋರ್ವನ ಬಂಧನಕ್ಕೆ ಬಲೆ ಬೀಸಿದ್ದಾರೆ.
ದೂರು ದಾಖಲು
ಹಲ್ಲೆಗೊಳಗಾದ ರವಿ ಅವರು ಮಾಲೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಉದ್ದೇಶ ಪೂರ್ವಕವಾಗಿ ನನ್ನ ಮೇಲೆ ಇರಿತವಾಗಿದೆ. ನನನ್ನು ಕೊಲೆ ಮಾಡಲೆಂದೇ ಅನ್ಯಕೋಮಿನವರು ಬಂದಿದ್ದಾರೆ. ಅನವಶ್ಯಕವಾಗಿ ನನ್ನ ಅಂಗಡಿ ಬಳಿ ಜಗಳ ಮಾಡುತ್ತಿದರು. ನಾನು ಮಾನವೀಯತೆಯಿಂದ ಜಗಳ ಬಿಡಿಸಲು ಹೋದೆ. ತಕ್ಷಣ ಜೇಬಿನಲ್ಲಿದ್ದ ಚಾಕುವನ್ನು ತೆಗೆದು ಇಸಕಿ ಮಾಕಿ ಇನೇ VHP ವಾಲ ಎಂದು ಕೊಲೆ ಮಾಡಲು ಪ್ರಯತ್ನ ಮಾಡಿದ್ರು. ಸೈಯದ್ ವಾಸಿಮ್ ಮತ್ತು ಆತನ ಸ್ನೇಹಿತ ಹಲ್ಲೆ ಮಾಡಿದ್ದು, ಕೂಡಲೇ ಬಂಧಿಸಬೇಕು ಎಂದು ದೂರಿನಲ್ಲಿ ಉಲ್ಲೇಖಸಿದ್ದಾರೆ.