ಗಂಡನ ಪ್ರೀತಿ ಕಡಿಮೆಯಾಗಿದ್ದಕ್ಕೆ 40 ದಿನದ ಮಗುವಿನ ಬಾಯಿಗೆ ಟಿಶ್ಯೂ ಪೇಪರ್ ತುರುಕಿ ಕೊಂದ ತಾಯಿ

Published : Sep 13, 2025, 12:08 PM IST
40 day old baby murdered

ಸಾರಾಂಶ

ತಾಯಿಯೊಬ್ಬಳು ತನ್ನ 40 ದಿನದ ಹೆಣ್ಣು ಮಗುವನ್ನು ಕೊಂದಿರುವ ಘಟನೆ ನಡೆದಿದೆ. ಗಂಡನ ಪ್ರೀತಿ ಕಡಿಮೆಯಾಗಿದೆ ಎಂದು ಈ ಕೃತ್ಯ ಎಸಗಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ. ಮಗುವಿನ ಬಾಯಿಗೆ ಟಿಶ್ಯೂ ಪೇಪರ್ ತುರುಕಿ ಕೊ*ಲೆ ಮಾಡಲಾಗಿದೆ.

ಚೆನ್ನೈ: ಮಗುವನ್ನ ತಾಯಿಯೇ ಕೊಂದಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಗಂಡನ ಪ್ರೀತಿ ಕಡಿಮೆಯಾಗಿದೆ ಅಂತ ಈ ಕೃತ್ಯ ಎಸಗಿರೋದಾಗಿ ಮಹಿಳೆ ಹೇಳಿಕೆ ನೀಡಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಘಟನೆ ಸಂಬಂಧ ಪೊಲೀಸರು ಆರೋಪಿ ತಾಯಿಯನ್ನ ಬಂಧಿಸಿದ್ದಾರೆ. ಮಗುವನ್ನು ಕೊಂದ ಮಹಿಳೆಯನ್ನು ಬೆನಿತಾ ಜಯ ಅನ್ನಲ್ (20) ಎಂದು ಗುರುತಿಸಲಾಗಿದೆ. ಬೆನಿತಾ ಕನ್ಯಾಕುಮಾರಿ ಜಿಲ್ಲೆಯ ಕರುಂಗಲ್ ಬಳಿಯ ಬಾಲೂರ್ ಕಟ್ಟುವಿಲೈ ಪ್ರದೇಶದ ನಿವಾಸಿ. ಒಂದು ವರ್ಷದ ಹಿಂದೆ ದಿಂಡಿಗಲ್ ಜಿಲ್ಲೆಯ ಉತ್ತರ ವೇದಚಂದೂರಿನ ನಾಗಕೋಣನೂರು ಪ್ರದೇಶದ ಕಾರ್ತಿಕ್ (21) ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಬೆನಿತಾ-ಕಾರ್ತಿಕ್ ಜೋಡಿಗೆ 40 ದಿನಗಳ ಹಿಂದೆ ಮುದ್ದಾದ ಹೆಣ್ಣು ಮಗು ಜನಿಸಿತ್ತು. ಇದೀಗ ಆ ಮಗುವಿನ ಪ್ರಾಣವನ್ನೇ ತಾಯಿ ತೆಗೆದಿದ್ದಾಳೆ.

ಮಗುವಿನ ಬಾಯಿಗೆ ಟಿಶ್ಯೂ ಪೇಪರ್ ತುರುಕಿ ಕೊ*ಲೆ

ಮದುವೆ ಬಳಿಕ ಪತ್ನಿ ಮನೆಯಲ್ಲಿಯೇ ವಾಸವಾಗಿದ್ದ ಕಾರ್ತಿಕ್, ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು. ಪತ್ನಿಯೇ ಮಗುವನ್ನು ಕೊ*ಲೆ ಮಾಡಿರುವ ವಿಷಯ ಕೇಳಿ ಗಂಡ ಆಘಾತಕ್ಕೊಳಗಾಗಿದ್ದಾರೆ. ಕ್ರೂರ ತಾಯಿ ಮಗುವಿನ ಬಾಯಲ್ಲಿ ಟಿಶ್ಯೂ ಪೇಪರ್ ತುರುಕಿ ಕೊ*ಲೆ ಮಾಡಿದ್ದಾಳೆ ಎಂದು ವರದಿಯಾಗಿದೆ.

ಸೆಪ್ಟೆಂಬರ್ 9ರಂದು ಕಾರ್ತಿಕ್ 9 ರಂದು ಎಂದಿನಂತೆ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಮರಳಿದ್ದರು. ಮನೆಗೆ ಬಂದು ಮಗುವನ್ನು ಎತ್ತಿಕೊಂಡಾಗ ಅದರಲ್ಲಿ ಯಾವುದೇ ಚಲನೆ ಇರಲಿಲ್ಲ. ಉಸಿರಾಟವೂ ನಿಂತಿದ್ದರಿಂದ ಗಾಬರಿಗೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ಪರಿಶೀಲಿಸಿದ ವೈದ್ಯರು, ಕಂದಮ್ಮ ಸಾವನ್ನಪ್ಪಿರೋದನ್ನು ಖಚಿತಪಡಿಸಿದ್ದಾರೆ.

ಮಗುವಿನ ಹಣೆ ಮೇಲೆ ಗಾಯ

ಮಗುವಿನ ಹಣೆಯ ಮೇಲೂ ಗಾಯವಾಗಿತ್ತು. ಈ ಬಗ್ಗೆ ಪತ್ನಿಯನ್ನು ಕೇಳಿದಾಗ, ಮಗು ಹಾಲು ಕುಡಿಯುವಾಗ ಕೆಳಗೆ ಬಿದ್ದು ಗಾಯಗೊಂಡಿದೆ ಎಂದು ಹೇಳಿದ್ದಳು. ಇದರಿಂದ ಆಘಾತಕ್ಕೊಳಗಾದ ಕಾರ್ತಿಕ್ ಮಗುವನ್ನು ಎತ್ತಿಕೊಂಡು ಕರುಂಗಲ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ಹೇಳಿದಾಗ ಕಾರ್ತಿಕ್ ಕುಸಿದಿದ್ದರು.

ಇದನ್ನೂ ಓದಿ: ಮಸಾಲೆ ಸೇರಿಸಿದ್ಯಾಕೆ? ಕಂಗನಾ ರಣಾವತ್​ಗೆ ಸುಪ್ರೀಂಕೋರ್ಟ್​ ಪ್ರಶ್ನೆ: ಮಾನಹಾನಿ ಪ್ರಕರಣದಲ್ಲಿ ಭಾರಿ ಹಿನ್ನಡೆ!

ಶವಪರೀಕ್ಷೆ ವರದಿ ನೋಡಿ ಪೊಲೀಸರು ಶಾಕ್

ಕಾರ್ತಿಕ್ ಈ ಸಂಬಂಧ ಕರುಂಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ತಿಕ್ ದಾಖಲಿಸಿದ ದೂರಿನ ಮೇರೆಗೆ ಮಗುವಿನ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಆಸರಿಪಲ್ಲಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಶವಪರೀಕ್ಷೆ ವರದಿ ನೋಡಿ ಪೊಲೀಸರು ಒಂದು ಕ್ಷಣ ಆಘಾತಕ್ಕೊಳಗಾದರು. ಮಗುವನ್ನು ಕೊಲೆ ಮಾಡಲಾಗಿರೋದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗಗೊಂಡಿತ್ತು.

ಗಂಡನ ಪ್ರೀತಿ ಕಡಿಮೆಯಾಗಲು ಮಗು ಕಾರಣ!

ಮರಣೋತ್ತರ ಪರೀಕ್ಷೆ ವರದಿ ಬಳಿಕ ಪೊಲೀಸರು ಮಗುವಿನ ತಾಯಿಯನ್ನು ಕೂಲಂಕಷ ವಿಚಾರಣೆ ನಡೆಸಿದರು. ನಂತರ ಮಗುವನ್ನು ಕೊಂದಿದ್ದಾಗಿ ಅವಳು ಒಪ್ಪಿಕೊಂಡಳು. ಅಲ್ಲದೆ, ನನ್ನ ಮಗು ಹುಟ್ಟಿ 40 ದಿನಗಳು ಕಳೆದಿವೆ. ಅಂದಿನಿಂದ ನನ್ನ ಗಂಡನಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಗಿದೆ. ಇದರಿಂದಾಗಿ ಮನೆಯಲ್ಲಿ ಸಮಸ್ಯೆಗಳಿದ್ದವು. ಘಟನೆ ನಡೆದ ದಿನ ಕೋಪದಿಂದ ಮಗುವಿನ ಬಾಯಿಯಲ್ಲಿ ಕಾಗದವನ್ನು ತುರುಕಿದ್ದಳು. ಗಂಡನ ಪ್ರೀತಿ ಕಡಿಮೆಯಾಗಲು ಮಗುವೇ ಕಾರಣ ಎಂದು ಬೆನಿತಾ ಹೇಳಿದ್ದಳು. ಇದೀಗ ಬೆನಿತಾಳನ್ನು ಬಂಧಿಸಿ ಕತ್ತಲಕೋಣೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಕೋಳಿ ಸಾರಿಗಾಗಿ ಜಗಳ: ಪತ್ನಿ ಶವ ನದಿಗೆ ಎಸೆದು ಪೊಲೀಸರ ದಿಕ್ಕು ತಪ್ಪಿಸಲು ಹೋಗಿ ತಗ್ಲಾಕೊಂಡ ಗಂಡ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ರಿಸ್‌ಮಸ್ ಹಬ್ಬದ ದಿನವೇ ಭೀಕರ ಅಪಘಾತ: ಎತ್ತಿನ ಬಂಡಿಗೆ ಬೈಕ್ ಡಿಕ್ಕಿ, ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ!
Rapido Bike ಬುಕ್ ಮಾಡುವ ಮುನ್ನ ಎಚ್ಚರ! ರೈಡರ್ ಎಡವಟ್ಟಿಗೆ ಹಿಂಬದಿ ಕುಳಿತ ಗ್ರಾಹಕನ ಮಂಡಿ ಚಿಪ್ಪು ಪುಡಿ ಪುಡಿ!