ಡ್ರಗ್ಸ್ ಮಾರಾಟಕ್ಕೆ ಪೊಲೀಸರೇ ಸಾಥ್, ಪೆಡ್ಲರ್‌ಗಳಿಂದ ತಿಂಗಳಿಗೆ 2 ಲಕ್ಷ ರೂ ಮಾಮೂಲಿ, ಇನ್ಸ್‌ಪೆಕ್ಟರ್ ಸೇರಿ 11 ಮಂದಿ ಸಸ್ಪೆಂಡ್

Published : Sep 13, 2025, 10:59 AM IST
Bengaluru Drug Scandal 11 Cops Suspended

ಸಾರಾಂಶ

ಡ್ರಗ್ಸ್ ಮುಕ್ತ ಬೆಂಗಳೂರು ಅಭಿಯಾನಕ್ಕೆ ಕಪ್ಪುಚುಕ್ಕೆ. ಚಾಮರಾಜಪೇಟೆ ಮತ್ತು ಜೆಜೆ ನಗರ ಠಾಣೆಗಳ 11 ಪೊಲೀಸ್ ಅಧಿಕಾರಿಗಳು ಡ್ರಗ್ಸ್ ಪೆಡ್ಲರ್‌ಗಳ ಜೊತೆ ಶಾಮೀಲಾಗಿ ಮಾತ್ರೆ ಮಾರಾಟಕ್ಕೆ ರಕ್ಷಣೆ ನೀಡುತ್ತಿದ್ದ ಆರೋಪದ ಮೇಲೆ ಅಮಾನತು. ಮಾಸಿಕ ಲಕ್ಷಾಂತರ ರೂ. ಮಾಮೂಲಿ ಪಡೆಯುತ್ತಿದ್ದ ಆಘಾತಕಾರಿ ಸಂಗತಿ ಬಯಲು.

ಬೆಂಗಳೂರು (ಸೆ.13): ರಾಜ್ಯ ಸರ್ಕಾರದ 'ಡ್ರಗ್ಸ್ ಮುಕ್ತ ಬೆಂಗಳೂರು' ಕನಸಿಗೆ ಕೊಳ್ಳಿ ಇಟ್ಟ ಪೊಲೀಸರು. ಪೊಲೀಸ್ ಅಧಿಕಾರಿಗಳೇ ಡ್ರಗ್ಸ್ ಪೆಡ್ಲರ್‌ಗಳ ಜೊತೆಗೆ ಕೈಜೋಡಿಸಿ ಮಾರಾಟಕ್ಕೆ ರಕ್ಷಣೆ ನೀಡುತ್ತಿದ್ದ ಆಘಾತಕಾರಿ ವಿಷಯ ಬಯಲಾಗಿದೆ. ಟೈಡಲ್ ಮಾತ್ರೆಗಳ ಮಾರಾಟದ ದಂಧೆಯಲ್ಲಿ ಭಾಗಿಯಾಗಿದ್ದ ಚಾಮರಾಜಪೇಟೆ ಮತ್ತು ಜೆಜೆ ನಗರ ಠಾಣೆಗಳ 11 ಅಧಿಕಾರಿ-ಸಿಬ್ಬಂದಿಯನ್ನ ಸಸ್ಪೆಂಡ್ ಮಾಡಲಾಗಿದೆ. ಇದರಲ್ಲಿ ಇನ್‌ಸ್‌ಪೆಕ್ಟರ್‌ರೊಂದಿಗೆ ಹೆಡ್ ಕಾನ್‌ಸ್ಟೇಬಲ್‌ಗಳು ಸೇರಿದ್ದಾರೆ.

ಪೊಲೀಸರು ಪೆಡ್ಲರ್‌ಗಳ ಜೊತೆಗೆ ಪಾರ್ಟಿಗಳನ್ನೂ ಮಾಡುತ್ತಿದ್ದ ಫೋಟೋಗಳು ಮತ್ತು ಮಾಸಿಕ 1.5-2 ಲಕ್ಷ ರೂಪಾಯಿ ಮಾಮೂಲಿ ಪಡೆಯುತ್ತಿದ್ದ ಸಂಗತಿಗಳು ತನಿಖೆ ವೇಳೆ ಬಯಲಾಗಿವೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಕಾಲೇಜು ವಿದ್ಯಾರ್ಥಿಗಳಿಗೆ ಟೈಡಲ್-100 ಮತ್ತು ಬರುವ ಮಾತ್ರೆ ಮಾರಾಟ ಮಾಡಿದ ಆರೋಪದಲ್ಲಿ ಸಲ್ಮಾನ್ ಹೆಸರಿನ‌ ಇಬ್ಬರು, ನಯಾಜ್ ಉಲ್ಲಾ,ನಯಾಜ್ ಖಾನ್ ಹೆಸರಿನ ಇಬ್ಬರು ಸೇರಿದಂತೆ ತಾಹೇರ್ ಪಟೇಲ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಆರೋಪಿಗಳ ಬಳಿ ಒಂದು ಸಾವಿರ ಟೈಡಲ್-100 ಮಾತ್ರೆ ಪತ್ತೆಯಾಗಿದ್ದವು. ಆರೋಪಿಗಳ ಮೊಬೈಲ್ ವಶಕ್ಕೆ ಪಡೆದ ಪೊಲೀಸರಿಗೆ ಪರಿಶೀಲನೆ ವೇಳೆ ಪೊಲೀಸರಿಗೆ ಶಾಕ್ ಆಗಿತ್ತು. ಆರೋಪಿಗಳ ಮೊಬೈಲ್‌ನಲ್ಲಿ ಪೊಲೀಸರ ಜೊತೆಗೆ ನಿರಂತರ ಸಂಪರ್ಕದಲ್ಲಿರುವುದು ಮತ್ತು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಮಾತುಕತೆಯ ಆಡಿಯೋಗಳು ಪತ್ತೆಯಾಗಿದ್ದವು. ಇಷ್ಟು ಸಾಲದೆಂಬಂತೆ ಆರೋಪಿಗಳ ಜೊತೆಗೆ ಪೊಲೀಸರು ಪಾರ್ಟಿ ಮಾಡಿರುವ ಫೋಟೋಗಳು ಸಹ ಮೊಬೈಲ್‌ನಲ್ಲಿ ಪತ್ತೆಯಾಗಿದ್ವು.

ಭರತ್ ರೆಡ್ಡಿ ನೇತೃತ್ವದಲ್ಲಿ ತನಿಖೆ:

ಡ್ರಗ್ಸ್ ಪೆಡ್ಲರ್‌ಗಳೊಂದಿಗೆ ಪೊಲೀಸರು ಕೈಜೋಡಿಸಿರುವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಪ್ರಕರಣದ ತನಿಖೆಗಾಗಿ ಭರತ್ ರೆಡ್ಡಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ತನಿಖೆ ವೇಳೆ ಪೆಡ್ಲರ್‌ಗಳಿಂದ ಪೊಲೀಸರು ಮಾಮೂಲಿ ಪಡೆಯುತ್ತಿದ್ದ ವಿಚಾರ ಬಯಲಾಗಿತ್ತು. ಪೆಡ್ಲರ್‌ಗಳಿಂದ ಕಡಿಮೆ ಬೆಲೆ ಟೈಡಲ್ ಮಾತ್ರೆ 300 ರಿಂದ 400 ರೂಪಾಯಿಗೆ ಸ್ವತಃ ಪೊಲೀಸರೇ ಡ್ರಗ್ಸ್ ಮಾರಾಟ ಮಾಡಿಸುತ್ತಿದ್ದರು ಎಂಬ ವಿಚಾರ ತಿಳಿದು ಶಾಕ್ ಆಗಿದ್ದ ತನಿಖಾ ತಂಡ. ಪ್ರತಿ ತಿಂಗಳು ಇನ್ಸ್‌ಪೆಕ್ಟರ್ ಸೇರಿದಂತೆ ಸಿಬ್ಬಂದಿಗೆ ಡ್ರಗ್ಸ್ ಪೆಡ್ಲರ್‌ಗಳು ಹಣ ನೀಡುತ್ತಿದ್ದರು. ತಮ್ಮ ಖಾತೆಗೆ ಹಾಕಿಸಿಕೊಂಡರೆ ಸಿಕ್ಕಿಬಿಳುತ್ತೇವೆ ಎಂಬ ಕಾರಣಕ್ಕೆ ಕೆಲವು ಪೊಲೀಸರು ತಮ್ಮ ಸಂಬಂಧಿಕರ ಖಾತೆಗಳಿಗೆ ಹಣಹಾಕಿಸಿಕೊಂಡಿರುವುದು ತನಿಖೆ ವೇಳೆ ಬಯಲಾಗಿದೆ. ಎಸ್‌ಸಿಪಿ ಚಂದನ್ ಅವರ ನೇತೃತ್ವದ ಮತ್ತೊಂದು ತನಿಖೆಯಲ್ಲೂ ಒಂದೇ ರೀತಿಯ ಅಕ್ರಮಗಳನ್ನು ದಾಖಲಿಸಿದ್ದಾರೆ. ಈ ವೇಳೆಯೂ ಪೊಲೀಸರು ಮಾರಾಟಕ್ಕೆ ಸಹಕಾರ ನೀಡುತ್ತಿರುವ ವಿಚಾರ ಬಯಲಾಗಿದೆ.

ಸಸ್ಪೆಂಡ್ ಆದ ಪೊಲೀಸ್ ಸಿಬ್ಬಂದಿ ಹೆಸರು, ಠಾಣೆಗಳು:

ಚಾಮರಾಜಪೇಟೆ ಠಾಣೆ (7 ಜನ): ಇನ್‌ಸ್ಪೆಕ್ಟರ್ ಟಿ. ಮಂಜಣ್ಣ, ಹೆಡ್ ಕಾನ್‌ಸ್ಟೇಬಲ್ ರಮೇಶ್, ಹೆಡ್ ಕಾನ್‌ಸ್ಟೇಬಲ್ ಶಿವರಾಜ್, ಸಿಬ್ಬಂದಿ ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ, ಆನಂದ್.

ಜೆಜೆ ನಗರ ಠಾಣೆ (4 ಜನ): ಸಿಬ್ಬಂದಿ ಬಸವನ್ ಗೌಡ, ಎಎಸ್‌ಐ ಕುಮಾರ್, ಹೆಡ್ ಕಾನ್‌ಸ್ಟೇಬಲ್ ಆನಂದ್ ಸೇರಿದಂತೆ ನಾಲ್ಕು ಮಂದಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!