ಧಾರವಾಡದ ಕಮಲಾಪೂರ ಹೂಗಾರ ಓಣಿಯಲ್ಲಿ ಘಟನೆ ನಡೆದಿದೆ. ತಾಯಿ ಜ್ಯೋತಿ ಪ್ರಿಯಕರ ರಾಹುಲ್ ಸೇರಿ ಮಗಳ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಅಂಗವಿಕಲ ಮಗಳನ್ನೇ ಕಿರಾತಕಿ ತಾಯಿ ಕೊಲೆ ಮಾಡಿದ್ದಾಳೆ.
ಧಾರವಾಡ(ಫೆ.08): ವಿದ್ಯಾಕಾಶಿ ಧಾರವಾಡದಲ್ಲಿ ರಕ್ತದೋಕುಳಿ ನಿಲ್ಲುವ ಹಾಗೆ ಕಾಣಿಸುತ್ತಿಲ್ಲ. ಹೌದು, ನಗರದಲ್ಲಿ ಸತತ ಐದು ದಿನ ಐದು ಕೊಲೆಗಳು ನಡೆದಿವೆ. ಹೀಗಾಗಿ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ. ಅನೈತಿಕ ಸಂಬಂಧಕ್ಕೆ ಮಗಳು ಅಡ್ಡಿಯಾಗಿದಕ್ಕೆ ಮಗಳನ್ನೇ ತಾಯಿ ಕೊಲೆ ಮಾಡಿದ್ದಾಳೆ.
ಧಾರವಾಡದ ಕಮಲಾಪೂರ ಹೂಗಾರ ಓಣಿಯಲ್ಲಿ ಘಟನೆ ನಡೆದಿದೆ. ತಾಯಿ ಜ್ಯೋತಿ ಪ್ರಿಯಕರ ರಾಹುಲ್ ಸೇರಿ ಮಗಳ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಅಂಗವಿಕಲ ಮಗಳನ್ನೇ ಕಿರಾತಕಿ ತಾಯಿ ಕೊಲೆ ಮಾಡಿದ್ದಾಳೆ.
ಏಕಾಂಗಿ ಜೀವನ ನಡೆಸುತ್ತಿದ್ದ ವೃದ್ಧೆ; ಆಸ್ತಿ ವಿಚಾರಕ್ಕೆ ದುಷ್ಕರ್ಮಿಗಳಿಂದ ಹತ್ಯೆ!
ಆರೋಪಿ ಜ್ಯೋತಿ ಅನಾಡ ನವನಗರ ಮೂಲದ ರಾಹುಲ್ ಜೊತೆ ಅನೈತಿಕ ಸಂಪರ್ಕ ಹೊಂದಿದ್ದಳಂತೆ. ಇಂದು ಸಂಜೆ ಮನೆಗೆ ಬಂದಾಗ ಮಗಳು ಅಡ್ಡಿ ಪಡಿಸಿದಕ್ಕೆ ತಾಯಿಸ್ವಂತ ಮಗಳನ್ನೇ ಕೊಲೆ ಮಾಡಿದ್ದಾಳೆ.
ಧಾರವಾಡ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ. ಸದ್ಯ ತಾಯಿ ಜ್ಯೋತಿ ಮತ್ತು ರಾಹುಲ್‌ನನ್ನ ಉಪನಗರ ಠಾಣೆ ಪೋಲಿಸರು ಬಂಧಿಸಿದ್ದಾರೆ.