ಹೆತ್ತವರು ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಅಪ್ರಾಪ್ತ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಸಂಗೀತಾ(17) ಆತ್ಮಹತ್ಯೆಗೆ ಮಾಡಿಕೊಂಡ ಅಪ್ರಾಪ್ತ ಬಾಲಕಿ.
ರಾಯಚೂರು (ಫೆ.8): ಹೆತ್ತವರು ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಅಪ್ರಾಪ್ತ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.
ಸಂಗೀತಾ(17) ಆತ್ಮಹತ್ಯೆಗೆ ಮಾಡಿಕೊಂಡ ಅಪ್ರಾಪ್ತ ಬಾಲಕಿ. ಕಾರು ಡ್ರೈವರ್ ಕೃಷ್ಣ ಎಂಬಾತನ ಪ್ರೇಮ ಪಾಶದಲ್ಲಿ ಬಿದ್ದಿದ್ದ ಬಾಲಕಿ. ಈ ಹಿಂದೆ 2 ಬಾರಿ ಕೃಷ್ಣನ ಜೊತೆಗೆ ಮನೆಬಿಟ್ಟು ಹೋಗಿದ್ದ ಬಾಲಕಿ. ಮನೆಯವರು ಬುದ್ಧಿವಾದ ಹೇಳಿ ಕರೆತಂದಿದ್ದರು. ಆದರೆ ಕೃಷ್ಣನ ಜೊತೆಗೆ ಹೋಗುವುದಾಗಿ ಹಠ ಮಾಡಿದ್ದ ಬಾಲಕಿ. ಆದರೆ ಮನೆಯವರು ಇದಕ್ಕೆ ವಿರೋಧಿಸಿದ್ದಾರೆ. ಇದರಿಂದ ಮನನೊಂದ ಯುವತಿ ಮನೆಯಲ್ಲಿದ್ದ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸದ್ಯ ಬಾಲಕಿ ಸಂಗೀತಾ ಮೃತದೇಹ ಮಾನ್ವಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾಸ್ಟೆಲ್‌ನಲ್ಲಿ ಓದುತ್ತಲೇ ಗಂಡು ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ