ಕೌಟುಂಬಿಕ ಕಲಹದ ಹಿನ್ನೆಲೆ ತಾಯಿಯೊಬ್ಬಳು ತನ್ನ ಮಗುವನ್ನು ಸ್ನೇಹಿತನ ಜೊತೆಗೆ ಬಂದು ಕಿಡ್ನಾಪ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು (ಆ.2): ಕೌಟುಂಬಿಕ ಕಲಹದ ಹಿನ್ನೆಲೆ ತಾಯಿಯೊಬ್ಬಳು ತನ್ನ ಮಗುವನ್ನು ಸ್ನೇಹಿತನ ಜೊತೆಗೆ ಬಂದು ಕಿಡ್ನಾಪ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಗುವನ್ನು ಕಿಡ್ನ್ಯಾಪ್ ಮಾಡೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ಹೊರವಲಯದ ಕೆ.ಆರ್ ಪುರಂ ನಲ್ಲಿ ಘಟನೆ ನಡೆದಿದ್ದು, ಮಗುವಿನ ತಾಯಿ ಅನುಪಮ ಮತ್ತು ಆತನ ಸ್ನೇಹಿತ ಸೇರಿ ಈ ಕೃತ್ಯ ನಡೆದಿದೆ.
ಪತಿ ಸಿದ್ದಾರ್ಥ ಮತ್ತು ಪತ್ನಿ ಅನುಪಮ ನಡುವೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದೂರಾವಾಗಿದ್ದರು. 2014 ರಲ್ಲಿ ವಿವಾಹವಾಗಿದ್ದ ಅನುಪಮ ಹಾಗೂ ಸಿದ್ಧಾರ್ಥ್ ಅವರ ಕೌಟುಂಬಿಕ ಕಲಹ ಪ್ರಕರಣ ಕೋರ್ಟ್‌ನಲ್ಲಿದೆ.
ಮಗುವಿಗೆ ಆರೂವರೆ ವರ್ಷವಾಗಿದ್ದು, ಮಗುವನ್ನು ಪತಿ ಸಿದ್ದಾರ್ಥ ಗೆ ನೀಡಿ ಕೋರ್ಟ್ ಆದೇಶಿಸಿತ್ತು. ಅಪಾರ್ಟ್ ಮೆಂಟ್ ಮುಂಭಾಗ ಸ್ಕೂಲ್ ಗೆ ಹೋಗಲು ನಿಂತಿದ್ದಾಗ ಅನುಪಮ ಕಿಡ್ನ್ಯಾಪ್ ಮಾಡಿದ್ದಾಳೆ.
ಕಾಪಿರೈಟ್ ಬಗ್ಗೆ ಸಿನಿಮಾದಲ್ಲಿರುವವರಿಗೆ ನಾಲೆಡ್ಜ್ ಇಲ್ಲ, ಎಲ್ಲವೂ ಕೋರ್ಟಲ್ಲಿ ನೋಡಿಕೊಳ್ಳುವೆ: ರಕ್ಷಿತ್ ಶೆಟ್ಟಿ
ಇಂದು ಬೆಳಗ್ಗೆ ಮಗುವಿನ ತಾತ ಶಾಲೆಗೆ ಬಿಡಲು ಬಂದಾಗ ಖಾಸಗಿ ಅಪಾರ್ಟ್ ಮೆಂಟ್ ಮುಂಭಾಗ ಮೊಮ್ಮಗನನ್ನು ಕಿಡ್ನಾಪ್ ಮಾಡಲಾಗಿದೆ. ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ಮಗುವಿನ ತಾಯಿ ಮತ್ತು ಸ್ನೇಹಿತನಿಗಾಗಿ ಬಲೆ ಬೀಸಿದ್ದಾರೆ.