ಅಪ್ರಾಪ್ತೆ ಕೈ ಹಿಡಿದು ಐ ಲವ್ ಯು ಹೇಳಿದ 19ರ ಯುವಕನಿಗೆ 2 ವರ್ಷ ಜೈಲು ಶಿಕ್ಷೆ!

By Chethan Kumar  |  First Published Aug 2, 2024, 12:28 PM IST

ಟಿ ಪುಡಿ ತರಲು ಅಂಗಡಿಗೆ ಬಂದ 14 ವರ್ಷದ ಬಾಲಕಿಯ ಕೈ ಹಿಡಿದ 19ರ ಯುವಕ ಐ ಲವ್ ಯು ಹೇಳಿದ್ದಾನೆ. ಅಪ್ರಾಪ್ತ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾನೆ ಅನ್ನೋ ತಾಯಿ ಆರೋಪದಡಿ ಪ್ರಕರಣ ದಾಖಲಾಗಿತ್ತು. ಇದೀಗ ಯುವಕನಿಗೆ ಪೋಕ್ಸೋ ಕಾಯ್ದೆಯಡಿ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
 


ಮುಂಬೈ(ಆ.02) ಐ ಲವ್ ಯು ಚಿನ್ನ ಎಂದು ಯವಕನಿಗೆ ಇದೀಗ ಸಂಕಷ್ಟ ಎದುರಾಗಿದೆ. ಅಪ್ರಾಪ್ತ ಬಾಲಕಿಯ ಕೈ ಹಿಡಿದು ಪ್ರಪೋಸ್ ಮಾಡಿದ 19ರ ಯುವಕನ ವಿರುದ್ಧ ಪೋಕ್ಸೋ ಪ್ರಕರಣದಡಿ ಇದೀಗ 2 ವರ್ಷ ಜೈಲು ಶಿಕ್ಷೆಯಾಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದ್ದು, ನ್ಯಾಯಾಲಯದ ತೀರ್ಪಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಟಿ ಪುಡಿ ತರಲು ಅಂಗಡಿ ತೆರಳಿದ 14 ವರ್ಷದ ಬಾಲಕಿಯ ಕೈಹಿಡಿದ ಈ ಯುವಕ, ಐ ಲವ್ ಯು ಎಂದು ಪ್ರಪೋಸ್ ಮಾಡಿದ್ದಾನೆ. ಬಳಿಕ ಈ ವಿಚಾರ ಮನೆಯಲ್ಲಿ ಹೇಳಬೇಡ ಎಂದು ಗದರಿಸಿದ್ದಾನೆ. ಬಾಲಕಿ ತಾಯಿ ದಾಖಲಿಸಿದ ದೂರಿನ ಅನ್ವಯ ವಿಚಾರಣೆಯಲ್ಲಿ ಯುವಕ ತಪ್ಪಿತಸ್ಥ ಎಂದು ಸಾಬೀತಾಗಿದೆ. ಹೀಗಾಗಿ ಪೋಕ್ಸೋ ಪ್ರಕರಣ ವಿಚಾರಣೆ ನಡೆಸಿದ ಜಡ್ಜ್ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. 

ಶಾಕಿನಾಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೆಪ್ಟೆಂಬರ್ 2019ರಂದು ತಾಯಿ ಸೂಚನೆಯಂತೆ ಚಹಾ ಪುಡಿ ತರಲು ಹತ್ತಿರದ ಜನರಲ್ ಸ್ಟೋರ್‌ಗೆ ತೆರಳಿದ್ದಾಳೆ. ತಾಯಿ ಜೊತೆ, ಏಕಾಂಗಿಯಾಗಿ ಹಲವು ಬಾರಿ ಈ ಅಂಗಡಿಗೆ ಬಂದಿದ್ದ ಬಾಲಕಿಯ ಮೇಲೆ 19ರ ಯುವಕನಿಗೆ ಪ್ರೀತಿ ಶುರುವಾಗಿದೆ. ಇದ್ಯಾವುದರ ಪರಿವೇ ಇಲ್ಲದೆ ಚಹಾ ಪುಡಿ ತರಲು ಅಂಗಡಿಗೆ ಬಂದ ಬಾಲಕಿಯ ಕೈ ಹಿಡಿದು ಐ ಲವ್ ಯು ಎಂದು ಪ್ರಪೋಸ್ ಮಾಡಿದ್ದಾನೆ.  ಈತನ ಪ್ರೇಮ ನಿವೇದನೆಗೆ ಬಾಲಕಿ ಬೆಚ್ಚಿ ಬಿದ್ದಿದ್ದಾಳೆ. ಕೈಗಳನ್ನು ಗಟ್ಟಿಯಾಗಿ ಹಿಡಿದು ಪ್ರೀತಿಯ ಮಾತನಾಡಲು ಆರಂಭಿಸಿದ್ದಾನೆ. ಕೈಗಳನ್ನು ಬಿಡಿಸಿಕೊಂಡ ಬಾಲಕಿ ಕಣ್ಣೀರಿಟ್ಟಿದ್ದಾಳೆ. ಇದೇ ವೇಳೆ ಈ ವಿಚಾರ ಮನೆಯಲ್ಲಿ ಹೇಳಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಸಿದ್ದಾನೆ.

Tap to resize

Latest Videos

11 ವರ್ಷದ ವಿದ್ಯಾರ್ಥಿನಿ ಮೇಲೆ ರೇಪ್... ಬಾಲಕಿ ಸೇರಿದಂತೆ ಮೂವರು ಬಾಲಕರ ಬಂಧನ

ಚಹಾ ಪುಡಿಯನ್ನು ಪಡೆಯದೇ ಕಣ್ಣೀರಿಡುತ್ತಲೆ ಮನೆಗೆ ಮರಳಿದ ಬಾಲಕಿ ನಡದ ಘಟನೆಯನ್ನು ತಾಯಿಗೆ ವಿವರಿಸಿದ್ದಾಳೆ. ಶಾಕಿನಾಕ ಪೊಲೀಸ್ ಠಾಣೆಗೆ ತೆರಳಿದ ಬಾಲಕಿ ತಾಯಿ ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸರು ವಿಚಾರಣೆ ನಡೆಸಿ ಸಾಕ್ಷಿಗಳನ್ನು ಕಲೆ ಹಾಕಿ ಕೋರ್ಟ್‌ಗೆ ಪ್ರಸ್ತುತಪಡಿಸಿದ್ದಾರೆ. ಈ ಪೋಕ್ಸೋ ಪ್ರಕರಣ ವಿಚಾರಣೆ ನಡೆಸಿದ  ಜಡ್ಜ್ ಅಶ್ವಿನಿ ಲೋಕಂಡೆ, ಜುಲೈ 30 ರಂದು ಮಹತ್ವದ ತೀರ್ಪು ನೀಡಿದ್ದಾರೆ.

ವಿಚಾರಣೆ ವೇಳೆ ತಾನು ನಿರಪರಾಧಿ ಎಂದು ಯುವಕನ ಪರ ವಕೀಲರು ವಾದಿಸಿದ್ದಾರೆ. ಬಾಲಕಿ ಹಾಗೂ ಯುವಕ ಇಬ್ಬರು ಪ್ರೀತಿಯಲ್ಲಿದ್ದರು ಎಂದು ವಾದಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಡ್ಜ್, ಇಬ್ಬರು ಪ್ರೀತಿಯಲ್ಲಿದ್ದರೆ, ಈ ವಿಚಾರ ಅಳುತ್ತಾ ತಾಯಿಯಲ್ಲಿ ಹೇಳವ ಪ್ರಸಂಗ ಬಾಲಕಿಗೆ ಬರುತ್ತಿರಲಿಲ್ಲ. ಪೋಷಕರಿಗೆ ಈ ವಿಚಾರವನ್ನು ಮುಚ್ಚಿಡುತ್ತಿದ್ದಳು ಎಂದು ಗದರಿದ್ದಾರೆ. ಸುದೀರ್ಘ ವಿಚಾರಣೆ ಬಳಿಕ 19ರ ಯುವಕ ತಪ್ಪಿತಸ್ಥ ಎಂದು ಸಾಬೀತಾಗಿದೆ. ಹೀಗಾಗಿ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಕೊಡಗು: ಬಾಲಕಿ ಮೇಲೆ ಅತ್ಯಾಚಾರ, ಮತ್ತೊಬ್ಬಾಕೆ ಮೇಲೆ ರೇಪ್‌ಗೆ ಸ್ಕೆಚ್‌, ಐವರು ಕಾಮುಕರ ಬಂಧನ
 

click me!