ಮದುವೆಯಾದ ಹೆಂಡತಿಯನ್ನು ಸುಖವಾಗಿ ನೋಡಿಕೊಳ್ಳಬೇಕಿದ್ದ ಗಂಡನೇ ತನ್ನ ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು (ಆ.02): ಮದುವೆ ಮಾಡಿಕೊಂಡು ಹೆಂಡತಿಯನ್ನು ಸುಖವಾಗಿ ನೋಡಿಕೊಳ್ಳಬೇಕಿದ್ದ ಗಂಡನೇ ತನ್ನ ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಮದುವೆ ಮಾಡಿಕೊಂಡು ಒಂಭತ್ತು ವರ್ಷದಿಂದ ಕಷ್ಟ ಸುಖದ ನಡುವೆಯೇ ಗಂಡನೊಂದಿಗೆ ಜೀವನ ನಡೆಸಿದ್ದ ಫಾತಿಮಾಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಹೆಂಡತಿ ಸಂಸಾರ ಜೋಡೆತ್ತಿನ ಬಂಡಿಯಂತೆ ಸಂಸಾರ ಸಾಗುತ್ತಿತ್ತು. ಇನ್ನು ಸಂಸಾರ ನಡೆಸಲು ಗಂಡ ದುಡಿಯಬೇಕು, ಹೆಂಡತಿ ಮನೆಯನ್ನು ನಡೆಸಬೇಕು ಎಂಬುದು ಗಾದೆಯಾಗಿದೆ. ಒಂದು ವೇಳೆ ಗಂಡ ದುಡಿಯದೆ ನಿರುದ್ಯೋಗಿ ಆಗಿದ್ದರೂ ಪರವಾಗಿಲ್ಲ, ಆದರೆ ಕಳ್ಳ, ಸುಳ್ಳ, ಮದ್ಯವ್ಯಸನಾಗಿರಬಾರದು. ಆದರೆ, ಇಲ್ಲಿ ಗಂಡ ಗಾಂಜಾ ಸೇವನೆ ಮಾಡುತ್ತಾ ಕಳ್ಳತನ ಮಾಡಿ ಪೊಲೀಸರಿಗೆ ಬೇಕಾಗಿರುವ ಆರೋಪಿಯಾಗಿದ್ದು, ಹೆಂಡತಿ ಮಕ್ಕಳಿಗೆ ಈತನಿಂದ ಸಮಾಜದಲ್ಲಿ ಅವಮಾನವೇ ಎದುರಾಗುತ್ತಿತ್ತು. ಇದರಿಂದ ಗಂಡನಿಂದ ದೂರವಿದ್ದ ಹೆಂಡತಿಯನ್ನು ಈಗ ಗಂಡನೇ ಚಾಕು ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ.
undefined
ಮದುವೆಯಾದ ಗೆಳತಿಗೆ ಸಹಕರಿಸುವಂತೆ ಕಿರುಕುಳ ಕೊಟ್ಟ ಕ್ಲಾಸ್‌ಮೇಟ್ಸ್; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು
ಹೌದು, ಬೆಂಗಳೂರಿನಲ್ಲಿ ಪತಿಯಿಂದ ಪತ್ನಿಯ ಕೊಲೆಯಾಗಿರುವ ಘಟನೆ ಚಾಮರಾಜಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆ ಫಾತಿಮಾ (34) ಆಗಿದ್ದಾಳೆ. ಈಕೆಯ ಗಂಡ ತಬ್ರೇಜ್ ಪಾಷಾ ಕೊಲೆ ಮಾಡಿದ ಆರೋಪಿ ಆಗಿದ್ದಾನೆ. ಹಲವು ದಿನಗಳಿಂದ ಇಬ್ಬರ ಮಧ್ಯೆ ಜಗಳ ಆಗ್ತಿತ್ತು. ಕೌಟುಂಬಿಕ ವಿಚಾರವಾಗಿ ಆಗಾಗ ಜಗಳ ಮಾಡುತ್ತಿದ್ದವರಿಗೆ ಕುಟುಂಬದ ಹಿರಿಯರು ಬುದ್ಧಿ ಹೇಳಿ ಸಂಸಾರ ನಡೆಸಿಕೊಂಡು ಹೋಗುವಂತೆ ಬುದ್ಧಿ ಹೇಳುತ್ತಿದ್ದರು. ಆದರೆ, ಇಂದು ಬೆಳಗ್ಗೆ ಕೂಡ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಬೆಳಗ್ಗೆ 8.30ರ ಸುಮಾರಿಗೆ ಗಂಡ ತಬ್ರೇಜ್ ಪಾಷಾ ಹೆಂಡಿತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಅಲ್ಲಿಂದ ಪರಾರಿ ಆಗಿದ್ದಾನೆ. ಈ ಘಟನೆ ನಡೆದ ಬೆನ್ನಲ್ಲಿಯೇ ಸ್ಥಳೀತರು ನೋಡಿದಾಗ ಕೊಲೆ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.
ಪಂಚೆ ಧರಿಸಿದ ರೈತನಿಗೆ ಅವಮಾನ; ಬೆಂಗಳೂರು ಮಾಲ್‌ಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಬಿಬಿಎಂಪಿ
ಫಾತಿಮಾ ಮತ್ತು ತಬ್ರೇಜ್ ಪಾಷಾ 9 ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಎರಡು ಮಕ್ಕಳಿದ್ದಾರೆ. ಆದರೆ, ತಬ್ರೇಜ್ ಪಾಷಾ ಇತ್ತೀಚೆಗೆ ಗಾಂಜಾ, ಕಳ್ಳತನದ ಕೇಸ್ ನಲ್ಲಿ ಭಾಗಿಯಾಗಿದ್ದನು. ಪೊಲೀಸರಿಗೆ ಬೇಕಾದ ಆರೋಪಿ ಆಗಿದ್ದನು. ಅಲ್ಲದೇ ಮನೇಲಿ ಪತ್ನಿ ಜೊತೆ ಹೆಚ್ಚು ಜಗಳ ಮಾಡ್ತಿದ್ದನು. ಇಬ್ಬರ ಜಗಳ ನೋಡಿದ ಸಂಬಂಧಿಕರು ವಿಚ್ಛೇದನ ನೀಡಿಸೋಕು ಪ್ರಯತ್ನ ಮಾಡುತ್ತಿದ್ದರು. ಇಂದು ಬೆಳಗ್ಗೆ ಜಗಳದಲ್ಲಿ ಪತ್ನಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಕೊಲೆ ನಂತರ ಪರಾರಿ ಆಗಿರುವ ಆರೋಪಿಗಾಗಿ ಪೊಲೀಸರಿ ಹುಡುಕಾಟ ನಡೆಸಿದ್ದಾರೆ.