ಎದೆ ಮೇಲೆ ಬೈಬಲ್ ಇಟ್ಟು ಸತ್ತ ಮಗನಿಗೆ ಜೀವ ತುಂಬಲು ಹೆತ್ತ ತಾಯಿ ಪರದಾಟ, ಮುಂದೆ ಆಗಿದ್ದು ಇದೇ!

Published : May 26, 2026, 02:32 PM IST
  Heartbreaking incident

ಸಾರಾಂಶ

Heartbreaking incident : ಪಾಲಕರ ಮುಂದೆ ಮಕ್ಕಳು ಸಾವನ್ನಪ್ಪಿದ್ರೆ ನೋವು ಹೇಳತೀರದು. ಅನೇಕರು ಈ ಕಟು ಸತ್ಯವನ್ನು ನಂಬಲು ಸಿದ್ಧವಿರೋದಿಲ್ಲ. ಮಕ್ಕಳನ್ನು ಬದುಕಿಸುವ ಪ್ರಯತ್ನ ನಡೆಸ್ತಾರೆ. ಮಧ್ಯಪ್ರದೇಶದಲ್ಲೂ ತಾಯಿಯೊಬ್ಬಳು ಐದು ದಿನಗಳ ಕಾಲ ಸತ್ತ ಮಗನನ್ನು ಬದುಕಿಸುವ ಯತ್ನ ಮಾಡಿದ್ದಾಳೆ. 

ಮಧ್ಯಪ್ರದೇಶದ ವಿದಿಶಾ (Vidisha)ದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಗ ಸತ್ತು ಐದು ದಿನಗಳಾದ್ರೂ ತಾಯಿ ಸಂಬಂಧಿಕರಿಗೆ ವಿಷ್ಯ ತಿಳಿಸದೆ ಮಗನನ್ನು ಬದುಕಿಸುವ ಪ್ರಯತ್ನ ಮಾಡಿದ್ದಾಳೆ. ಬೈಬಲ್ ಹಿಡಿದು ಪ್ರಾರ್ಥನೆ ಮಾಡ್ತಿದ್ದ ತಾಯಿ, ಮಗ ಸತ್ತಿರೋದನ್ನು ಒಪ್ಪಿಕೊಳ್ಳಲು ಸಿದ್ದವಿರಲಿಲ್ಲ.

ಮಗನನ್ನು ಬದುಕಿಸಲು ತಾಯಿಯ ನಿರಂತರ ಪ್ರಯತ್ನ

ಪಾಲಕರ ಮುಂದೆ ಮಕ್ಕಳು ಸತ್ರೆ ಅದ್ರಂತ ನೋವು ಮತ್ತ್ಯಾವುದಿಲ್ಲ. ಪುತ್ರ ಶೋಕಂ ನಿರಂತರಂ ಎನ್ನುವ ಮಾತಿದೆ. ಮಧ್ಯಪ್ರದೇಶದ ಮಹಿಳೆಯೊಬ್ಬಳು ಸತ್ತ ಮಗನನ್ನು ಬದುಕಿಸಲು ನಿರಂತರ ಪ್ರಯತ್ನ ಮಾಡಿದ್ದಾಳೆ. ಶವದ ಎದೆ ಮೇಲೆ ಬೈಬಲ್ ಇಟ್ಟು ಪ್ರಾರ್ಥನೆ ಮಾಡಿದ್ದಾಳೆ. ಆದರೆ ತಾಯಿ ಪ್ರಾರ್ಥನೆ ಫಲಿಸಲಿಲ್ಲ. ಸತ್ತ ಮಗ ಮತ್ತೆ ಕಣ್ಣು ಬಿಡಲಿಲ್ಲ. ಆತನ ಶವ ಕೊಳೆಯಲು ಶುರುವಾಗಿದೆ. ವಾಸನೆ ಮನೆ ತುಂಬ ಹರಡಿದೆ. ಆದ್ರೂ ತಾಯಿ ಜೀವ ಸತ್ಯ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಮಗನ ಅಂತ್ಯ ಸಂಸ್ಕಾರಕ್ಕೆ ಮನಸ್ಸು ಒಪ್ಪುತ್ತಿರಲಿಲ್ಲ. ಕೊನೆಯಲ್ಲಿ ಮನೆಗೆ ಹಾಲಿನವನು ಬಂದಾಗ, ಮಗ ಸತ್ತ ಸಂಗತಿ ಬಹಿರಂಗವಾಗಿದೆ.

ಕಣ್ಣಮುಂದೆ ಬಂಗಾರ ಇದ್ರೂ ಮುಟ್ಟಲ್ಲ.. ಬೆಳ್ಳಿ ಕಂಡ್ರೆ ಬಿಡೋಲ್ಲ! ಬೆಂಗಳೂರಲ್ಲಿ ವಿಚಿತ್ರ ಕಳ್ಳರ ಗ್ಯಾಂಗ್‌ಗೆ ಪೊಲೀಸರೇ ಶಾಕ್!

ಮೃತನ ಹೆಸರು ಶಿನು ವರ್ಗಿಸ್. 42 ವರ್ಷದ ಮೃತನ ತಾಯಿ ಹೆಸರು ಮರಿಯಾಮಾ ವರ್ಗಿಸ್. ಶಿನು ವರ್ಗಿಸ್ ಕೆಲ ವರ್ಷ ಮುಂಬೈನಲ್ಲಿ ಫ್ಯಾಷನ್ ಡಿಸೈನರ್ ಆಗಿ ಕೆಲ್ಸ ಮಾಡ್ತಿದ್ದ. ಕಳೆದ ಎರಡು ವರ್ಷಗಳಿಂದ ತಾಯಿ ಜೊತೆ ವಿದಿಶಾದಲ್ಲಿ ವಾಸವಾಗಿದ್ದ. ಮರಿಯಾಮಾ ವರ್ಗಿಸ್ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. ಮರಿಯಾಮಾ ವರ್ಗಿಸ್ ಪತಿ ಕಳೆದ ವರ್ಷ ಸಾವನ್ನಪ್ಪಿದ್ದರು. ನಂತ್ರ ತಾಯಿ – ಮಗ ಇಬ್ಬರೇ ವಾಸವಾಗಿದ್ದರು. ದೇವರನ್ನು ಅಪಾರವಾಗಿ ನಂಬುತ್ತಿದ್ದ ಮರಿಯಾಮಾ ವರ್ಗಿಸ್, ಮಗನನ್ನು ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಬೈಬಲ್ ಓಡಿದ್ರೆ ಮಗ ಬದುಕಿ ಬರ್ತಾನೆ ಅಂತ ನಂಬಿದ್ದಾರೆ. ಶವದ ಎದೆ ಮೇಲೆ ಬೈಬಲ್ ಇಟ್ಟು ಪ್ರಾರ್ಥನೆ ಮಾಡಿದ್ದಾರೆ.

ಡಿವೋರ್ಸ್​ ಮಗಳು ಬೇಕೋ, ಆಕೆ ಹೆಣ ಬೇಕೊ? ಗೋಡೆಗೆ ಗುದ್ದುವವರೆಗೂ ಕಾಯ್ತೀರಾ? ಕೋರ್ಟ್​ ಪ್ರಶ್ನೆ

ಶಿನು ಮನೆಗೆ ಯಾರೂ ಬರ್ತಿರಲಿಲ್ಲ, ಶಿನು ಅವನ ತಾಯಿ ಕೂಡ ಯಾರ ಮನೆಗೂ ಹೋಗ್ತಿರಲಿಲ್ಲ. ಹಾಗಾಗಿ ಶಿನು ಸಾವಿನ ಸುದ್ದಿ ಯಾರಿಗೂ ತಿಳಿದಿರಲಿಲ್ಲ. ಹಾಲಿನವನು ಮನೆಗೆ ಬಂದಾಗ ವಾಸನೆ ಬಂದಿದೆ. ಬೆಡ್ ರೂಮಿನಲ್ಲಿ ರಕ್ತ ಕಾಣಿಸಿದೆ. ಅಕ್ಕಪಕ್ಕದವರಿಗೆ ಹಾಲಿನವನು ವಿಷ್ಯ ಮುಟ್ಟಿಸಿದ್ದಾನೆ. ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಶಿನು ವರ್ಗಿಸ್ ಮನೆಗೆ ಬಂದಿದ್ದಾರೆ. ಮನೆ ಪ್ರವೇಶಿಸಲು ಮರಿಯಾಮಾ ವರ್ಗಿಸ್ ನಿರಾಕರಿಸಿದ್ದಾರೆ. ಪೊಲೀಸರು ಬಲವಂತವಾಗಿ ಮನೆ ಪ್ರವೇಶ ಮಾಡಿದಾಗ ಶಿನು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಶವ ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತ್ರ ಸಾವಿನ ಸತ್ಯ ಬಯಲಾಗಬೇಕಿದೆ. ಶಿನು ಸ್ವಲ್ಪ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ತಾಯಿ ಮಾನಸಿಕ ಸ್ಥಿತಿ ಸರಿಯಾಗಿರಲಿಲ್ಲ. ಮನೆಯಿಂದ ವಾಸನೆ ಬರ್ತಿದ್ರೂ ನೆರೆಯವರು ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಪ್ರಾಣಿ ಸತ್ತಿರಬೇಕೆಂದು ಭಾವಿಸಿದ್ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಣ್ಣು ಕಾಣದ ಸ್ನೇಹಿತೆಯ ಮನೆಯಲ್ಲಿ ಚಿನ್ನ ಕದ್ದ ಖತರ್ನಾಕ್ ದಂಪತಿ! ಒಂದು ವರ್ಷದ ಬಳಿಕ ಪ್ರಕರಣ ಬಯಲು, ಅರೆಸ್ಟ್!
ಕಣ್ಣಮುಂದೆ ಬಂಗಾರ ಇದ್ರೂ ಮುಟ್ಟಲ್ಲ.. ಬೆಳ್ಳಿ ಕಂಡ್ರೆ ಬಿಡೋಲ್ಲ! ಬೆಂಗಳೂರಲ್ಲಿ ವಿಚಿತ್ರ ಕಳ್ಳರ ಗ್ಯಾಂಗ್‌ಗೆ ಪೊಲೀಸರೇ ಶಾಕ್!