Crime News ಕೊಟ್ಟ ಸಾಲ ಕೇಳಿದ್ದಕ್ಕೆ ಅನೈತಿಕ ಸಂಬಂಧ ಪಟ್ಟ, ಮನನೊಂದು ತಾಯಿ-ಮಕ್ಕಳು ಆತ್ಮಹತ್ಯೆ

By Suvarna News  |  First Published Jan 15, 2022, 9:17 PM IST

* ಅಪಪ್ರಚಾರಕ್ಕೆ ತಾಯಿ , ಇಬ್ಬರು ಮಕ್ಕಳು ಸೇರಿ ಮೂವರು ಬಲಿ
* ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ ಮಕ್ಕಳು
* ಇಬ್ಬರ ಅಪಪ್ರಚಾರಕ್ಕೆ ವೀಣಾ ಮಾನಸಿಕವಾಗಿ ಕುಗ್ಗಿ ಮನನೊಂದಿದ್ದರು 


ಶಿವಮೊಗ್ಗ, (ಜ.15): ಮಹಿಳೆಯೋರ್ವರು ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ಜಿಲ್ಲೆಯ ಭದ್ರಾವತಿಯ ಹಂಚಿನ ಸಿದ್ದಾಪುರದಲ್ಲಿ ಶನಿವಾರ ನಡೆದಿದೆ.

ಭದ್ರಾವತಿ ತಾಲೂಕಿನ ಯಡೇಹಳ್ಳಿಯ ನಿವಾಸಿ ವೀಣಾ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡವರು. ವೀಣಾ ಹಾಗೂ ಸಂತೋಷ್ ದಂಪತಿಯು ಭದ್ರಾವತಿ ತಾಲೂಕಿನ ಅರಹತೋಳಲು ಗ್ರಾಮದ ಸಂತೋಷ ಹಾಗೂ ಆಶಾ ಎಂಬುವರಿಗೆ 8 ಲಕ್ಷ ರೂ. ಸಾಲ ನೀಡಿದ್ದರು. 

Tap to resize

Latest Videos

undefined

Crime News ಗಂಡನ ಮೇಲಿನ ಸಿಟ್ಟಿಗೆ ಡಾಬಾಗೆ ಬೆಂಕಿ ಹಚ್ಚಲು ಪತ್ನಿ ಸುಪಾರಿ, ಅಮಾಯಕ ಜೀವ ಬಲಿ

ಹಣ ವಾಪಾಸ್ ಕೇಳಿದ್ದಕ್ಕೆ  ಸಂತೋಷ್  ಹಾಗೂ ಆಶಾ ಎಂಬುವರು ಸೇರಿ ವೀಣಾರಿಗೆ ಬೇರೆಯವರೊಂದಿಗೆ ಅನೈತಿಕ ಸಂಬಂಧವಿದೆ ಎಂದು ಅಪಪ್ರಚಾರ ಮಾಡಿದ್ದಾರೆ ಎನ್ನಲಾಗ್ತಿದೆ.  ಇದರಿಂದ ಬೇಸತ್ತ ವೀಣಾ 7 ವರ್ಷದ ಮಗಳಾದ ಜ್ಞಾನವಿ ಹಾಗೂ ಒಂದು ವರ್ಷದ ದೈವಿಕಾ ಎಂಬ ಇಬ್ಬರು ಹೆಣ್ಣು‌ ಮಕ್ಕಳೊಂದಿಗೆ ಹಂಚಿನ ಸಿದ್ದಾಪುರ ಗ್ರಾಮದ ಬಳಿಯ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜ.13ರಂದು ವೀಣಾ ತನ್ನ ಮಕ್ಕಳೊಂದಿಗೆ ತವರು ಮನೆಯಾದ ಹೊಳಲ್ಕೆರೆಗೆ ಹೋಗುವುದಾಗಿ ಹೇಳಿ ಹೊರಟಿದ್ದರು ಎಂದು ಹೇಳಲಾಗಿದೆ.

ವೀಣಾ ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ನಾಲೆಯ ದಡದ ಮೇಲೆಯೇ ಬ್ಯಾಗ್ ಇಟ್ಟಿದ್ದಾರೆ.‌ ವೀಣಾ ಮೃತದೇಹವು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ  ಯಕ್ಕನಹಳ್ಳಿ ಬಳಿ ಹಾಗೂ ಜ್ಞಾನವಿ ಮೃತದೇಹ ಚನ್ನಗಿರಿ ತಾಲೂಕಿನ ನಲ್ಲೂರು ಸಮೀಪ ಪತ್ತೆಯಾಗಿದ್ದು, ದೈವಿಕಾಳ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಈ ಕುರಿತು ಮೃತ ವೀಣಾ ಪತಿ ಸಂತೋಷ್ ನೀಡಿದ ದೂರಿನ ಮೇರೆಗೆ ಅರಹತೋಳಲು ಗ್ರಾಮದ ಸಂತೋಷ್(35) ನನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಆದರೆ ಆಶಾ ಪರಾರಿಯಾಗಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಲೀವಿಂಗ್ ರಿಲೇಷನ್‌ಶಿಪ್​ನಲ್ಲಿದ್ದ ಪ್ರಿಯತಮೆ ಕೊಂದ ಆರೋಪಿ ಅರೆಸ್ಟ್
ಬೆಂಗಳೂರು: ಲೀವಿಂಗ್ ರಿಲೇಷನ್‌ಶಿಪ್ನಲ್ಲಿದ್ದ ಪ್ರಿಯತಮೆ ಮೇಲೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ನಡೆದಿದೆ. ಮಂಜುಳಾ ಕೊಲೆಯಾದವರು. ಸದ್ಯ ಘಟನೆ ಸಂಬಂಧ ಆರೋಪಿ ಮಂಜುನಾಥ್ನನ್ನು ಪೊಲೀಸರು ಬಂಧಿಸಿದ್ದಾರೆ.

ಮೂರು ದಿನಗಳ ಹಿಂದೆ ಕೋಣನಕುಂಟೆ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು. ಕೋಣನಕುಂಟೆಯ ಬೀರೇಶ್ವರ ನಗರದಲ್ಲಿ ಗಂಡನಿಲ್ಲದ ಮಂಜುಳಾ(35) ಜೊತೆ ಮಂಜುನಾಥ್ ಲೀವಿಂಗ್ ರಿಲೇಷನ್‌ಶಿಪ್ನಲ್ಲಿದ್ದ. ಮಂಜುಳಾಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧವಿರೋದಾಗಿ ಅನುಮಾನಿಸಿ ಆಕೆಯನ್ನು ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸುವ ನಾಟಕವಾಡಿದ್ದ. ಸದ್ಯ ಕೋಣನಕುಂಟೆ ಠಾಣೆ ಪೊಲೀಸರು ಆರೋಪಿ‌ ಮಂಜುನಾಥ್ನನ್ನು ಬಂಧಿಸಿದ್ದಾರೆ.

click me!