ಪಾಲಕರೇ ಎಚ್ಚರ ! ನಿಮ್ಮ ಮಕ್ಕಳೂ ನಶೆಯಲ್ಲಿ ತೇಲ್ಬಹುದು

Published : Jul 31, 2026, 11:52 AM IST
New study

ಸಾರಾಂಶ

New study : ಮಕ್ಕಳ ಬಗ್ಗೆ ನಡೆದ ಸಂಶೋಧನೆಯೊಂದು ಕಳವಳಕಾರಿ ವಿಷ್ಯವನ್ನು ಹೊರ ಹಾಕಿದೆ. ಹದಿಹರೆಯದ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಈ ಅಧ್ಯಯನ ಪಾಲಕರನ್ನು ಎಚ್ಚೆರಿಸುತ್ತಿದೆ.

ಶಾಲೆಗೆ ಹೋಗ್ತಿರುವ ಮಕ್ಕಳ ಮೇಲೆ ಪಾಲಕರು ಕಣ್ಣಿಡುವ ಅವಶ್ಯಕತೆ ಇದೆ. ನಮ್ಮ ಮಕ್ಕಳು ಹಾಗಲ್ಲ ಅನ್ನೋ ನಿಮ್ಮ ಅತಿಯಾದ ಭರವಸೆ ಮಕ್ಕಳ ಬಾಳನ್ನು ಹಾಳುವ ಮಾಡುವ ಸಾಧ್ಯತೆ ಇದೆ. ದೇಶದಲ್ಲಿ ಹದಿಹರೆಯದ ಮಕ್ಕಳ ಮೇಲೆ ನಡೆದ ಅಧ್ಯಯನವೊಂದು ಬೆಚ್ಚಿ ಬೀಳಿಸಿದೆ. 

ನಶೆ ಚಟಕ್ಕೆ ಮಕ್ಕಳು !

ದೇಶದ 6 ಜಿಲ್ಲೆಗಳ 108 ಶಾಲೆಗಳ 6,168 ವಿದ್ಯಾರ್ಥಿಗಳ ಮೇಲೆ ನಡೆಸಿದ ಮಹತ್ವದ ಅಧ್ಯಯನವೊಂದು ಆಘಾತಕಾರಿ ಸಂಗತಿಯನ್ನು ಹೊರ ಹಾಕಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)ಯ ನೆರವಿನಿಂದ ನಡೆದ ಈ ಸಂಶೋಧನೆ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ನಲ್ಲಿ ಪ್ರಕಟವಾಗಿದೆ.

ಅಧ್ಯಯನದ ಪ್ರಕಾರ, ಪ್ರತಿ ಐದು ವಿದ್ಯಾರ್ಥಿಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಕ್ಕಳು ಭವಿಷ್ಯದಲ್ಲಿ ನಶೆಯ ವ್ಯಸನಿಗಳಾಗುವ ಅಪಾಯ ಇದೆ. ಈ ಮಕ್ಕಳು ಈಗ ಯಾವುದೇ ನಶೆ ಮಾಡುತ್ತಿಲ್ಲ. ಆದರೆ ಅವರ ವ್ಯಕ್ತಿತ್ವ, ವರ್ತನೆ ಮತ್ತು ಪರಿಸರವನ್ನು ಆಧರಿಸಿ ಭವಿಷ್ಯದಲ್ಲಿ ಅಪಾಯ ಹೆಚ್ಚಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಅಧ್ಯಯನದಲ್ಲಿ ಗುವಾಹಟಿಯ ವಿದ್ಯಾರ್ಥಿಗಳಲ್ಲಿ ನಶೆಯ ಅಪಾಯ ಅತ್ಯಧಿಕವಾಗಿದೆ ಎಂಬುದು ತಿಳಿದು ಬಂದಿದೆ. ನಾಗಪುರ ಮತ್ತು ಪುದುಚೇರಿಯಲ್ಲಿ ಅತ್ಯಂತ ಕಡಿಮೆ ಸಾಧ್ಯತೆ ಕಂಡುಬಂದಿದೆ. ಈ ವ್ಯತ್ಯಾಸಕ್ಕೆ ಶಾಲೆಯ ವಾತಾವರಣ ಹಾಗೂ ಮಕ್ಕಳ ವ್ಯಕ್ತಿತ್ವ ಪ್ರಮುಖ ಕಾರಣಗಳಾಗಿವೆ.

ಕೋಪದಲ್ಲಿ ತಕ್ಷಣ ನಿರ್ಧಾರ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಸ್ವಭಾವ, ಆತಂಕದ ಮಟ್ಟ, ಅತಿಯಾದ ಸಾಹಸಪ್ರಿಯತೆ ಹಾಗೂ ಹೊಸ ಅನುಭವಗಳತ್ತ ಇರುವ ಆಕರ್ಷಣೆ ಮುಂತಾದ ಅಂಶಗಳನ್ನು ಪರಿಶೀಲಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಇಂತಹ ಗುಣಲಕ್ಷಣಗಳು ಭವಿಷ್ಯದಲ್ಲಿ ನಶೆಯತ್ತ ಸೆಳೆಯುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ಹೇಳಿದೆ.

ಮೊಬೈಲ್, ಇಂಟರ್ನೆಟ್ ಮತ್ತು ಸೋಷಿಯಲ್ ಮೀಡಿಯಾದ ಅತಿಯಾದ ಬಳಕೆ ಕೂಡ ಪ್ರಮುಖ ಕಾರಣವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಹೆಚ್ಚು ಸಮಯ ಡಿಜಿಟಲ್ ವೇದಿಕೆಗಳಲ್ಲಿ ಕಳೆಯುವ ಮಕ್ಕಳು ನಶೆಗೆ ಸಂಬಂಧಿಸಿದ ವಿಷಯಗಳನ್ನು ನೋಡುತ್ತಾರೆ. ಇದರಿಂದ ನಶೆಯ ಬಗ್ಗೆ ಕುತೂಹಲ ಬೆಳೆಯಬಹುದು. ಕೆಲವರಿಗೆ ನಶೆ ಮಾಡುವುದು ಸಾಮಾನ್ಯ ಅಥವಾ ಅಪಾಯವಿಲ್ಲದ ವಿಷಯ ಎಂಬ ತಪ್ಪು ಕಲ್ಪನೆಯೂ ಮೂಡಬಹುದು.

ಮತ್ತೊಂದು ಆತಂಕಕಾರಿ ಸಂಗತಿ ಎಂದರೆ, ತಂಬಾಕು, ಮದ್ಯದಂತಹ ನಶೆ ಪದಾರ್ಥಗಳು ಸುಲಭವಾಗಿ ದೊರೆಯುವ ಪರಿಸರದಲ್ಲಿರುವ ಮಕ್ಕಳಲ್ಲಿ ನಶೆಯ ಅಪಾಯ ಶೇ.75ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನ ಹೇಳಿದೆ.

ಪೋಷಕರು, ಶಿಕ್ಷಕರು ಮತ್ತು ಸಮಾಜವು ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವುದು ಅತಿ ಅಗತ್ಯ. ಮೊಬೈಲ್ ಬಳಕೆಗೆ ಮಿತಿ ವಿಧಿಸುವುದು, ಉತ್ತಮ ಸ್ನೇಹ ಬಳಗ ಮತ್ತು ಆರೋಗ್ಯಕರ ಹವ್ಯಾಸಗಳನ್ನು ಬೆಳೆಸುವುದು ಅತ್ಯಂತ ಅಗತ್ಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಕ್ಕಾಪಟ್ಟೆ ಹಣ ಕಳೆದುಕೊಂಡ ಸ್ಟಾರ್ ನಟಿ, OTP ಹೇಳಿಲ್ಲ, ಲಿಂಕ್ ಕ್ಲಿಕ್ ಮಾಡಿಲ್ಲ.. ಆದ್ರೂ ಹೀಗೆ ಆಗಿದ್ದು ಹೇಗೆ?!
ಬೆಂಗಳೂರು: ಮಗಳನ್ನು ಪ್ರೊಫೆಸರ್‌ ಓದಿಸಿ; ಮದುವೆಗೆ ಮುನ್ನ 40 ಲಕ್ಷ ಜತೆ ತಿಂಗಳ ಸ್ಯಾಲರಿ ಕೇಳಿದ ಅಪ್ಪ! ಒಪ್ಪದ ಪುತ್ರಿಗೆ ಚಾಕು!