ಬೆಂಗಳೂರು: ಮಗಳನ್ನು ಪ್ರೊಫೆಸರ್‌ ಓದಿಸಿ; ಮದುವೆಗೆ ಮುನ್ನ 40 ಲಕ್ಷ ಜತೆ ತಿಂಗಳ ಸ್ಯಾಲರಿ ಕೇಳಿದ ಅಪ್ಪ! ಒಪ್ಪದ ಪುತ್ರಿಗೆ ಚಾಕು!

Published : Jul 30, 2026, 08:22 PM IST
Bengaluru Crime

ಸಾರಾಂಶ

ಬೆಂಗಳೂರಿನಲ್ಲಿ, ಪ್ರೊಫೆಸರ್ ಆಗಿರುವ ಮಗಳ ಮದುವೆಗೆ 40 ಲಕ್ಷ ಹಾಗೂ ತಿಂಗಳ ಸಂಬಳ ಕೇಳಿದ ತಂದೆ, ಮಗಳು ಒಪ್ಪದಿದ್ದಕ್ಕೆ ಕಾಲೇಜಿನಲ್ಲಿಯೇ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಅಪ್ಪ ಎಂದರೆ ಆಕಾಶ, ಮುಗಿಯದ ಅಧ್ಯಾಯ, ಪ್ರತಿ ಮಗುವಿನ ಬದುಕಿನಲ್ಲೂ ಅವನೇ ಸೂಪರ್‌ ಹೀರೋ. ಆದರೆ, ಮಗಳನ್ನು ಎದೆಎತ್ತರಕ್ಕೆ ಬೆಳೆಸಿ, ವಿದ್ಯೆ ಕೊಡಿಸಿ, ಅವಳನ್ನು ಪ್ರೊಫೆಸರ್‌ನ್ನಾಗಿ ಮಾಡಿದ ತಂದೆಯೇ ಇಂದು ಆಕೆಗೆ ಚಾಕುವಿನಿಂದ ಇರಿದಿದ್ದಾನೆ ಎಂದರೆ ನಂಬಲು ಸಾಧ್ಯವೇ? ಅಲ್ಲಿ ನಿಜವಾಗಿಯೂ ಆಗಿದ್ದೇನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

ಕಾರಣವಾಗಿತ್ತಾ ಕೌಟಂಬಿಕ ಕಲಹ?

ಈ ಘಟನೆ ನಡೆದಿದ್ದು ಬೆಂಗಳೂರಿನಲ್ಲಿ. ಮಗಳು ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿರುತ್ತಾಳೆ. ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲಿ, ಹಲವು ಕೌಟಂಬಿಕ ಕಲಹದಿಂದ ಹುಟ್ಟಿಸಿದ ತಂದೆಯೇ ಅವಳ ಮೇಲೆ ಹಲ್ಲೆ ಮಾಡುತ್ತಾನೆ. ಆ ಆರೋಪಿಯನ್ನು ನಾಗೇಂದ್ರ ಎಂದು ಗುರುತಿಸಲಾಗಿದೆ. ಆಕೆಯ ಮದುವೆಗೆ ಸಂಬಂಧಿಸಿದ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳ ನಂತರ ಆರೋಪಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಗೊಳಪಟ್ಟವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಲೇಜಿನಲ್ಲಿ ಮಗಳನ್ನು ಭೇಟಿಯಾದ ತಂದೆ!

ಪೊಲೀಸರ ಪ್ರಕಾರ, ಜುಲೈ 25 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಆ ಹುಡುಗಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾಗೇಂದ್ರ ಅವರು ತಮ್ಮ ಮಗಳನ್ನು ಭೇಟಿಯಾಗಲು ಕ್ಯಾಂಪಸ್‌ಗೆ ಹೋಗಿದ್ದಾರೆ. ಆಗ ಆ ಹುಡುಗಿ ಇದ್ದ ವಿಭಾಗದ ಮುಖ್ಯಸ್ಥರ ಕೊಠಡಿಗೆ ಹೋಗಿದ್ದಾರೆ. ಕೊಠಡಿಯನ್ನು ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ, ಅವನು ಚಾಕು ಹೊರತೆಗೆದು ತನ್ನ ಮಗಳ ಹೊಟ್ಟೆ, ಎದೆ ಮತ್ತು ಕುತ್ತಿಗೆಗೆ ಹಲವು ಬಾರಿ ಇರಿದು ಆವರಣದಿಂದ ಪರಾರಿಯಾಗಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ದಾಳಿಯಲ್ಲಿ ಆ ಹುಡುಗಿದೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಮದುವೆ ವಿವಾದವೇ ಕಾರಣವಾಗಿತ್ತಾ ಹಲ್ಲೆಗೆ?

ಆ ಹುಡುಗಿ ಮದುವೆಗೆ ಸಂಬಂಧಿಸಿದ ದೀರ್ಘಕಾಲದ ಕೌಟುಂಬಿಕ ಕಲಹವೇ ಈ ಹಲ್ಲೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೇ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿರುವ ನಾಗೇಂದ್ರ ತನ್ನ ಮಗಳಿಗೆ ಸೂಕ್ತ ವರನನ್ನು ಹುಡುಕುತ್ತಿದ್ದ. ಸಂಭಾವ್ಯ ವರನ ಕುಟುಂಬವು ವಿವಾಹಕ್ಕೆ ಒಪ್ಪಿಕೊಂಡ ನಂತರ, ಅವನು ತನ್ನ ಮಗಳ ಶಿಕ್ಷಣ ಮತ್ತು ವೃತ್ತಿಜೀವನಕ್ಕಾಗಿ ಗಣನೀಯ ಮೊತ್ತ ಖರ್ಚು ಮಾಡಿದ್ದೇನೆ ಎಂದು ಹೇಳಿ ಅವರಿಂದ 40 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದಲ್ಲದೇ ಆ ಹುಡುಗಿಯ ಮಾಸಿಕ ಸಂಬಳವನ್ನು ತನಗೆ ಕೊಡಬೇಕೆಂದು ನಾಗೇಂದ್ರ ಕೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಗೇಂದ್ರ ನಡೆಗೆ ವಿರೋಧಿಸಿದ ಕುಟುಂಬ!

ಕುಟುಂಬದವರು ನಾಗೇಂದ್ರ ಇಟ್ಟ ಆ ಬೇಡಿಕೆಗಳನ್ನು ವಿರೋಧಿಸಿದ್ದಾರೆ. ಇದು ಆಗಾಗ ವಾದಗಳಿಗೆ ಮತ್ತು ಕುಟುಂಬದೊಳಗೆ ಸಂಘರ್ಷ ಸೃಷ್ಟಿಗೂ ಕಾರಣವಾಗಿದೆ ಎನ್ನಲಾಗಿದೆ. ಆದ್ದರಿಂದ ಸಮಯ ನೋಡಿ ಕಾಲೇಜಿನೊಳಗಿ ನುಗ್ಗಿ ಸ್ವಂತ ಮಗಳ ಮೇಲೆ ದಾಳಿ ಮಾಡಿದ್ದಾನೆ ಎಂದು ಪೊಲೀಸ ಮೂಲಗಳಿಂದ ತಿಳಿದು ಬಂದಿದೆ. ಘಟನೆಯ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಗೇಂದ್ರನನ್ನು ಬಂಧಿಸಿದ್ದಾರೆ. ಅಲ್ಲದೇ ದಾಳಿಯ ಸುತ್ತಲಿನ ಎಲ್ಲಾ ಸನ್ನಿವೇಶಗಳನ್ನು ಗಮನಿಸಿ ಹಂತ-ಹಂತವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಿರಳೆಗಳಿಗೆ ಶುರುವಾಯ್ತು ನಡುಕ: ಪ್ರತಿಭಟನೆ ವೇಳೆ ಮುಖ ಗುರುತಿಸೋ ಸಾಧನ ಪ್ರಶ್ನಿಸಿ 'ಸುಪ್ರೀಂ' ಮೊರೆ
ಮಾಸಿಕ 20 ಸಾವಿರ ಸಂಬಳ: ದಿನಕ್ಕೆ 10 ಲಕ್ಷ ಖರ್ಚು! ಜಿರಳೆಗಳಿಗೆ ಊಟ ಕೊಟ್ಟವನ ಜಾತಕ ತೆರೆದ ಮುಸ್ಲಿಂ ಮುಖಂಡ