Moradabad Gang rape: ಬೆತ್ತಲೆಯಾಗಿ 2 ಕಿ.ಮೀ. ನಡೆದು ಮನೆ ಸೇರಿದ ಸಂತ್ರಸ್ತೆ

Published : Sep 22, 2022, 05:32 PM ISTUpdated : Sep 22, 2022, 05:34 PM IST
Moradabad Gang rape: ಬೆತ್ತಲೆಯಾಗಿ 2 ಕಿ.ಮೀ. ನಡೆದು ಮನೆ ಸೇರಿದ ಸಂತ್ರಸ್ತೆ

ಸಾರಾಂಶ

ಯೋಗಿ ರಾಜ್ಯದಲ್ಲಿ ಸರಣಿ ಗ್ಯಾಂಗ್‌ರೇಪ್‌ಗಳು ಜನರ ಹಾಗೂ ಸರ್ಕಾರದ ನಿದ್ದೆಗೆಡಿಸಿದೆ. ಈ ಮಧ್ಯೆ ಅತ್ಯಾಚಾರ ಸಂತ್ರಸ್ತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ಯಾಂಗ್‌ರೇಪ್‌ಗೆ ಒಳಗಾದ ಯುವತಿಯೊಬ್ಬಳು ಘಟನೆಯ ನಂತರ ಬೆತ್ತಲೆಯಾಗಿ ನಡೆದು ಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲಕ್ನೋ: ಯೋಗಿ ರಾಜ್ಯದಲ್ಲಿ ಸರಣಿ ಗ್ಯಾಂಗ್‌ರೇಪ್‌ಗಳು ಜನರ ಹಾಗೂ ಸರ್ಕಾರದ ನಿದ್ದೆಗೆಡಿಸಿದೆ. ಈ ಮಧ್ಯೆ ಅತ್ಯಾಚಾರ ಸಂತ್ರಸ್ತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ಯಾಂಗ್‌ರೇಪ್‌ಗೆ ಒಳಗಾದ ಯುವತಿಯೊಬ್ಬಳು ಘಟನೆಯ ನಂತರ ಬೆತ್ತಲೆಯಾಗಿ ನಡೆದು ಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರಪ್ರದೇಶದ ಮೊರದಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದು 15 ದಿನಗಳ ಬಳಿಕ ಈ ವಿಡಿಯೋ ಬೆಳಕಿಗೆ ಬಂದಿದೆ. 

ಉತ್ತರಪ್ರದೇಶದ (Uttar Pradesh) ಮೊರದಾಬಾದ್‌ನಲ್ಲಿ(Moradabad) 15 ವರ್ಷದ ಬಾಲಕಿಯನ್ನು ಐವರು ಕಾಮುಕರ ಗುಂಪು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಘಟನೆಯ ಬಳಿಕ ಬಾಲಕಿ ಮೊರದಾಬಾದ್‌ನಿಂದ-ಠಾಕುರ್‌ದ್ವಾರ ರಸ್ತೆಯಲ್ಲಿ ಸುಮಾರು ಎರಡು ಕಿಲೋ ಮೀಟರ್ ದೂರ ಬೆತ್ತಲೆಯಾಗಿ (naked) ನಡೆದು ಹೋಗಿ ಮನೆ ಸೇರಿದ್ದಾಳೆ.

ಈ ವೇಳೆ ಆಕೆಯ ನೆರವಿಗೆ ಧಾವಿಸುವ ಬದಲು ಕೆಲವರು ಆಕೆಯನ್ನು ನೋಡುತ್ತಾ ನಿಂತರೆ ಮತ್ತೆ ಕೆಲವರು ಆಕೆಯ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮನೆಗೆ ಬರುವ ವೇಳೆ ಆಕೆ ತೀವ್ರವಾಗಿ ಬ್ಲೀಡಿಂಗ್ ಆಗುತ್ತಿದ್ದು, ಮನೆಗೆ ಬಂದು ಆಕೆ ಘಟನೆ ಬಗ್ಗೆ ವಿವರಿಸಿದ್ದಾಳೆ ಎಂದು ಆಕೆಯ ಚಿಕ್ಕಪ್ಪ ಘಟನೆಯ ಭಯಾನಕತೆಯನ್ನು ವಿವರಿಸಿದ್ದಾರೆ. ನಂತರ ಚಿಕ್ಕಪ್ಪ ಹಾಗೂ ಮನೆಯವರು ಪೊಲೀಸರಿಗೆ ದೂರು ನೀಡಲು ತೆರಳಿದ್ದಾರೆ. ಆದರೆ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಟಿಯಾಲ್ ಅವರ ಬಳಿಗೆ ಈ ವಿಚಾರವನ್ನು ಕೊಂಡೊಯ್ಯುವವರೆಗೂ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. 

ಇದಾದ ಬಳಿಕವಷ್ಟೇ ಪೊಲೀಸರು ಘಟನೆ ಬಗ್ಗೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಅಲ್ಲದೇ ಆರೋಪಿಗಳಲ್ಲಿ ಓರ್ವನನ್ನು ಬಂಧಿಸಿ ಸೆ.7 ರಂದು ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೇ ಆರೋಪಿತನ ಕುಟುಂಬದವರು ತಮ್ಮನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬದವರು ಹೇಳಿದ್ದಾರೆ. ಈ ಬಗ್ಗೆ ಹೆಚ್ಚುವರಿ ಪೊಲೀಸ್ ಅಧಿಕಾರಿ ಸಂದೀಪ್ ಕುಮಾರ್ ಮೀನಾ (Sandee kumar mina) , ಪ್ರತಿಕ್ರಿಯಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376D ಅಡಿ ಹಾಗೂ ಪೋಸ್ಕೊ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಸೆಪ್ಟೆಂಬರ್ 15 ರಂದು ಓರ್ವನನ್ನು ಬಂಧಿಸಿದ್ದೇವೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. 

ಗ್ಯಾಂಗ್‌ರೇಪ್‌ ಆದ ಬೆನ್ನಲ್ಲೇ ಗರ್ಭಿಣಿಗೆ ಗರ್ಭಪಾತ, ಭ್ರೂಣ ಹಿಡಿದು ಪೊಲೀಸ್‌ ಸ್ಟೇಷನ್‌ಗೆ ಬಂದ ಅತ್ತೆ!

ಇತ್ತ ರಾಜ್ಯದಲ್ಲಿ ನಡೆಯುತ್ತಿರುವ ನಿರಂತರ ಗ್ಯಾಂಗ್‌ರೇಪ್‌ ಕೇಸ್‌ಗಳು ಉತ್ತರಪ್ರದೇಶ ಸರ್ಕಾರದ ನಿದ್ದೆಗೆಡಿಸಿದೆ. ಉತ್ತರ ಪ್ರದೇಶ ಸರ್ಕಾರವು ಅಪರಾಧ ಪ್ರಕರಣಗಳಲ್ಲಿ ಶೂನ್ಯ ಸಹಿಷ್ಣುತೆ ನೀತಿ ಜಾರಿಗೆ ತಂದಿದ್ದು,ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಿಳೆಯರ ಮೇಲಿನ ಅಪರಾಧದ ಘಟನೆಗಳ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕರೆ ನೀಡಿದ್ದಾರೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಹಲವು ದೌರ್ಜನ್ಯ ಪ್ರಕರಣಗಳು ನಡೆದಿವೆ.

ಉತ್ತರಪ್ರದೇಶ: ಮಹಿಳೆಗೆ ಕಿರುಕುಳ: ಬಿಜೆಪಿ ಶಾಸಕನ ವಿರುದ್ಧ FIR, ಮಗನ ಮೇಲೆ ಅತ್ಯಾಚಾರ ಆರೋಪ‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ