ಜೆಡಿಎಸ್ ನಾಯಕನಿಂದ ದಂಪತಿಗೆ 2 ಕೋಟಿ ರೂ. ವಂಚನೆ/ ಚಿತ್ರದುರ್ಗ ಜಿಲ್ಲ ಪಶುರಾಂಪುರ ಜಿಪಂ ಸದಸ್ಯರಿಂದ ವಂಚನೆ/ ಪೊಲೀಸರಿಗೆ ದೂರು ನೀಡಿದ ದಂಪತಿ
ಚಿತ್ರದುರ್ಗ(ಫೆ. 01) ಪರಶುರಾಂಪುರ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರ ಮೇಲೆ ವಂಚನೆ ಆರೋಪ ಕೇಳಿ ಬಂದಿದೆ. ಜಿ.ಪಂ.ಸದಸ್ಯ ಮುತ್ತುರಾಜ್ 2 ಕೋಟಿ ರೂ. ವಂಚಿಸಿದ್ದಾರೆ ಎಂಬ ಗಂಭೀರ ಆರೋಪ ಬಂದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಂಪುರ
ಜೆಡಿಎಸ್ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯರಾಗಿರುವ ಮುತ್ತುರಾಜ್ ಹಣ ವಾಪಸ್ ಕೇಳಿದ್ದಕ್ಕೆ ಪ್ರಶಾಂತ್ ಹಾಗೂ ಸ್ವಪ್ನ ದಂಪತಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಬಂದಿದೆ. ಸ್ವಪ್ನ ಖಾತೆಯಿಂದ ತನ್ನ 10 ಸ್ನೇಹಿತರ ಮುತ್ತುರಾಜ್ ಹಣ ವರ್ಗಾವಣೆ ಮಾಡಿಕೊಂಡಿದ್ದರು.
ಶೌಚಾಲಯಕ್ಕೆ ತೆರಳಿದ್ದ ಯುವತಿ ವಿಡಿಯೋ ಮಾಡಿದವ ಅಂದರ್
ಹಣ ವಾಪಸ್ ಕೇಳಿದ ಸಂದರ್ಭ ಗ್ಯಾಂಗ್ ಕಟ್ಟಿಕೊಂಡು ಬಂದು ಪ್ರಶಾಂತ್ ಮನೆಗೆ ಮುತ್ತುರಾಜ್ ಮತ್ತು ಅವರ ತಂಡ ನುಗ್ಗಿದೆ. ಸ್ವಪ್ನ ಅವರ ಪುತ್ರಿಯ ಜೊತೆ ಮುತ್ತುರಾಜ್ ಗ್ಯಾಂಗ್ ಅಸಭ್ಯ ವರ್ತನೆ ಮಾಡಿದೆ. ಪೊಲೀಸರಿಗೆ ದೂರು ಕೊಟ್ಟರೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದೆ ಎಂದು ಪ್ರಶಾಂತ್ ದಂಪತಿ ಸಂಜಯ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ಡಿಸೆಂಬರ್ 17 ರಂದು ಮುತ್ತುರಾಜ್ ಮತ್ತು ಅವರ ತಂಡ ಮನೆಗೆ ನುಗ್ಗಿ ಗಲಟೆ ಮಾಡಿತ್ತು ಎಂದು ಆರೋಪಿಸಲಾಗಿದ್ದು ದೂರು ಆಧರಿಸಿ ಜಿ.ಪಂ.ಸದಸ್ಯ ಮುತ್ತುರಾಜ್ ವಿಚಾರಣೆ ನಡೆಸಲಾಗಿದೆ. ಮುತ್ತುರಾಜ್ ಮಾತ್ರವಲ್ಲದೆ ಹಣ ವರ್ಗಾವಣೆಯಾಗಿದ್ದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ.