ಒಡಿಶಾ ಮೂಲದ ವ್ಯಕ್ತಿಯೊಬ್ಬ ಕೆಲಸ ಮಾಡಲೆಂದು ಬೆಂಗಳೂರಿಗೆ ಬಂದಿದ್ದಾನೆ. ಆದ್ರೆ ನೆಟ್ಟಗೆ ಕೆಲಸ ಮಾಡಯ್ಯಾ ಅಂದ್ರೆ ಮಾಡಬಾರ ಕೆಲಸ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರು,[30]: ಶೌಚಾಲಯಕ್ಕೆ ತೆರಳಿದ್ದ ಯುವತಿಯನ್ನು ಹಿಂಬಾಲಿಸಿ ವಿಡಿಯೋ ಮಾಡುತ್ತಿದ್ದ ರೆಸ್ಟೋರೆಂಟ್ ಸಿಬ್ಬಂದಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಒಡಿಶಾ ಮೂಲದ ಬುದ್ಧಕಾಂತ್ ದೇಬನಾಥ್ ಬಂಧಿತ ಆರೋಪಿ.
ಜಮವರಿ 26ರಂದು ರಾತ್ರಿ8ರ ಸುಮಾರಿಗೆ ಯುವತಿಯೋರ್ವಳು ತನ್ನ ಸ್ನೇಹಿತರೊಂದಿಗೆ ನಗರದ ಎಂ.ಜಿ ರಸ್ತೆಯ ಪಬ್ವೊಂದಕ್ಕೆ ತೆರಳಿದ್ದಳು. ಈ ಸಂದರ್ಭದಲ್ಲಿ ಊಟದ ಮಧ್ಯೆಯೇ ಯುವತಿ ಮಹಿಳಾ ಶೌಚಾಲಯಕ್ಕೆ ಹೋಗಿದ್ದಾಳೆ.
ಸೀರಿಯಲ್ ನೋಡುವ ಮಹಿಳೆಯರ ಮನೆಯೇ ಈ ಕಳ್ಳನ ಟಾರ್ಗೆಟ್!
ಆಕೆಯನ್ನು ಹಿಂಬಾಲಿಸಿದ ಆರೋಪಿ ಬಾತ್ ರೂಂ ಮೇಲ್ಭಾಗದಿಂದ ಯುವತಿಯನ್ನು ಚಿತ್ರೀಕರಿಸಿದ್ದಾನೆ. ಮೊಬೈಲ್ ನ ಫ್ಲ್ಯಾಶ್ ಬ್ಯಾಕ್ ಆನ್ ಮಾಡಿ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ ಯುವತಿ ಗಾಬರಿಯಿಂದ ಹೊರಗೆ ಬಂದು ಪಬ್ ಸಿಬ್ಬಂದಿಗೆ ದೂರು ನೀಡಿದ್ದಳು.
ಆರೋಪಿಯನ್ನು ಗುರುತಿಸಿ ಯುವತಿ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಶೋಕ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.