ಶಾಸಕ ಮುನಿರತ್ನ ದೇವಸ್ಥಾನ ಸ್ವರೂಪಿ ವಿಕಾಸ ಸೌಧದಲ್ಲೂ, ನನ್ನ ಮೇಲೆ ಅತ್ಯಾಚಾರ ಮಾಡಿದ ಎಂದ ಸಂತ್ರಸ್ತೆ!

By Sathish Kumar KH  |  First Published Sep 26, 2024, 4:25 PM IST

ಶಾಸಕ ಮುನಿರತ್ನ ಅವರು ತನ್ನನ್ನು ಹಲವು ಬಾರಿ ಗೋಡೌನ್ ಮತ್ತು ವಿಕಾಸ ಸೌಧದಲ್ಲಿ ಬಲಾತ್ಕರಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ತಾನು ಗೌಡ ಜಾತಿಗೆ ಸೇರಿದವಳಾಗಿರುವುದರಿಂದ ಮುನಿರತ್ನ ಅವರಿಗೆ ಗೌಡ ಸಮುದಾಯದವರ ಮೇಲೆ ದ್ವೇಷವಿದೆ ಎಂದು ಹೇಳಿದ್ದಾರೆ.


ಬೆಂಗಳೂರು (ಸೆ.26): ಕಳೆದ 2020-23ರ ಅವಧಿಯಲ್ಲಿ ಹಲವು ಬಾರಿ ಸರ್ಕಾರಿ ವಾಹನದಲ್ಲಿ ಕರೆದೊಯ್ದು ಗೋಡೌನ್ ಹಾಗೂ ವಿಕಾಸ ಸೌಧದ ತಮ್ಮ ಚೇಂಬರ್‌ನಲ್ಲಿ  ಎಸಗಿದ್ದಾರೆ. ಅದರಲ್ಲಿಯೂ ನಾನು ಗೌಡ ಜಾತಿಗೆ ಸೇರಿದ್ದರಿಂದ ತಮಗೆ ಗೌಡ ಸಮುದಾಯದವರ ಮೇಲೆ ದ್ವೇಷ ಇದೆ ಎಂದು ಬಲಾತ್ಕಾರ ಎಸಗಿ ತಮ್ಮ ದುಷ್ಕೃತ್ಯಗಳಿಗೆ ನನ್ನನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.

ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ವಿರುದ್ಧ ದಾಖಲಾದ ಬಲಾತ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಮುಂದೆ ಸಂತ್ರಸ್ತೆ ನೀಡಿದ್ದ ಸಿಆರ್‌ಪಿಸಿ 164 ಅಡಿ ನೀಡಿದ್ದ ಹೇಳಿಕೆಯಲ್ಲಿ ಈ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಮೊದಲು 2020 ಏಪ್ರಿಲ್‌ನಲ್ಲಿ ತಮ್ಮದೇ ಗೋಡೌನ್‌ಗೆ ಕರೆಸಿ ಬಲಾತ್ಕಾರ ಮಾಡುತ್ತಾರೆ. ಈ ವೇಳೆ ನನ್ನನ್ನು ಬಲವಂತವಾಗಿ ಜುಟ್ಟು ಹಿಡಿದು ಎಳೆದಾಡಿ, ಹೆದರಿಸಿ ಬಲಾತ್ಕಾರ ಎಸಗಿತ್ತಾರೆ.

Latest Videos

undefined

ಇದಾದ ಎರಡು ದಿನಗಳ ನಂತರ ಅದೇ ಬಲಾತ್ಕಾರ ವಿಡಿಯೋ ಕಳಿಸಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಆಗ, ಕಾರ್ಪೋರೆಟರ್ ಪತಿ ಜತೆಗಿನ ಅಶ್ಲೀಲ ವಿಡಿಯೋ ಮಾಡಿಕೊಡುವಂತೆ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಜೊತೆಗೆ, ಮಹಿಳಾ ಕಾರ್ಪೋರೇಟರ್ ಪತಿ ಜತೆಗೆ ಅಶ್ಲೀಲ ವಿಡಿಯೋ ಮಾಡಲು HIV ಸೋಂಕಿತ ಮಹಿಳೆ ಕಳುಹಿಸಿದ್ದರು. ಕಾರ್ಪೋರೇಟರ್ ಪತಿ ಜತೆಗಿನ ದೈಹಿಕ ಸಂಬಂಧದ ವಿಡಿಯೋ ಚಿತ್ರೀಕರಣಕ್ಕಾಗಿ ನನ್ನಿಂದಲೇ ಕ್ಯಾಮರಾ ಫಿಕ್ಸ್ ಮಾಡಿಸಿದ್ದರು. ಚಿತ್ರೀಕರಣಗೊಂಡ ಕಾರ್ಪೋರೇಟರ್ ಜತೆಗಿನ ಅಶ್ಲೀಲ ವಿಡಿಯೋವನ್ನು ಸುಧಾಕರ್ ತೆಗೆದುಕೊಂಡು  ಹೋಗಿದ್ದಾನೆ ಎಂದು ಹೇಳಿದ್ದಾರೆ.

ಮಹಾಲಕ್ಷ್ಮಿ ಕೊಲೆಗೆ ಭೀಕರ ಟ್ವಿಸ್ಟ್ ಬಿಚ್ಚಿಟ್ಟ ಡೆತ್ ನೋಟ್: ದೇಹ ಕತ್ತರಿಸಲು ಆಕ್ಸಲ್ ಬ್ಲೇಡ್ ಬಳಕೆ!

2020-23ರ ಅವಧಿಯಲ್ಲಿ ಹಲವು ಬಾರಿ ತನ್ನ ಮೇಲೆ ಬಲಾತ್ಕಾರ ಎಸಗಿದ್ದಾರೆ. ಹಲವು ಬಾರಿ ಸರ್ಕಾರಿ ವಾಹನದಲ್ಲಿ, ತಮ್ಮ ಗೋಡೌನ್‌ಗೆ ಹಾಗೂ ಕೆಲವೊಮ್ಮೆ ವಿಕಾಸಸೌಧಕ್ಕೆ ಕರೆದೊಯ್ದು ಸರ್ಕಾರಿ ಇಲಾಖೆಯ ಚೇಂಬರ್‌ನಲ್ಲಿ ಬಲಾತ್ಕಾರ ಮಾಡಿದ್ದಾರೆ. ಅದರಲ್ಲಿಯೂ, ನಾನು ಗೌಡ ಜಾತಿಗೆ ಸೇರಿದ್ದರಿಂದ ಗೌಡ ಸಮುದಾಯದ ಮೇಲೆ ದ್ವೇಷ ಇದೆ ಎಂದು ನನ್ನ ಮೇಲೆ ಬಲಾತ್ಕಾರ ಮಾಡುತ್ತಿದ್ದರು. ಇನ್ನು ಅವರ ಗನ್ ಮ್ಯಾನ್ ಶ್ರೀನಿವಾಸ್ ತಾವು ಹೇಳಿದ ಮಾತನ್ನು ಕೇಳದಿದ್ದರೆ ನಿನ್ನ ಮಗನನ್ನು ಕಿಡ್ನಾಪ್ ಮಾಡುವುದಾಗಿ ಮುನಿರತ್ನ ಹೆದರಿಸಿದ್ದರು. ಮಾಜಿ ಶಾಸಕರೊರಿಬ್ಬರ ಜತೆ ಅಶ್ಲೀವಾಗಿ ಮಾತನಾಡಲು ಹೇಳಿ, ಅವರ ಅಶ್ಲೀಲ ದೃಶ್ಯಾವಳಿಯನ್ನು  ಮುನಿರತ್ನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಹಲವು ಪೊಲೀಸ್ ಅಧಿಕಾರಿಗಳ ಅಶ್ಲೀಲ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು. ಈ ಮೂಲಕ ಬ್ಲಾಕ್ ಮೇಲೆ ಮಾಡಿ ಮಾಡಿರುತ್ತಾರೆ. ವೈದ್ಯರೊಬ್ಬರ ಅಶ್ಲೀಲ ವಿಡಿಯೋಗೆ ಸಹಕರಿಸುವಂತೆಯೂ ನನ್ನ ಮೇಲೆ ಒತ್ತಾಯ ಹಾಕಿದ್ದರು. ನಾನು ನಿರಾಕರಿಸಿದ್ದಕ್ಕೆ ನನ್ನ ವಿಡಿಯೋವನ್ನು ನನ್ನ ಪತಿ, ಮಗನಿಗೆ ಕಳುಹಿಸುವುದಾಗಿ, ಸಾಯಿಸುವುದಾಗಿ ಮುನಿರತ್ನ ಬೆದರಿಕೆ ಹಾಕಿದ್ದರು. ಹೀಗಾಗಿ ಮುನಿರತ್ನ ಗನ್ ಮ್ಯಾನ್ ವಿಜಯ್ ಕುಮಾರ್, ಮುನಿರತ್ನ ಸೋದರ ಸುಧಾಕರ್, ಕಿರಣ್ ಕುಮಾರ್‌, ರೋಹಿತ್ ಗೌಡ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತಿದ್ದೇನೆ ಎಂದು ಸಂತ್ರಸ್ತ ಮಹಿಳೆ ಹೇಳಿಕೆ ನೀಡಿದ್ದಾರೆ.

ಕಾರ್ಪೋರೇಟರ್ ಪತಿ ಜತೆ ಅಶ್ಲೀಲ ವಿಡಿಯೋ ಮಾಡಲು ಮೂವರು ಹೆಣ್ಣುಮಕ್ಕಳನ್ನು ಮುನಿರತ್ನ ಸೋದರ ಸುಧಾಕರ್ ಕಳುಹಿಸಿದ್ದರು. ಅಲ್ಲದೇ ಸಂತ್ರಸ್ಥ ಮಹಿಳೆಯನ್ನು ಗಂಗಣ್ಣ ಎಂಬುವರ ಜತೆ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿಸಿದ್ದಾರೆ. ಕಾರ್ಪೋರೇಟರ್ ಮಗನಿಗೆ HIV ಸೋಂಕು ಅಂಟಿಸಲು ಸಹಕರಿಸಲು ಸಂತ್ರಸ್ಥೆಗೆ ಒತ್ತಾಯ ಮಾಡಿದ್ದರು. ಆದರೆ, ಮುನಿರತ್ನ ಒತ್ತಾಯವನ್ನು ಸಂತ್ರಸ್ಥೆ ನಿರಾಕರಿಸಿದ್ದಳು. IFS ಅಧಿಕಾರಿಯೊಬ್ಬರಿಗೆ ವಿದ್ಯಾ ಹಿರೇಮಠ ಬ್ಲ್ಯಾಕ್ ಮೇಲ್ ಮಾಡ್ತಿರೋದಾಗಿ ಹೇಳಿದ್ದರು. ಆ ಮಹಿಳೆಗೆ ಒಂದು ಗತಿ ಕಾಣಿಸುವಂತೆ ಮುನಿರತ್ನ ನನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು.

ಕನ್ನಡಿಗರನ್ನು ಕೆಣಕಿದ ಸುಗಂಧ ಶರ್ಮಾಗೆ ಇದೆಂಥಾ ಸ್ಥಿತಿ ಬಂತು: ಕೆಲಸ ಕಳೆದುಕೊಂಡವಳಿಗೆ ನೆಲೆ ಕಳೆದುಕೊಳ್ಳುವ ಆತಂಕ!

ಮುನಿರತ್ನ ನನಗೆ ಬರ್ತಡೇ ಪಾರ್ಟಿಯೊಂದರಲ್ಲಿ ವಿದ್ಯಾ ಹಿರೇಮಠಳ ಪರಿಚಯಿಸಿದ್ದರು. ಗುಹಾಂತರ ರೆಸಾರ್ಟ್ ಗೆ ಹೋಗಿ ವಿದ್ಯಾ ಹಿರೇಮಠ ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕೆ ಒತ್ತಾಯ ಮಾಡಿದ್ದರು. ಹಲವೆಡೆ ವಿದ್ಯಾಳ ಕರೆದೊಯ್ದು ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು. ವಿದ್ಯಾ ಹಿರೇಮಠಗೆ ORS ನಲ್ಲಿ ನಿದ್ರೆ ಮಾತ್ರೆ ಹಾಕಿಸಿ, ಪ್ರಜ್ಙೆ ತಪ್ಪಿಸಿ ಕಿರಣ್ ಮತ್ತು ಮಂಜುನಾಥ್ ಜತೆ ವಿದ್ಯಾಳ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಈ ವಿಡಿಯೋವನ್ನು ಶಾಸಕ ಮುನಿರತ್ನ ಪಡೆದುಕೊಂಡಿದ್ದನು. ನಂತರ ರೆಸಾರ್ಟ್‌ಗೆ ವಿದ್ಯಾ ಹಿರೇಮಠ ಕರೆದೊಯ್ದು, ಆಕೆಯ ಬ್ಯಾಗ್‌ನಲ್ಲಿ ಡ್ರಗ್ ಮತ್ತು ಗಾಂಜಾ ಇಡಲು ಹೇಳಿದ್ದರು ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.

ನಂತರ ವಿದ್ಯಾ ಹಿರೇಮಠ ವಿರುದ್ದ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಬ್ಲ್ಯಾಕ್ ಮೇಲೆ ದೂರು ಕೊಡಿಸಿದ್ದರು. ಇದೇ ದೂರನ್ನು ಆಧರಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ವಿದ್ಯಾ ಬಂಧನ ಮಾಡಿದ್ದರು. ಬಂಧನವಾದ 3 ದಿನಗಳ ಬಳಿಕ ವಿದ್ಯಾಳನ್ನ ಪೊಲೀಸರೇ ಮುನಿರತ್ನ ಮುಂದೆ ಹಾಜರು ಪಡಿಸಿದ್ದರು. ಅದೇ ಸಮಯದಲ್ಲಿ ಮುನಿರತ್ನ ಎದುರು ವಿದ್ಯಾ ಹಿರೇಮಠ ಸಹೋದರಿಯರು ಆಕೆ ಮೇಲೆ ಹಲ್ಲೆ ಮಾಡಿದ್ದರು. ನಂತರ ವಿದ್ಯಾ ಹಿರೇಮಠ ಕಾರ್ಪೋರೇಟರ್ ಆಸೆ ತೋರಿಸಿದ್ದಾರೆ. ನಂತರ ಲೋಹಿತ್ ಗೌಡ ಅನ್ನಪೂರ್ಣೇಶ್ವರಿ ನಗರ ಠಾಣೆ ದೂರನ್ನ ವಾಪಾಸ್ ಪಡೆದಿದ್ದನು. ನಂತರ, ಬಿಬಿಎಂಪಿಯಲ್ಲಿ ಹಿರಿಯ ಅಧಿಕಾರಿ ಒಬ್ಬರಿಗೆ 400 ಕೋಟಿ ರೂ. ಅನ್ನು ಮುನಿರತ್ನ ಮುಂಜೂರು ಮಾಡಿಸಿಕೊಂಡಿರುತ್ತಾರೆ ಎಂದು ಹೇಳಿದರು.

click me!