ಶಾಸಕ ಮುನಿರತ್ನ ಬಲಾತ್ಕಾರ ಕೇಸ್: ಬಂಧನದ ಬೆನ್ನಲ್ಲೇ ವೀರ್ಯ ಸಂಗ್ರಹಿಸಿ ಪುರುಷತ್ವ ಪರೀಕ್ಷೆ!

By Sathish Kumar KH  |  First Published Sep 20, 2024, 4:37 PM IST

ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದು, ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುನಿರತ್ನನನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸಿದ್ದಾರೆ.


ಬೆಂಗಳೂರು (ಸೆ.20): ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬಿಜೆಪಿಯ ಶಾಸಕ ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮಾಡಿದ್ದಾರೆಂಬ ದೂರು ನೀಡಿದ ಬೆನ್ನಲ್ಲಿಯೇ ಕಗ್ಗಲೀಪುರ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮುನಿರತ್ನನನ್ನು ಸ್ಥಳ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿಸುವ ವೇಳೆ ಈತನ ಸ್ಪರ್ಮ್, ಪ್ಯೂಬಿಕ್ ಹೇರ್ ಇತ್ಯಾದಿ ಸ್ಯಾಂಪಲ್ಸ್‌ಗಳನ್ನು ಸಂಗ್ರಹಿಸುವ ಮೂಲಕ ಪುರುಷತ್ವ ಪರೀಕ್ಷೆ ಮಾಡಲು ಮುಂದಾಗಿದೆ.

ಈಗಾಗಲೇ ಕನ್ನಡ ಸಿನಿಮಾ ನಿರ್ಮಾಪಕ ಕಂ ಬಿಜೆಪಿ ಶಾಸಕ ಮುನಿರತ್ನ ಅವರದ್ದೆನ್ನಲಾದ ಆಡಿಯೋದಲ್ಲಿ ಬಿಬಿಎಂಪಿ ಗುತ್ತಿಗೆದಾರರೊಬ್ಬರಿಗೆ ಜೀವ ಬೆದರಿಕೆ, ಜಾತಿ ನಿಂದನೆ ಹಾಗೂ ವಂಚನೆ ಮಾಡಿದ ಪ್ರಕರಣದಲ್ಲಿ ಎರಡು ದಿನ ಪೊಲೀಸ್ ಕಸ್ಟಡಿ ಹಾಗೂ ಎರಡು ದಿನ ಜೈಲಿನಲ್ಲಿದ್ದರು. ಗುರುವಾ ನಿರೀಕ್ಷಣಾ ಜಾಮೀನು ಲಭ್ಯವಾಗಿದ್ದು, ಶುಕ್ರವಾರ ಬೆಳಗ್ಗೆ ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಮಹಿಳೆಯೊಬ್ಬರು ಅತ್ಯಾಚಾರ ದೂರು ಕೊಟ್ಟ ಪ್ರಕರಣದಲ್ಲಿ ಆತನನ್ನು ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ. ಇದಾದ ಬೆನ್ನಲ್ಲಿಯೇ ಮುನಿರತ್ನ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿತ್ತು.

Tap to resize

Latest Videos

undefined

ರಾಜಕೀಯ ವಿರೋಧಿಗಳಿಗೆ ಏಡ್ಸ್ (HIV) ಇಂಜೆಕ್ಷನ್ ಮಾಡಿಸ್ತಿದ್ದ ಮುನಿರತ್ನ: ಡಿ.ಕೆ. ಸುರೇಶ್!

ಕಗ್ಗಲೀಪುರ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಶಾಸಕ ಮುನಿರತ್ನಗೆ ದಯಾನದ್ ಸಾಗರ್ ಆಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ. ಈ ವೇಳೆ ಶಾಸಕ ಮುನಿರತ್ನನ ಸ್ಪರ್ಮ್, ಪ್ಯೂಬಿಕ್ ಹೇರ್, ಉಗುರು ಹಾಗೂ ರಕ್ತದ ಮಾದರಿಗಳನ್ನು ಸಂಗ್ರಹ ಮಾಡಲಾಗಿದೆ. ಇದರೊಂದಿಗೆ ದೇಹಗಳ ಮೇಲಿನ ಗಾಯದ ಗುರುತು ಪತ್ತೆ ಮಾಡಲಾಗಿದೆ. ಈ ಎಲ್ಲಾ ಪರೀಕ್ಷೆಗಳ ಮೂಲಕ ಶಾಸಕ ಮುನಿರತ್ನನನ್ನು ಒಂದು ಘಂಟೆಗೂ ಹೆಚ್ಚು ಕಾಲ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪುರುಷತ್ವ ಪರೀಕ್ಷೆಗಾಗಿ ಎಲ್ಲ ಮಾದರಿಗಳನ್ನು ಸಂಗ್ರಹ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪುರುಷತ್ವ ಪರೀಕ್ಷೆ ಮಾಡಿಸೋದ್ಯಾಕೆ:
ಆರೋಪಿ ಮುನಿರತ್ನ ಆತ್ಯಾಚಾರ ಎಸಗಲು ಶಕ್ತರೇ ಎಂದು ತಿಳಿಯುವುದು.
ಈತ ಲೈಂಗಿಕ ಕ್ರಿಯೆಗೆ ಮುನಿರತ್ನ ಶಕ್ತರೇ ಎಂಬುದನ್ನು ಪತ್ತೆ ಮಾಡುವುದು.

ವೈದ್ಯಕೀಯ ಪರೀಕ್ಷೆ ಮಾಡುತ್ತಿದ್ದ ಆಸ್ಪತ್ರೆ ವಿರುದ್ಧ ಪ್ರತಿಭಟನೆ:
ಶಾಸಕ ಮುನಿರತ್ನಗೆ ಹರ್ನಿಯಾ ,ಹೃದಯ ಸಂಬಂಧಿ ಸೇರಿ ಇತರೆ ಕಾಯಿಲೆಯೂ ಇದೆ. ಹೀಗಾಗಿ ಮುನಿರತ್ನಗೆ ಇಸಿಜಿ ಮಾಡಿಸಲಾಗಿದೆ. ಇದೇ ವೇಳೆ ಜಾತಿನಿಂದನೆ ಮಾಡಿದ್ದಾರೆಂಬ ಆಡಿಯೋ ಬಹಿರಂಗಗೊಂಡ ಹಿನ್ನೆಲೆಯಲ್ಲಿ ವಿವಿಧ ಸಮುದಾಯಗಳ ಸದಸ್ಯರು ದಯಾನಂದ್ ಸಾಗರ್ ಆಸ್ಪತ್ರೆಯ ಮುಂದೆ ಶಾಸಕ ಮುನಿರತ್ನ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದು, ಮುನಿರತ್ನ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಮೈಸೂರು ದರಸಾ ಉದ್ಘಾಟಕರಾಗಿ ಸಾಹಿತಿ ಡಾ. ಹಂಪ ನಾಗರಾಜಯ್ಯ ಆಯ್ಕೆ!

ದಯಾನಂದ ಸಾಗರ ಆಸ್ಪತ್ರೆ ಮುಂಭಾಗ ಸ್ಥಳೀಯ ಒಕ್ಕಲಿಗ ಮುಖಂಡರ ಪ್ರತಿಭಟನೆ ಮಾಡುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಚಿದೂರ್ ಪಂಚಾಯಿತಿ ಅಧ್ಯಕ್ಷ ರವಿ ಗೌಡ, ಜನಸಾಮಾನ್ಯರಿಗೊಂದು ಕಾನೂನು, ಜನಪ್ರತಿನಿಧಿಗಳಿಗೊಂದು ಕಾನೂನು ಇದೆ. ಅಟ್ರಾಸಿಟಿ ಪ್ರಕರಣದಲ್ಲಿ ತ್ವರಿತವಾಗಿ ಶಾಸಕ ಮುನಿರತ್ನಗೆ ಜಾಮೀನು ಸಿಕ್ಕಿದೆ. ಜನಸಾಮಾನ್ಯರಿಗೆ ತಿಂಗಳ ಕಳೆದ್ರೂ ಜಾಮೀನು ಸಿಗುವುದಿಲ್ಲ. ಬಿಜೆಪಿ ಮುಖಂಡರು ಕೂಡಲೇ ಶಾಸಕ ಸ್ಥಾನದಿಂದ ಮುನಿರತ್ನ ವಜಾ ಮಾಡಲು ಮುಂದಾಗಬೇಕು. ಅಮಾಯ ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಣ್ಣ-ತಮ್ಮಂದಿರಂತಿರುವ ಒಕ್ಕಲಿಗ ಸಮುದಾಯ-ದಲಿತ ಸಮುದಾಯಗಳಿಗೆ ಅವಮಾಮ ಮಾಡಿದ್ದಾರೆ. ಶಾಸಕ ಸ್ಥಾನದಲ್ಲಿರುವ ಮುನಿರತ್ನ ಅನರ್ಹ, ಶಾಸಕ ಸ್ಥಾನದಿಂದ ಕೂಡಲೇ ಉಚ್ಚಾಟಿಸುವಂತೆ ಆಗ್ರಹ ಮಾಡಿದರು.

click me!