ಬೆಂಗಳೂರಿನತ್ತ ಹೊರಟ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ: 2 ಕಾರುಗಳ ತುಂಬ 6 ಕೋಟಿ ರೂ.ಗಳ ದಾಖಲೆಗಳು

By Sathish Kumar KH  |  First Published Mar 8, 2023, 2:03 PM IST

ಲೋಕಾಯುಕ್ತ ದಾಳಿಯ ವೇಳೆ 6 ಕೋಟಿ ರೂ. ಅಕ್ರಮ ಹಣವನ್ನು ಇಟ್ಟುಕೊಂಡಿರುವ ಎ1 ಆರೋಪಿ ಕೆಎಸ್‌ಡಿಎಲ್‌ ಮಾಜಿ ಅಧ್ಯಕ್ಷ ಶಾಸಕ ಮಾಡಾಳು ವಿರುಪಾಕ್ಷಪ್ಪ ಕಾರಿನಲ್ಲಿ ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ತುಂಬಿಕೊಂಡು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.


ದಾವಣಗೆರೆ (ಮಾ.08): ಲೋಕಾಯುಕ್ತ ದಾಳಿಯ ವೇಳೆ 6 ಕೋಟಿ ರೂ. ಅಕ್ರಮ ಹಣವನ್ನು ಇಟ್ಟುಕೊಂಡಿರುವ ಎ1 ಆರೋಪಿ ಕೆಎಸ್‌ಡಿಎಲ್‌ ಮಾಜಿ ಅಧ್ಯಕ್ಷ ಶಾಸಕ ಮಾಡಾಳು ವಿರುಪಾಕ್ಷಪ್ಪ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದಾರೆ. ಇನ್ನು 48 ಗಂಟೆಯ ಒಳಗೆ ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಗಡುವು ನಿಡಿದ ಬೆನ್ನಲ್ಲೇ, ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಾರಿನಲ್ಲಿ ಇಟ್ಟುಕೊಂಡು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಕಳೆದ ಗುರುವಾರ ಲೋಕಾಯುಕ್ತ ಪೊಲೀಸರು ಶಾಸಕ ವಿರುಪಾಕ್ಷಪ್ಪ ಮಾಡಾಳ್‌ ಅವರ ಬೆಂಗಳೂರಿನ ಕಚೇರಿ ಎಂ. ಸ್ಟುಡಿಯೋದಲ್ಲಿ ಶಾಸಕರ ಪುತ್ರ ಮಾಡಾಳ್‌ ಪ್ರಶಾಂತ್‌ ಅವರು 40 ಲಕ್ಷ ರೂ. ಲಂಚ ಪಡೆಯುವ ಹಣದ ಸಮೇತ ಸಿಕ್ಕಿಬಿದ್ದಿದ್ದರು. ಈ ವೇಳೆ ಲಂಚದ ಹಣ ಕೆಎಸ್‌ಡಿಎಲ್‌ ಟೆಂಡರ್‌ ಹಂಚಿಕೆಗೆ ಸಂಬಂಧಪಟ್ಟಿದ್ದು ಹಾಗೂ ಕಂಪನಿಯೊಂದರ ವಿರುದ್ಧ ಇದ್ದ ಕೇಸ್‌ ಕ್ಲೋಸ್‌ ಮಾಡಿಸಲು ಪಡೆಯಲಾಗುತ್ತಿತ್ತು ಎಂದು ಕೇಳಿಬಂದಿತ್ತು. ಈ ವೇಳೆ ಶಾಸಕರ ಮನೆಯ ಮೇಲೆಯೂ ದಾಳಿ ಮಾಡಿದಾಗ ಒಟ್ಟಾರೆ 6 ಕೋಟಿ ರೂ. ದಾಖಲೆಗಳಿಲ್ಲದ ಹಣ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಶಾಸಕರನ್ನು ಬಂಧಿಸಲು ಮುಂದಾದಾಗ 6 ದಿನ ನಾಪತ್ತೆ ಆಗಿದ್ದರು. ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಹೈಕೋರ್ಟ್‌ನಿಂದ ಅನಾರೋಗ್ಯದ ನೆಪವೊಡ್ಡಿ ಮಧ್ಯಂತರ ನಿರೀಕ್ಷಣಾ ಜಾಮೀನು ಪೆದುಕೊಂಡಿದ್ದರು. ನಂತರ, ಜನರ ಮುಂದೆ ಪ್ರತ್ಯಕ್ಷವಾಗಿ ಚನ್ನಗಿರಿ ಕ್ಷೇತ್ರದ ಮನೆಗೆ ಹಾಜರಾಗಿದ್ದರು.

Latest Videos

undefined

ಸಾಮಾನ್ಯರ ಮನೆಯಲ್ಲೂ ಇರುತ್ತೆ 3-4 ಕೋಟಿ ದುಡ್ಡು, ಮಾಡಾಳ್ ಮಾತು ಜನರ ಕಿವಿ ತೂತು!

48 ಗಂಟೆಯೊಳಗೆ ತನಿಖೆಗೆ ಹಾಜರು: ಲೋಕಾಯುಕ್ತ ದಾಳಿಗೆ ಸಂಬಂಧಿಸಿದಂತೆ ನಿನ್ನೆ ಮಂಗಳವಾರ ಹೈಕೋರ್ಟ್‌ನಲ್ಲಿ ನಡೆದ ಶಾಸಕ ವಿರುಪಾಕ್ಷಪ್ಪ ಮಾಡಾಳ್‌ ಅವರ ಪ್ರಕರಣದಲ್ಲಿ ಜಾಮೀನು ಲಭ್ಯವಾಗಿದೆ. ಇನ್ನು ಜಾಮೀನು ಪಡೆಯುವ ವೇಳೆ 5 ಲಕ್ಷ ರೂ. ಡೆಪಾಸಿಟ್‌ ಹಾಗೂ ಇಬ್ಬರು ವ್ಯಕ್ತಿಗಳನ್ನು ಶ್ಯೂರಿಟಿ ಇಡುವಂತೆ ಸೂಚನೆ ನೀಡಿಯತ್ತು. ಜೊತೆಗೆ, ಲೋಕಾಯುಕ್ತ ತನಿಖಾಧಿಕಾರಿಗಳು ಕೂಡ ಸೂಕ್ತ ವರದಿಯನ್ನು ಸಲ್ಲಿಸಲು ನೋಟಿಸ್‌ ನೀಡಿದೆ. ಇದಕ್ಕೆ ಪೂರಕ ಆಗುವಂತೆ ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ಎ1 ಆರೋಪಿಯಾದ ಶಾಸಕ ಮಡಾಳ್‌ ವಿರುಪಾಕ್ಷಪ್ಪ 48 ಗಂಟೆಯ ಒಳಗೆ ಹಾಜರಾಗಬೇಕು ಎಂದು ಆದೇಶಿಸಿತ್ತು.

ಬೆಂಗಳೂರಿನತ್ತ ತಡವಾಗಿ ಪ್ರಯಾಣ: ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲು 48 ಗಂಟೆಯ ಗಡುವು ಇದ್ದು, ಈಗಾಗಲೇ ಒಂದು ದಿನ ಕಳೆದು ಹೋಗಿದೆ.  ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆಯೊಳಗೆ ಅಧಿಕಾರಿಗಳ ಮುಂದೆ ಹಾಜರಾಗಲು ಸಮಯವಿದ್ದು, ಇಂದು ಮಧ್ಯಾಹ್ನದ ನಂತರ ಬೆಂಗಳೂರಿನತ್ತ ಹೊರಟಿದ್ದಾರೆ. ಇನ್ನು 6 ಕೋಟಿ ರೂ. ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿಕೊಂಡು ಬೆಳಗ್ಗೆಯೇ ಚನ್ನಗಿರಿಯ ಮನೆಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳಸಲು ಸಿದ್ಧರಾಗಿದ್ದರು. ಆದರೆ, ಕಾರಣಾಂತರಗಳಿಂದ ಮಧ್ಯಾಹ್ನ ಮನೆಯಿಂದ ಪ್ರಯಾಣ ಬೆಳೆಸಿದ್ದಾರೆ. ಸಾಧ್ಯವಾದಲ್ಲಿ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ಶಾಸಕ ಮಾಡಾಳು ವಿರುಪಾಕ್ಷಪ್ಪ ಹಾಜರಾಗುವ ಸಾಧ್ಯತೆಯಿದೆ.

6 ಕೋಟಿ ಅಕ್ರಮ ಹಣದ ಆರೋಪಿಗೆ ಅದ್ಧೂರಿ ಮೆರವಣಿಗೆ ಬೇಕೇ.?: ಮಾಡಾಳ್ ವಿರುಪಾಕ್ಷಪ್ಪನಿಂದ ಬಿಜೆಪಿಗೆ ಮುಜುಗರ

ಎರಡು ಕಾರಿನಲ್ಲಿ ದಾಖಲೆಗಳ ಸಂಗ್ರಹ: ಇನ್ನು 6 ಕೋಟಿ ರೂ. ಹಣಕ್ಕೆ ಸಂಬಂಧಿಸಿದಂತೆ ಎಲ್ಲವೂ ತಮ್ಮ ಜಮೀನಿನಲ್ಲಿ ದುಡಿದ ಹಣವಾಗಿದೆ. ಇದರಲ್ಲಿ ಯಾವುದೇ ಹಣ ಅಕ್ರಮವಾಗಿ ಸಂಪಾದಿಸಿಲ್ಲ. ಎಲ್ಲದಕ್ಕೂ ದಾಖಲೆಗಳಿದ್ದು, ದೋಷಮುಕ್ತವಾಗಿ ಬರುತ್ತೇನೆ ಎಂದು ಹೇಳಿದ್ದರು. ಇನ್ನು ಬೆಂಗಳೂರಿಗೆ ಹೋಗುವ ಮುಂಚೆ ಎರಡು ಕಾರಿನಲ್ಲಿ ದಾಖಲೆಗಳನ್ನು ಇಟ್ಟುಕೊಂಡು ಹೊರಟಿದ್ದಾರೆ, ಮನೆಯ ಬಳಿ ವಿವಿಧ ಮಾಧ್ಯಮಗಳ ಸಿಬ್ಬಂದಿ ಕಾಯುತ್ತಿದ್ದು, ಅವರಿಂದ ತಪ್ಪಿಸಿಕೊಳ್ಳಲು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದಾರೆ. ಆದರೆ, ಮರಳಿ ಮನೆಗೆ ಬಾರದೇ ದೇವಸ್ಥಾನದಿಂದ ನೇರ ಬೆಂಗಳೂರಿಗೆ ಹೋಗಿದ್ದಾಗೆ ಎಂದು ತಿಳಿದುಬಂದಿದೆ. ಇನ್ನು ಸಂಜೆ ವೇಳೆಗೆ ವಕೀಲರ ಸಲಹೆಯನ್ನು ಪಡೆದು ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ.

click me!