ಕೇರ್‌ಟೇಕರ್‌ ಆಗಿ ಬಂದವ ಚಿನ್ನಾಭರಣ ಕದ್ದು ಪರಾರಿಯಾದ: 10 ಲಕ್ಷಕ್ಕಾಗಿ ಮನೆಯವರ ಗೋಳಾಟ

By Sathish Kumar KHFirst Published Mar 8, 2023, 12:00 PM IST
Highlights

ಮನೆಯಲ್ಲಿ ಕೇರ್‌ ಟೇಕರ್‌ ಆಗಿ ಕೆಲಸ ಮಾಡಿಕೊಂಡಿದ್ದ ಹಾವೇರಿ ಮೂಲದ ವ್ಯಕ್ತಿ ತಾನು ಕೆಲಸ ಮಾಡುತ್ತಿದ್ದ ಮನೆಯಿಂದಲೇ ಚಿನ್ನಾಭರಣ ಮತ್ತು ನಗದು ಹಣ ಸೇರಿ ಒಟ್ಟು 10 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದನು.

ಬೆಂಗಳೂರು (ಮಾ.08): ಮನೆಯಲ್ಲಿ ಕೇರ್‌ ಟೇಕರ್‌ ಆಗಿ ಕೆಲಸ ಮಾಡಿಕೊಂಡಿದ್ದ ಹಾವೇರಿ ಮೂಲದ ವ್ಯಕ್ತಿ ತಾನು ಕೆಲಸ ಮಾಡುತ್ತಿದ್ದ ಮನೆಯಿಂದಲೇ ಚಿನ್ನಾಭರಣ ಮತ್ತು ನಗದು ಹಣ ಸೇರಿ ಒಟ್ಟು 10 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದನು.

ತನಗೆ ಕೆಲಸ ಇಲ್ಲವೆಂದು ದುಡಿಯಲು ಹಾವೇರಿಯಿಂದ ಬೆಂಗಳೂರಿಗೆ ಬಂದಿದ್ದು, ಏನಾದರೂ ಕೆಲವಿದ್ದರೆ ಕೊಡಿ ಮಾಡುತ್ತೇನೆ ಎಂದು ಹೇಳಿದ್ದಾನೆ. ಇನ್ನು ಮನೆಯಲ್ಲಿ ವೃದ್ಧರಿದ್ದು, ಮನೆ ಮುಂದಿನ ತೋಟ ಹಾಗೂ ಇತರೆ ಸಣ್ಣ ಕಾರ್ಯಗಳನ್ನು ಮಾಡಿಕೊಂಡಿರಲು ಮನೆಯ ಮಾಲೀಕರು ಕೇರ್‌ ಟೇಕರ್‌ ಆಗಿ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಿ.ಎನ್. ಕುಲಕರ್ಣಿ ಎನ್ನುವವರ ಮನೆಯಲ್ಲಿ ಕೇರ್‌ ಟೇಕರ್‌ ಆಗಿ ಕೆಲಸವನ್ನೂ ಆರಂಭಿಸಿದ್ದಾನೆ. 

FIR: ಗಂಡನ ಮೊಬೈಲ್‌ಗೆ ಬಂದಿತ್ತು ಹೆಂಡತಿ ರಾಸಲೀಲೆ ವಿಡಿಯೋ: ಹೆಂಡತಿ ಪ್ರಿಯಕರನನ್ನ ಮುಗಿಸೇಬಿಟ್ಟ ಗಂಡ..!

ವಿಶ್ವಾಸ ಗಳಿಸಿ ಕಳ್ಳತನ: ಕೇರ್‌ ಟೇಕರ್‌ ಆಗಿ ಕೆಲಸಗಳನ್ನು ಮಾಡುತ್ತಾ ದಿನಗಳು ಕಳೆದಂತೆ ಮನೆಯವರ ವಿಶ್ವಾಸ ಗಳಿಸಿದ್ದಾನೆ. ಇನ್ನು ಇದೇ ಕಾರ್ಮಿಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಗದು ಹಣ ಹಾಗೂ ಇತರೆ ವಸ್ತುಗಳನ್ನು ಕದ್ದು ಪರಾರಿ ಆಗಿದ್ದಾನೆ. ಈ ಬಗ್ಗೆ ಮನೆಯ ಮಾಲೀಕರು ಕಳ್ಳತನ ಮಾಡಿಕೊಂಡು ಹೋಗಿದ್ದ ವ್ಯಕ್ತಿಯ ಮೇಲೆ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ತೀವ್ರ ಶೋಧವನ್ನು ನಡೆಸಿದ ಆರ್.ಆರ್. ನಗರದ ಠಾಣೆಯ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. 

ಹಾವೇರಿ ಮೂಲದ ಬಸವರಾಜ್‌ ಬಂಧನ: ಹಾವೇರಿ ಮೂಲದ ಬಸವರಾಜ ಬಂಧಿತ ಆರೋಪಿ ಆಗಿದ್ದಾನೆ. ಈತನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಿ.ಎನ್ ಕುಲಕರ್ಣಿ ಎಂಬುವರ ಮನೆಯಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡ್ಕೊಂಡಿದ್ದನು. ಕೇರ್ ಟೇಕರ್ ಆಗಿ ಹೋಗಿದ್ದ ವ್ಯಕ್ತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದನು. ಪ್ರಕರಣ ಸಂಬಂಧ ಆರ್.ಆರ್. ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನು ಬಂಧಿತನಿಂದ 10ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಈ ಪ್ರಕರಣದ ಕುರಿತಂತೆ ಆರ್.ಆರ್. ನಗರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಚಲಿಸುವ ಸ್ಕೂಟಿಯಲ್ಲಿ ಜೋಡಿಯ ಕಿಸ್ಸಿಂಗ್‌: ಆಕ್ಷೇಪಿಸಿದ್ದ ಯುವಕನ ಬರ್ಬರ ಹತ್ಯೆ

ಹೃದಯಾಘಾತಕ್ಕೆ ಬಲಿಯಾದ ಹೆಡ್‌ ಕಾನ್ಸ್‌ಸ್ಟೇಬಲ್: ಹುಣಸೂರಿನ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೋಲೀಸ್ ಮುಖ್ಯ ಪೇದೆ ಅರವಿಂದ್ (48) ಹೃದಯಘಾತದಿಂದ ಮೃತಪಟ್ಟಿದ್ದಾರೆ. ಹೃದಯಾಘಾತದ ಹಿನ್ನೆಲೆಯಲ್ಲಿ ಹುಣಸೂರಿನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅರವಿಂದ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಹುಣಸೂರು ಗ್ರಾಮಾಂತರ ಠಾಣೆಗಿಂತ ಮೊದಲು ಕೆ ಆರ್ ನಗರ, ಸಾಲಿಗ್ರಾಮ, ಹುಣಸೂರು ಪಟ್ಟಣ ಸೇರಿದಂತೆ ಇತರೆಡೆಗಳಲ್ಲಿ ಅರವಿಂದ್‌ ಸಲ್ಲಿಸಿದ್ದರು..

click me!