ಬಾಲಕನ ಪುಸಲಾಯಿಸಿ ದೈಹಿಕವಾಗಿ ಬಳಕೆ : 13 ವರ್ಷದ ಬಾಲಕನಿಂದ ಗರ್ಭಿಣಿಯಾದ ಕಾಮುಕಿ

Published : Mar 08, 2023, 11:58 AM ISTUpdated : Mar 08, 2023, 11:59 AM IST
ಬಾಲಕನ ಪುಸಲಾಯಿಸಿ ದೈಹಿಕವಾಗಿ ಬಳಕೆ : 13 ವರ್ಷದ ಬಾಲಕನಿಂದ ಗರ್ಭಿಣಿಯಾದ ಕಾಮುಕಿ

ಸಾರಾಂಶ

 31 ವರ್ಷ ಪ್ರಾಯದ ಮಹಿಳೆಯೊಬ್ಬಳು ತನ್ನ ಮನೆಗೆ ಆಗಾಗ ಬರುತ್ತಿದ್ದ 13 ವರ್ಷದ ಬಾಲಕನ ಪುಸಲಾಯಿಸಿ ದೈಹಿಕ ಸಂಬಂಧ ಬೆಳೆಸಿದ ಹಿನ್ನೆಲೆಯಲ್ಲಿ ಗರ್ಭಿಣಿಯಾಗಿದ್ದಾಳೆ.

ಕೊಲೆರಾಡೋ:  31 ವರ್ಷ ಪ್ರಾಯದ ಮಹಿಳೆಯೊಬ್ಬಳು ತನ್ನ ಮನೆಗೆ ಆಗಾಗ ಬರುತ್ತಿದ್ದ 13 ವರ್ಷದ ಬಾಲಕನ ಪುಸಲಾಯಿಸಿ ದೈಹಿಕ ಸಂಬಂಧ ಬೆಳೆಸಿದ ಹಿನ್ನೆಲೆಯಲ್ಲಿ ಗರ್ಭಿಣಿಯಾಗಿದ್ದಾಳೆ. ಅಮೆರಿಕಾದ ಕೊಲೆರಾಡೋದಲ್ಲಿ (Colorado) ಈ ಅಸಹ್ಯಕಾರಿ ಘಟನೆ ನಡೆದಿದೆ.  13 ವರ್ಷದ ಬಾಲಕನ ಮೇಲೆ ಮೋಹ ಹೊಂದಿದ್ದ ಮಹಿಳೆಯೊಬ್ಬರು ದೈನಂದಿನ ಕೆಲಸಗಳಿಗೆ ಸಹಾಯ ಮಾಡಲು ಆತನನ್ನು ಆಗಾಗ ತನ್ನ ಮನೆಗೆ ಕರೆಯುತ್ತಿದ್ದಳು. ಎಲ್ಲವೂ ಚೆನ್ನಾಗಿತ್ತು. ಆದರೆ ಒಂದು ದಿನ ಮಹಿಳೆ ಹುಡುಗನೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಿದಳು. ಪರಿಣಾಮ  ಅವಳು ಗರ್ಭಿಣಿಯಾಗಿದ್ದಾಳೆ. 

ಅಮೆರಿಕದ ಕೊಲೊರಾಡೊ ನಗರದಲ್ಲಿ ಈ ಘಟನೆ ನಡೆದಿದೆ. 31 ವರ್ಷದ ಆಂಡ್ರಿಯಾ ಸೆರಾನೊ 13 ವರ್ಷದ ಬಾಲಕನ ಮೇಲೆ ಮೋಹ ಹೊಂದಿದ್ದಳು. ಹೀಗೆ ಬಾಲಕನ ಮೇಲೆ ಮೋಹಿತಳಾಗಿದ್ದ ಮಹಿಳೆ ಆತನನ್ನು ಮನೆ ಕೆಲಸಕ್ಕೆ ನೆರವಾಗುವ ನೆಪದಲ್ಲಿ ಮನೆಗೆ ಕರೆಸಿದ್ದಳು. ಇದಾದ ಬಳಿಕ  ಇಬ್ಬರೂ ತಿಂಗಳುಗಟ್ಟಲೆ ಒಟ್ಟಿಗೇ ಇದ್ದರು. ಮನೆಯ ಸುತ್ತಮುತ್ತಲಿನ ಜನ ಕೂಡ ಆಂಡ್ರಿಯಾಳನ್ನು ಹುಡುಗನಿಗೆ ತಾಯಿ ಸಮಾನಳು ಎಂದೇ ಪರಿಗಣಿಸಿದ್ದರು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಆಂಡ್ರಿಯಾ ಹುಡುಗನೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಿದ್ದಳು ಬಳಿಕ ಈ ವಿಚಾರವನ್ನು  ಯಾರಿಗೂ ಬಹಿರಂಗಪಡಿಸದಂತೆ ಕೇಳಿಕೊಂಡಿದ್ದಾಳೆ. 

ಯೂಟ್ಯೂಬ್ ನೋಡಿ ಮಗುವಿಗೆ ಜನ್ಮ : ಹೆರಿಗೆಯ ನಂತರ ಕೂಸನ್ನು ಕೊಂದ 15 ವರ್ಷದ ಬಾಲಕಿ

ಆದರೆ ಅದ್ಹೇಗೋ ವಿಚಾರ ಬಯಲಾಗಿದ್ದು, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪೊಲೀಸರು ಆಂಡ್ರಿಯಾ ಸೆರಾನೊಳನ್ನು (Andrea Serrano) ಬಂಧಿಸಿದ್ದಾರೆ.  ನಂತರ ಪ್ರಕರಣ ಕೋರ್ಟ್ ಮೆಟ್ಟಿಲೇರಿದಾಗ ಇಬ್ಬರ ನಡುವೆ ದೈಹಿಕ ಸಂಬಂಧವಿತ್ತು (physical relationship) ಎಂಬುದನ್ನು ಆಂಡ್ರಿಯಾ ಸೆರಾನೊ ಒಪ್ಪಿಕೊಂಡಿದ್ದಾಳೆ. ಅಲ್ಲದೇ ತಾನು ಗರ್ಭಿಣಿಯಾಗಿದ್ದು, ಬಾಲಕನ ಮಗುವಿನ ತಾಯಿಯಾಗಲಿರುವುದಾಗಿ ಹೇಳಿದ್ದಾಳೆ. ಮಹಿಳೆಯ ಸ್ಥಿತಿಯನ್ನು ಗಮನಿಸಿದ ನ್ಯಾಯಾಧೀಶರು (judge) 70,000 ಡಾಲರ್ (ಸುಮಾರು 56,62,000 ರೂ.) ಬಾಂಡ್ ಪಡೆದು ಆಕೆಯನ್ನು  ಬಿಡುಗಡೆ ಮಾಡಿದ್ದಾರೆ. ಅಲ್ಲದೇ  ಇಬ್ಬರ ನಡುವೆ ಒಪ್ಪಂದವನ್ನು ನಡೆಸಿದ ನ್ಯಾಯಾಲಯ 13 ವರ್ಷದ ಹುಡುಗನನ್ನು ಮಗುವಿನ ತಂದೆ ಎಂದು ಕರೆಯಲಾಗುವುದು ಎಂದು ಘೋಷಿಸಿತು.

ಅಲ್ಲದೇ ಪ್ರಕರಣವನ್ನು ಕೊನೆಗೊಳಿಸಲು ನ್ಯಾಯಾಲಯ ನಿರ್ಧರಿಸಿದೆ. ಆದರೆ ಇತ್ತ ಬಾಲಕನ ಕುಟುಂಬದವರು ನ್ಯಾಯಾಲಯದ ಈ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ನನ್ನ ಮಗು ಯಾವಾಗಲೂ ಆ 31 ವರ್ಷದ ಮಹಿಳೆಯನ್ನು ತನ್ನ ತಾಯಿ ಎಂದು ಕರೆಯುತ್ತಿತ್ತು. ಆದರೆ ಈ ಮಹಿಳೆ ನನ್ನ ಮಗನ ಬಾಲ್ಯವನ್ನು ಕಿತ್ತುಕೊಂಡಿದ್ದಾಳೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಈಗ ಆತ ತಂದೆಯಂತೆ ಬದುಕಬೇಕು. ಆಂಡ್ರಿಯಾ ನನ್ನ ಮಗನ ಸ್ಥಾನದಲ್ಲಿದ್ದರೆ ಮತ್ತು ನನ್ನ ಮಗ ಅವಳ ಸ್ಥಾನದಲ್ಲಿದ್ದರೆ, ಅದೇ ಕಾನೂನು ಅನ್ವಯಿಸುತ್ತದೆಯೇ? ಎಂದು ಬಾಲಕನ ತಾಯಿ ಪ್ರಶ್ನಿಸಿದ್ದಾರೆ. 

9 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ 92ರ ಮುದುಕನಿಗೆ 3 ವರ್ಷ ಜೈಲು!

ಒಂದು ವೇಳೆ ಆಕೆ ಪುರುಷಳಾಗಿದ್ದರೆ ಹಾಗೂ ನನ್ನ ಮಗ ಹುಡುಗಿಯಾಗಿದ್ದರೆ ಈ ಪ್ರಕರಣ ವಿಭಿನ್ನವಾಗಿರುತ್ತಿತ್ತು. ಅವರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದರು. ಆದರೆ  ಆಕೆ ಸ್ತೀ ಆದ ಕಾರಣ ನ್ಯಾಯಾಲಯ ಆಕೆಗೆ ಸಹಾನೂಭೂತಿ ವ್ಯಕ್ತಪಡಿಸಿದೆ ಎಂದು  ಬಾಲಕನ ತಾಯಿ ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ