ಗದಗ: ಕಳ್ಳತನ ತಡೆಯಲು ಬಂದ ಗೂರ್ಖಾ ಮೇಲೆ ಮಾರಣಾಂತಿಕ ಹಲ್ಲೆ

By Suvarna News  |  First Published Jan 17, 2021, 12:34 PM IST

ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಗೂರ್ಖಾ ಮೇಲೆ ಹಲ್ಲೆ| ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದ ಘಟನೆ| ಹಲ್ಲೆಗೊಳಗಾದ ಗೂರ್ಖಾ ನರ್ಸಿಂಗ್ ಹರೀಶಸಿಂಗ್ ಸೌಧ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲು| 
 


ಗದಗ(ಜ.17):  ಗೂರ್ಖಾ ಮೇಲೆ ಕಳ್ಳರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ನರಗುಂದ ಪಟ್ಟಣದ ಮಾರುಕಟ್ಟೆಯಲ್ಲಿ ಇಂದು(ಭಾನುವಾರ) ನಡೆದಿದೆ. ನೇಪಾಳ ಮೂಲದ ನರ್ಸಿಂಗ್ ಹರೀಶಸಿಂಗ್ ಸೌಧ (60) ಎಂಬುವರೇ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. 

ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ನರ್ಸಿಂಗ್ ಹರೀಶಸಿಂಗ್ ಸೌಧ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಕಳ್ಳತನ ಮಾಡುವಾಗ ತಡೆಯಲು ಬಂದ ಗೂರ್ಖಾನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Tap to resize

Latest Videos

ಅಪಘಾತ ನಡೆಸಿ ಇಬ್ಬರಿಗೆ ಚೂರಿ ಇರಿದ ಅಪರಿಚಿತರು

ನರ್ಸಿಂಗ್ ಹರೀಶಸಿಂಗ್ ಸೌಧ ಅವರು ನರಗುಂದ ಪಟ್ಟಣದಲ್ಲಿ ಕಳೆದ 4೦ ವರ್ಷಗಳಿಂದ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದಾರೆ. ದುಷ್ಕರ್ಮಿಗಳ ಹಲ್ಲೆಗೆ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ನರ್ಸಿಂಗ್ ಹರೀಶಸಿಂಗ್ ಸೌಧ ಅವರನ್ನ ನರಗುಂದ ತಾಲೂಕಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಡಲಾಗಿದೆ. ನರಗುಂದ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 
 

click me!