
ಬೆಂಗಳೂರು(ಜ.17): ಪತ್ನಿಯ ಅಶ್ಲೀಲ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದು ಬೆದರಿಸುತ್ತಿದ್ದ ವಿಕೃತ ಪತಿ ವಿರುದ್ಧ ಪತ್ನಿ ಠಾಣೆ ಮೆಟ್ಟಿಲೇರಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೊಬೈಲ್‌ನಲ್ಲಿ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಸೆರೆ ಹಿಡಿದು ಬೇರೆಯವರಿಗೆ ಕಳಿಸುವುದಾಗಿ ಬೆದರಿಸುತ್ತಿದ್ದಾನೆ ಎಂದು ಫ್ರೆಜರ್‌ಟೌನ್‌ನ ನಿವಾಸಿ 39 ವರ್ಷದ ಮಹಿಳೆ ಪತಿ ರಾಜು ಎಂಬಾತನ ವಿರುದ್ಧ ಪುಲಿಕೇಶಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಏನಿದು ಪ್ರಕರಣ?
ಮಹಿಳೆ 2019 ಜ.10ರಂದು ರಾಜುನನ್ನು ವಿವಾಹವಾಗಿದ್ದು, ಅತ್ತಿಗುಪ್ಪೆಯ ಇಂದಿರಾ ಕಾಲೋನಿಯಲ್ಲಿ ನೆಲೆಸಿದ್ದರು. ದಂಪತಿ ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ನಂತರ ರಾಜು ದಿನನಿತ್ಯ ಕುಡಿದು ಬಂದು ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸುತ್ತಿದ್ದ. ಪತಿಯ ಕಿರುಕುಳವನ್ನು ಅದ್ಯಾಗೂ ಅನುಸರಿಸಿಕೊಂಡು ಮಹಿಳೆ ಜೀವನ ಮಾಡುತ್ತಿದ್ದರು.
ಎಟಿಎಂಗೆ ಡಿವೈಸ್ ಅಳವಡಿಸಿ 17 ಲಕ್ಷ ಕದ್ದ ಚಾಲಾಕಿ ಕಳ್ಳಿ..!
ಆದರೆ ಬೇರೆಯವರೊಂದಿಗೆ ಪತ್ನಿ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಶಂಕಿಸಿ ಕಿರುಕುಳ ನೀಡುತ್ತಿದ್ದ. ಆಕೆಯ ಸಹೋದ್ಯೋಗಿಗಳಿಗೆ ಕರೆ ಮಾಡಿ ನನ್ನ ಪತ್ನಿಗೆ ನಿಮಗೂ ಏನು ಸಂಬಂಧ ಎಂದು ಕೇಳುತ್ತಿದ್ದ. ಅಲ್ಲದೆ, ತನ್ನ ಮೊಬೈಲ್‌ನಲ್ಲಿ ಪತ್ನಿಯ ಅಶ್ಲೀಲ ಫೋಟೊ, ವಿಡಿಯೋಗಳನ್ನು ಸೆರೆ ಹಿಡಿದು ಇತರರಿಗೆ ಕಳುಹಿಸಿ ಮಾರ್ಯದೆ ತೆಗೆಯುವುದಾಗಿ ಬೆದರಿಸಿ ವಿಕೃತಿ ಮೆರೆಯುತ್ತಿದ್ದ. ವಿವಾಹವಾದ ಬಳಿಕ ಮಹಿಳೆ ಆರೋಪಿಗೆ ಕಾರೊಂದನ್ನು ಉಡುಗೊರೆಯಾಗಿ ಕೊಡಿಸಿದ್ದರು. ಪತ್ನಿಗೆ ಗೊತ್ತಿಲ್ಲದಂತೆ ಆರೋಪಿ ಕಾರು ಮಾರಾಟ ಮಾಡಿದ್ದ. ಇದನ್ನು ಕೇಳಿದ್ದಕ್ಕೆ ಮಹಿಳೆ ಕೊಲೆಗೆ ಯತ್ನಿಸಿದ್ದ. ಆರೋಪಿ ಮೂರು ಮದುವೆಯಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಮದ್ಯ ತರುವಂತೆ ಪೀಡಿಸುತ್ತಿದ್ದ
ಆರೋಪಿ ಕುಡಿದು ಪತ್ನಿಗೆ ಮದ್ಯ ಹಾಗೂ ಸಿಗರೇಟ್ ತರುವಂತೆ ಪೀಡಿಸುತ್ತಿದ್ದ. ನಿನ್ನ ತಂಗಿಯನ್ನು ಅಪಹರಿಸಿ ಅತ್ಯಾಚಾರ ಮಾಡುತ್ತೇನೆ ಎಂದು ಬೆದರಿಸುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆಯಿಂದ ದೂರು ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ