
ರಾಯಚೂರು (ಮಾ.30) : ಮುಖ್ಯಶಿಕ್ಷಕರೊಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಪಾಲಕರು ಶಾಲೆಗೆ ತೆರಳಿ ಗಲಾಟೆ ಮಾಡಿದ ಘಟನೆ ತಾಲೂಕಿನ ಶಕ್ತಿನಗರದಲ್ಲಿ ಜರುಗಿತು.
ಶಕ್ತಿನಗರದ ಕೆಪಿಸಿಎಲ್ ಡಿಎವಿ(KPCL DAV) ಶಾಲೆಯ ಮುಖ್ಯಶಿಕ್ಷಕ ವಿಜಯ ಅಂಗಡಿ(Vijay angadi) ಎನ್ನುವವರು ವಿದ್ಯಾರ್ಥಿನಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ ಅನುಚಿತವಾಗಿ ವರ್ತಿಸಿದ್ದು, ಇದೆಲ್ಲವೂ ಮೊಬೈಲ್‌ನಲ್ಲಿ ರೆಕಾರ್ಡ್(Mobile record) ಆಗಿದೆ. ಮುಖ್ಯಶಿಕ್ಷಕ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿ ಪಾಲಕರ ಗಮನಕ್ಕೆ ತಂದಿದ್ದು, ಪಾಲಕರು, ಸಂಬಂಧಿಕರು ಮಾತ್ರವಲ್ಲದೇ ಬಡಾವಣೆಯ ನೂರಾರು ಜನ ಶಾಲೆಗೆ ತೆರಳಿ ಗಲಾಟೆ ಮಾಡಿ ಮುಖ್ಯಶಿಕ್ಷಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಶಕ್ತಿನಗರ ಪೊಲೀಸರು(Shaktinagara police), ಮುಖ್ಯಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ. ಪಾಲಕರು ನೀಡಿದ ದೂರನ್ನಾಧರಿಸಿ ಮುಖ್ಯಶಿಕ್ಷಕನನ್ನು ಎಸ್ಪಿ ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.
ರಾಯಚೂರು: ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್
ಪಿಯುಸಿ ಪರೀಕ್ಷೆ: 12,529 ವಿದ್ಯಾರ್ಥಿಗಳು ಹಾಜರು
ರಾಯಚೂರು: ಜಿಲ್ಲೆಯಾದ್ಯಂತ ನಡೆಯುತ್ತಿರುವ ಪಿಯುಸಿ ವಾರ್ಷಿಕ ಪರೀಕ್ಷೆಯ ಸಮಾಜಶಾಸ್ತ್ರ ಹಾಗೂ ಕಂಪ್ಯೂಟರ್ ವಿಷಯದ ಪರೀಕ್ಷೆಗಳು ಬುಧವಾರ ನಡೆದಿದ್ದು, ಈ ಪರೀಕ್ಷೆಯಲ್ಲಿ ಒಟ್ಟು 13,739 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ಇದರಲ್ಲಿ ಒಟ್ಟು 12,529 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದಂತೆ 1,210 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಸಮಾಜಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ 3106 ವಿದ್ಯಾರ್ಥಿಗಳು ಹಾಜರಾಗಿದ್ದರೆ 359 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಲಿಂಗಸುಗೂರು 2319 ಹಾಜರು, 133 ಗೈರು, ಸಿಂಧನೂರು ತಾಲೂಕಿನಲ್ಲಿ 2118 ಹಾಜರು, 220 ಗೈರು, ಮಾನ್ವಿ ತಾಲೂಕಿನಲ್ಲಿ 1438 ಹಾಜರು, 114 ಗೈರು, ದೇವದುರ್ಗ ತಾಲೂಕಿನಲ್ಲಿ 1375 ಹಾಜರು, 210 ಗೈರು, ಮಸ್ಕಿ 614 ಹಾಜರು, 65 ಗೈರು, ಸಿರವಾರ 490 ಹಾಜರಾಗಿದ್ದರೆ 66 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಕಾಂಗ್ರೆಸ್‌ನ ಬಸನಗೌಡರಿಗೆ ತಿರುಗೇಟು ನೀಡುವುದೇ ಬಿಜೆಪಿ?: ರೆಡ್ಡಿ ಪಕ್ಷದಿಂದ ಎದುರಾಗಿದೆ ಮತ ವಿಭಜನೆಯ ಭೀತಿ
ಕಂಪ್ಯೂಟರ್ ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ 372 ವಿದ್ಯಾರ್ಥಿಗಳು ಹಾಜರಾಗಿದ್ದರೆ 17 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಲಿಂಗಸುಗೂರು 155 ಹಾಜರು, 08 ಗೈರು, ಸಿಂಧನೂರು ತಾಲೂಕಿನಲ್ಲಿ 428 ಹಾಜರು, 15 ಗೈರು, ಮಾನ್ವಿ ತಾಲೂಕಿನಲ್ಲಿ 102 ಹಾಜರು, 03 ಗೈರು, ದೇವದುರ್ಗದಲ್ಲಿ 12 ಜನ ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ