ಗ್ರಾನಿಟಿ ಪ್ರಾಪರ್ಟಿಸ್ ರಿಯಲ್ ಎಸ್ಟೇಟ್ ಕಂಪನಿ ಮಾಲಿಕ ಅಶ್ವಾಕ್ ಅಹಮದ್ ಬಂಧಿತರಾಗಿದ್ದು, ಆರೋಪಿ ವಿರುದ್ಧ 20ಕ್ಕೂ ಹೆಚ್ಚು ವಾರೆಂಟ್‌ಗಳು ಜಾರಿಯಲ್ಲಿದ್ದವು. ಕೊನೆಗೆ ಆರೋಪಿಯನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸಲಾಗಿದೆ.
ಬೆಂಗಳೂರು(ಮಾ.30): ಅಕ್ರಮವಾಗಿ ಕೃಷಿ ಭೂಮಿಯಲ್ಲಿ ಲೇಔಟ್ ನಿರ್ಮಿಸಿ ಜನರಿಗೆ ವಂಚನೆ ಸಂಬಂಧ ದಾಖಲಾಗಿದ್ದ 108ಕ್ಕೂ ಹೆಚ್ಚಿನ ವಂಚನೆ ಪ್ರಕರಣಗಳಲ್ಲಿ ಆರು ವರ್ಷಗಳಿಂದ ನ್ಯಾಯಾಲಯದ ವಿಚಾರಣೆ ಹಾಜರಾಗದೆ ತಪ್ಪಿಸಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬನನ್ನು ಸಿಸಿಬಿ ಬಂಧಿಸಿದೆ.
ಗ್ರಾನಿಟಿ ಪ್ರಾಪರ್ಟಿಸ್ ರಿಯಲ್ ಎಸ್ಟೇಟ್ ಕಂಪನಿ ಮಾಲಿಕ ಅಶ್ವಾಕ್ ಅಹಮದ್ ಬಂಧಿತರಾಗಿದ್ದು, ಆರೋಪಿ ವಿರುದ್ಧ 20ಕ್ಕೂ ಹೆಚ್ಚು ವಾರೆಂಟ್‌ಗಳು ಜಾರಿಯಲ್ಲಿದ್ದವು. ಕೊನೆಗೆ ಆರೋಪಿಯನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸಲಾಗಿದೆ.
2009-10ರಲ್ಲಿ ಕೃಷಿ ಭೂಮಿಯಲ್ಲಿ ಕಾನೂನು ಬಾಹಿರವಾಗಿ ಕಂದಾಯ ಬಡಾವಣೆಯನ್ನು ನಿರ್ಮಿಸಿ ನೂರಾರು ಸಾವಿರಾರು ಜನರಿಗೆ ಅಹಮದ್ ವಂಚಿಸಿದ್ದ. ಈ ಬಗ್ಗೆ ರಾಮಮೂರ್ತಿ ನಗರ, ಇಂದಿರಾ ನಗರ ಹಾಗೂ ಅಶೋಕ್ ನಗರ ಠಾಣೆಗಳಲ್ಲಿ ಆರೋಪಿ ವಿರುದ್ಧ ವಂಚನೆ ಆರೋಪದಡಿ 108 ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ತನಿಖೆ ನಡೆಸಿದ್ದ ಸಿಸಿಬಿ, ಅಹಮದ್ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿದ್ದರು. ಆದರೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಆತ ತಪ್ಪಿಸಿಕೊಂಡಿದ್ದ.
Suicide case: ಅನುಮಾನಾಸ್ಪದವಾಗಿ ಪತ್ನಿ ಆತ್ಮಹತ್ಯೆ: ಪತಿಯಿಂದ ದೂರು
ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದರೂ ಕೂಡಾ ಆತ ಆದೇಶ ಪಾಲಿಸದೆ ನಿರ್ಲಕ್ಷ್ಯ ತೋರಿದ್ದ. ಕೊನೆಗೆ ಅಹಮದ್‌ನನ್ನು ಉದ್ಘೋಷಿತ ಆರೋಪಿ ಎಂದು ಪ್ರಕಟಿಸಿದ ನ್ಯಾಯಾಲಯವು, ಆರೋಪಿಯ ಪತ್ತೆಗೆ ಪೊಲೀಸರಿಗೆ ಸೂಚಿಸಿತ್ತು. ಅಂತೆಯೇ ತನಿಖೆಗಿಳಿದ ಸಿಸಿಬಿ, ರಾಮಮೂರ್ತಿ ನಗರದ ಬಳಿ ಅಹಮದ್‌ನನ್ನು ಬಂಧಿಸಲಾಗಿದೆ. ನಗರ ತೊರೆದು ಆರೋಪಿ ಹೊರ ರಾಜ್ಯಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.