
ಜೈಪುರ(ಆ.03) ದೇಶದ ಕೆಲ ರಾಜ್ಯದಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ. ಈ ಪೈಕಿ ರಾಜಸ್ಥಾನದಲ್ಲಿ ಇತ್ತೀಚೆಗೆ ಪ್ರತಿ ದಿನ ಒಂದಲ್ಲಾ ಒಂದು ಘಟನೆಗಳು ಸಂಭವಿಸುತ್ತಲೇ ಇದೆ. ಎರಡು ದಿನಗಳ ಹಿಂದೆ ಅಪ್ತಾಪ್ತೆಯರನ್ನು 18 ತಿಂಗಳು ಕಾಲ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಘಟನೆ ಬೆನ್ನಲ್ಲೇ ಮತ್ತೊಂದು ಭೀಕರ ರೇಪ್ ಅಂಡ್ ಮರ್ಡರ್ ಕೇಸ್ ದಾಖಲಾಗಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕರು, ಬಳಿಕ ಜೀವಂತವಾಗಿ ಆಕೆಯನ್ನು ಹೊತ್ತಿ ಉರಿಯುತ್ತಿದ್ದ ಕಲ್ಲಿದಲ್ಲು ಕುಂಡಕ್ಕೆ ಎಸೆಗಿದ್ದಾರೆ.
ರಾಜಸ್ಥಾನದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತೆ ಬಾಲಕಿ ಮನೆಯಿಂದ ಕೆಲ ದೂರದಲ್ಲಿದ್ದ ಅಂಗಡಿಗೆ ತೆರಳಿದ್ದಾಳೆ. ಹೊಲ ಹಾಗೂ ನಿರ್ಜನ ಪ್ರದೇಶದ ಮೂಲಕ ಹಾದು ಹೋಗುವ ಕಾಲು ದಾರಿಯಲ್ಲಿ ಸಾಗಿದ ಬಾಲಕಿ ಎಷ್ಟು ಹೊತ್ತಾದರೂ ಮನೆಗೆ ಮರಳಿಲ್ಲ. ಹೀಗಾಗಿ ಆತಂಕಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಸ್ಥಳೀಯರು ಸೇರಿ ಇಡೀ ಗ್ರಾವಮನ್ನೇ ಹುಡುಕಿದ್ದಾರೆ. ಆದರೆ ಎಲ್ಲೂ ಬಾಲಕಿ ಪತ್ತೆಯಾಗಿಲ್ಲ.
91 ಬಾಲಕಿಯರ ಮೇಲೆ ಅತ್ಯಾಚಾರ, 15 ವರ್ಷಗಳಿಂದ ರೇಪ್ ಮಾಡುತ್ತಿದ್ದ ಮಕ್ಕಳ ಕಲ್ಯಾಣ ಸಿಬ್ಬಂದಿ ಅರೆಸ್ಟ್!
ಇತ್ತ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಮತ್ತೊಂದೆಡೆ ಕುಟುಂಬಸ್ಥರು ಬಾಲಕಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ನೀರಿನ ಟ್ಯಾಂಕ್ ಸೇರಿದಂತೆ ಹಲೆವೆಡೆ ಹುಡುಕಾಡಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲಿರುವ ಕಲ್ಲಿದಲ್ಲು ಉರಿಸುವ ಕುಂಡದ ಬಳಿ ತೆರಳಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಈ ಕುಂಡದಲ್ಲಿ ಬಾಲಕಿ ಕಳೇಬರ ಪತ್ತೆಯಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹದ ಅವಶೇಷಗಳನ್ನು ತೆಗಿದ್ದಾರೆ. ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರೆದಿದ್ದಾರೆ. ಇತ್ತ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಅಪ್ತಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಉರಿಯುತ್ತಿದ್ದ ಅಗ್ನಿಕುಂಡಕ್ಕೆ ಎಸೆದಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಇಬ್ಬರು ಅಪ್ತಾಪ್ತೆಯರ ಮೇಲೆ ನಿರಂತರ ಅತ್ಯಾಚರ ಎಸಗಿ ಗರ್ಭಿಣಿ ಮಾಡಿದ ಘಟನೆಯೂ ವರದಿಯಾಗಿದೆ. ಇತ್ತೀಚೆಗೆ ಶಾಲಾ ಬಾಲಕಿಯೊಬ್ಬಳ ನೀರಿನ ಬಾಟಲಿಗೆ ಮತ್ತೊಂದು ಸಮುದಾಯದ ವಿದ್ಯಾರ್ಥಿ ಮೂತ್ರ ಬೆರೆಸಿದ ಹೇಯ ಘಟನೆ ಬಿಲ್ವಾರ ಜಿಲ್ಲೆಯ ಲೊಹ್ರಿಯಲ್ಲಿ ನಡೆದಿತ್ತು. ಈ ಕುರಿತಾಗಿ ಶಾಲೆಯ ಮುಖ್ಯ ಶಿಕ್ಷಕರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿದ್ದರು.
ದೇವರನಾಡಲ್ಲಿ ಪೈಶಾಚಿಕ ಕೃತ್ಯ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ
ಬಾಟಲ್‌ನಿಂದ ನೀರು ಕುಡಿದ ಬಳಿಕ ಅದರಲ್ಲಿ ವಿಚಿತ್ರ ವಾಸನೆ ಬಂದದ್ದನ್ನು ಗಮನಿಸಿದ ಬಾಲಕಿ ಮುಖ್ಯ ಶಿಕ್ಷಕರಿಗೆ ದೂರು ನೀಡಿದ್ದಾಳೆ. ಅಲ್ಲದೇ ಇದೇ ವೇಳೆ ಆಕೆಯ ಬ್ಯಾಗಿನಲ್ಲಿ ಐ ಲವ್ ಯೂ ಎಂದು ಬರೆಯಲಾದ ಚೀಟಿ ಸಹ ದೊರಕಿದೆ. ಆದರೂ ಅವರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬಾಲಕಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, ಕ್ರೋಧಗೊಂಡ ಅವರು ಶಾಲೆಯ ಮೇಲೆ ದಾಳಿ ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ