
ಬೆಂಗಳೂರು (ಆ.3) : ನಾಲ್ಕು ಅಂತಸ್ತಿನ ಮೇಲಿಂದ ನೀರಿನ ಟ್ಯಾಂಕ್, ಗೋಡೆ ಕುಸಿದು ಎಗ್‌ರೈಸ್ ಅಂಗಡಿಮೇಲೆ ಬಿದ್ದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಗರದ ಶಿವಾಜಿನಗರ(Shivajinagar) ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಿಲ್ಡಿಂಗ್ ಕೆಳಗಡೆ ತಳ್ಳುಗಾಡಿಯಲ್ಲಿ ಎಗ್‌ರೈಸ್ ಮಾಡುತ್ತಿದ್ದ ಓರ್ವ ವ್ಯಕ್ತಿ ಹಾಗೂ ಎಗ್‌ರೈಸ್ ತಿನ್ನಲು ಬಂದ ವ್ಯಕ್ತಿ ಸಾವು. ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದು ಸಮೀಪದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
Bengaluru crime: ಗೃಹಿಣಿಗೆ ₹22 ಲಕ್ಷ, 960 ಗ್ರಾಂ ಚಿನ್ನ ಊಬರ್ ಚಾಲಕ ವಂಚನೆ
ನಾಲ್ಕು ಅಂತಸ್ತಿನ ಮೇಲಿದ್ದ ಸಿಂಟ್ಯಾಕ್ಸ್ ವಾಟರ್ ಟ್ಯಾಂಕ್(water tank). ನೀರು ಪೂರ್ತಿ ತುಂಬಿಹೋಗಿದ್ದ ಟ್ಯಾಂಕ್ ಭಾರಕ್ಕೆ ಶಿಥಿಲಗೊಂಡಿದ್ದ ಗೋಡೆ ಮುರಿದಿದೆ. ಗೋಡೆ ಟ್ಯಾಂಕ್ ಎರಡೂ ಎಗ್‌ರೈಸ್ ಅಂಗಡಿ(Egg rice shop) ಮೇಲೆ ಬಿದ್ದಿವೆ. ಬಿದ್ದ ರಭಸಕ್ಕೆ ಕ್ಷಣಾರ್ಧದಲ್ಲಿ ಇಬ್ಬರು ಮೃತ. ಇದೇ ವೇಳೆ ಸಮೀಪದಲ್ಲೇ ಇದ್ದ ಇನ್ನಿಬ್ಬರು ತೀವ್ರ ಗಾಯಗೊಂಡಿದ್ದು ಸ್ಥಳೀಯರ ಸಹಾಯದಿಂದ ತಕ್ಷಣ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ದ ಘಟನೆ ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಡಿಸಿಪಿ ಭೀಮಾಶಂಕರ್ ಗುಳೇದ್ ಪ್ರತಿಕ್ರಿಯೆ:
ದುರ್ಘಟನೆ ಬಗ್ಗೆ ಡಿಸಿಪಿ ಭೀಮಾಶಂಕರ್ ಗುಳೇದ್ ಪ್ರತಿಕ್ರಿಯಿಸಿದ್ದು, ಸುಮಾರು 10:30 ರ ಸಮಯದಲ್ಲಿ ದುರಂತ ಸಂಭವಿಸಿದೆ. ಶಿವಾಜಿನಗರ ಬಸ್ ಸ್ಟಾಂಡ್ ನಲ್ಲಿರುವ ಓಕ್ ಫರ್ನೀಚರ್ ಓವರ್ ಟ್ಯಾಂಕ್(Oak furniture over tank) ಕೆಳಗಡೆ ಫುಟ್ ಪಾತ್ ಮೇಲಿದ್ದ ಎಗ್ ರೈಸ್ ಅಂಗಡಿ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಅರುಳ್ (40) ಸಾವನ್ನಪ್ಪಿರುವ ವ್ಯಕ್ತಿ, ಇನ್ನೋರ್ವ ವ್ಯಕ್ತಿ ಕಮಲ್ ಗುರುತಿಸಲಾಗಿದೆ. ಮತ್ತೊಬ್ಬನ ಮಾಹಿತಿ ಸಿಗಬೇಕಿದೆ. ಗಾಯಾಳುಗಳನ್ನು ಬೋರಿಂಗ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಎಫ್ ಎಸ್ ಎಲ್ ಟೀಂ ಕೂಡಾ ಬರ್ತಿದೆ. ಕಟ್ಟಡ ನಿರ್ಮಾಣದ ಓವರ್ ಟ್ಯಾಂಕ್ ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಬಿಡಿಎ ಬಳಿ ಪರೀಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗತ್ತೆ ಎಂದರು.
ಸದ್ಯ ಪ್ರಕರಣ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ (Commercial Street Police Station)ಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ಪಾದಾಚಾರಿಗಳ ಸಾವು
ಆನೇಕಲ್: ಕ್ಯಾಂಟರ್ ಡಿಕ್ಕಿಯಿಂದಾಗಿ ಪಾದಾಚಾರಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಬಯೋಕಾನ್ ಪ್ಯಾಕ್ಟರಿ ಬಳಿ ನಡೆದಿದೆ.
ಬಿಹಾರ್ ಮೂಲದ ಮನೋಜ್ ಕುಮಾರ್(36) ಹಾಗೂ ತುಳುನಾಡು ಮೂಲದ ಆಧೀಶ್(33) ಮೃತರು. ಹೊರ ರಾಜ್ಯದಿಂದ ಬಂದು ದಿನಗೂಲಿ ಆಧಾರದ ಮೇಲೆ ಬಯೋಕಾನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಊಟಕ್ಕಾಗಿ ಹೊರಗೆ ಬಂದು ಪಾದಚಾರಿ ಮಾರ್ಗದಲ್ಲಿ ನಡೆದು ಹೋಗುತ್ತಿದ್ದರು. ಹಣ್ಣಿನ ಮಾರುಕಟ್ಟೆಯಿಂದ ಲೋಡ್ ಮಾಡಿಕೊಂಡು ಅತಿ ವೇಗವಾಗಿ ಬರುತ್ತಿದ್ದ ಕ್ಯಾಂಟರ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ. ಚಾಲಕ ಹಾಗೂ ವಾಹನವನ್ನು ವಶಕ್ಕೆ ಪಡೆದ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮವಸಿದ್ದಾರೆ.
ತಾಯಿ ಮೊಬೈಲ್ ಚಾರ್ಜರ್ ಕೊಡದ್ದಕ್ಕೆ ನೇಣಿಗೆ ಶರಣಾದ ಮಗ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ