ದೈಹಿಕ ಸಂಪರ್ಕ ನಿರಾಕರಿಸಿದ ಅಪ್ರಾಪ್ತ ಬಾಲಕಿಗೆ ಬೆಂಕಿ ಇಟ್ಟು ಕೊಂದ ವಿವಾಹಿತ

Published : Jul 25, 2022, 06:43 PM ISTUpdated : Jul 25, 2022, 07:20 PM IST
ದೈಹಿಕ ಸಂಪರ್ಕ ನಿರಾಕರಿಸಿದ ಅಪ್ರಾಪ್ತ ಬಾಲಕಿಗೆ ಬೆಂಕಿ ಇಟ್ಟು ಕೊಂದ ವಿವಾಹಿತ

ಸಾರಾಂಶ

Crime News: ವಿವಾಹಿತ ವ್ಯಕ್ತಿಯೊಬ್ಬ ತನ್ನ ಜತೆ  ದೈಹಿಕ ಸಂಪರ್ಕ ಬೆಳೆಸಲು ನಿರಾಕರಿಸಿದ ಅಪ್ರಾಪ್ತ ಬಾಲಕಿಯನ್ನು ಜೀವಂತವಾಗಿ ಸುಟ್ಟುಹಾಕಿದ ಆಘಾತಕಾರಿ ಘಟನೆ ಓಡಿಶಾದಲ್ಲಿ ನಡೆದಿದೆ

ಓಡಿಶಾ (ಜು. 25): ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ವಿವಾಹಿತ ವ್ಯಕ್ತಿಯೊಬ್ಬ ತನ್ನ ಜತೆ  ದೈಹಿಕ ಸಂಪರ್ಕ ಬೆಳೆಸಲು ನಿರಾಕರಿಸಿದ ಅಪ್ರಾಪ್ತ ಬಾಲಕಿಯನ್ನು ಜೀವಂತವಾಗಿ ಸುಟ್ಟುಹಾಕಿದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ. ಆರೋಪಿಯನ್ನು 27 ವರ್ಷದ ದಯಾನಿಧಿ ಜೆನಾ ಎಂದು ಗುರುತಿಸಲಾಗಿದ್ದು, ಮೃತಳು 14 ವರ್ಷದ ಬಾಲಕಿ 9ನೇ ತರಗತಿಯಲ್ಲಿ ಓದುತ್ತಿದ್ದಳು. ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ. 

ವರದಿಗಳ ಪ್ರಕಾರ, ಅಪ್ರಾಪ್ತ ಬಾಲಕಿ ಆರೋಪಿ ದಯಾನಿಧಿ ಜೆನಾ ಹೆಂಡತಿಯಿಂದ ಟ್ಯೂಷನ್ ತೆಗೆದುಕೊಳ್ಳಲು ಆತನ ಮನೆಗೆ ಹೋಗುತ್ತಿದ್ದಳು. ಈ ಅವಧಿಯಲ್ಲಿ, ಜೆನಾ ಅವಳತ್ತ ಆಕರ್ಷಿತನಾಗಿದ್ದು,  ಸಂಬಂಧ ಬೆಳೆಸಲು ಅವಳನ್ನು ಸಂಪರ್ಕಿಸಿದ್ದ. ಆದರೆ ಬಾಲಕಿ ಅದನ್ನು ತಿರಸ್ಕರಿಸಿದ್ದಳು. ಬಳಿಕ ಆರೋಪಿಯ ವರ್ತನೆಯಿಂದ ಬಾಲಕಿ ಮನೆಗೆ ಟ್ಯೂಷನ್‌ಗೆ ಹೋಗುವುದನ್ನೂ ನಿಲ್ಲಿಸಿದ್ದಳು.

ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಆರೋಪಿ: ಆದರೆ ಮತ್ತೊಂದೆಡೆ, ಜೆನಾ ತನ್ನ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಅವಳ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿದ್ದ. ಬಾಲಕಿಯನ್ನು ಕೊಂದು ಹಾಕುವ ಮೂಲಕ ತನಗಾದ ಅವಮಾನವನ್ನು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಭಾನುವಾರ ಬೆಳಿಗ್ಗೆ, ಹುಡುಗಿ ಕಲರ್ ಪೆನ್ಸಿಲ್ ಖರೀದಿಸಲು ಅಂಗಡಿಗೆ ಹೋಗುತ್ತಿದ್ದಾಗ, ಜೆನಾ ಅವಳನ್ನು ಅಡ್ಡಗಟ್ಟಿದ್ದ. 

ಶಾಲಾ ಟಾಯ್ಲೆಟ್‌ನಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಆರೋಪಿ ಬಂಧನ

ನಂತರ ಅವಳನ್ನು ಬಲವಂತವಾಗಿ ತನ್ನ ಮನೆಯ ಸಮೀಪವಿರುವ ಪಾಳುಬಿದ್ದ ಶೌಚಾಲಯವೊಂದಕ್ಕೆ ಕರೆದೊಯ್ದಿದ್ದ.  ಅಲ್ಲಿ ಆರೋಪಿ ಜೆನಾ ಅದಾಗಲೇ ಸೀಮೆಎಣ್ಣೆ ಮತ್ತು ಲೈಟರ್ ಇಟ್ಟುಕೊಂಡಿದ್ದ. ಜೆನಾ ನಂತರ ಬಾಲಕಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಎಂದು ವರದಿಗಳು ತಿಳಿಸಿವೆ. 

ಬಾಲಕಿಯ ಕಿರುಚಾಟವನ್ನು ಕೇಳಿದ ಜೆನಾ ಪತ್ನಿ ಮತ್ತು ಇತರ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಆದರೆ  ಅವರು ತಲುಪುವಷ್ಟರಲ್ಲಿ ಆಕೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದಳು.  ಅಪರಾಧ ಮಾಡಿದ ನಂತರ ಜೆನಾ ವಿಷ ಸೇವಿಸಿದ್ದ ಎಂದು ವರದಿಯಾಗಿದೆ. 

ಆದರೆ, ಗ್ರಾಮಸ್ಥರ ಕೈಗೆ ಜೆನಾ ಸಿಕ್ಕಿಬಿದ್ದಿದ್ದು ಮಾಹಿತಿ ಪಡೆದ ಖೈರಾ ಪೊಲೀಸರು ಸ್ಥಳಕ್ಕೆ ಧಾವಿಸಿ ಜೆನಾನನ್ನು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 

ಪತ್ನಿ ಕುಟುಂಬಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ: ಸಂಧಾನಕ್ಕೆ ಕರೆದು ರಾಕ್ಷಸ ನಡೆ!

ಆರೋಪಿ ಆಸ್ಪತ್ರೆಗೆ ದಾಖಲು: ಖೈರಾ ಪೊಲೀಸ್ ಠಾಣೆ ಐಐಸಿ ಗಣೇಶ್ವರ್ ಪ್ರಧಾನ್ ಮಾತನಾಡಿ, "ಆರೋಪಿಯ ಆರೋಗ್ಯ ಹದಗೆಟ್ಟಿದ್ದರಿಂದ ಆತನನ್ನು ಚಿಕಿತ್ಸೆಗಾಗಿ ಎಫ್‌ಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. "ಅವನನ್ನು ಅಲ್ಲಿಗೆ ದಾಖಲಿಸಲಾಗಿದೆ ಮತ್ತು ಅವನ ಮೇಲೆ ಕಣ್ಣಿಡಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ" ಎಂದು ತಿಳಿಸಿದ್ದಾರೆ. 

"ಜೆನಾ ವಿರುದ್ಧ ಐಪಿಸಿಯ ಸೆಕ್ಷನ್ 302, 294 ಮತ್ತು 506ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.  ಆರೋಪಿ ಚೇತರಿಸಿಕೊಂಡರೆ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು" ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ