Bengaluru Crime News: ಬೆಂಗಳೂರಲ್ಲಿ ಮತ್ತೊಬ್ಬ ಶಂಕಿತ ಉಗ್ರ ಸಿಸಿಬಿ ವಶಕ್ಕೆ

Published : Jul 25, 2022, 05:32 PM ISTUpdated : Jul 25, 2022, 05:55 PM IST
Bengaluru Crime News: ಬೆಂಗಳೂರಲ್ಲಿ ಮತ್ತೊಬ್ಬ ಶಂಕಿತ ಉಗ್ರ ಸಿಸಿಬಿ ವಶಕ್ಕೆ

ಸಾರಾಂಶ

Bengaluru Crime News: ಇಂದು ಮುಂಜಾನೆ ಬಂಧನವಾಗಿದ್ದ ಅಖ್ತರ್ ಹುಸೇನ್ ಜೊತೆ ಸಂಪರ್ಕದಲ್ಲಿ ಇದ್ದ ಮತ್ತೊಬ್ಬ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ   

ಬೆಂಗಳೂರು (ಜು. 25):  ಬೆಂಗಳೂರಿನಲ್ಲಿ ಇಂದು ಮುಂಜಾನೆ ವೇಳೆಗೆ ಶಂಕಿತ ಉಗ್ರ ಅಖ್ತರ್‌ ಹುಸೇನ್‌ನನ್ನು ಬಂಧನ ಮಾಡಲಾಗಿತ್ತು. ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಜೊತೆ ಆತನ ಸಂಪರ್ಕವಿದ್ದು, ಉಗ್ರನ ವಿದೇಶಿ ಸಂಘಟನೆ ಸಂಪರ್ಕದ ಬಗ್ಗೆ ಹಲವು ದಿನಗಳಿಂದ ಅಂತರಿಕ ಗುಪ್ತಚರ (ಐಬಿ) ನಿಗಾ ವಹಿಸಿತ್ತು. ಈಗ  ಅಖ್ತರ್ ಹುಸೇನ್ ಜೊತೆ ಸಂಪರ್ಕದಲ್ಲಿ ಇದ್ದ ಮತ್ತೊಬ್ಬ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಶಂಕಿತ ಉಗ್ರನನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.  ವಿಚಾರಣೆ ಬಳಿಕ ಸಿಸಿಬಿ ಪೊಲೀಸರು ಶಂಕಿತ ಉಗ್ರನನ್ನು ಬಂಧಿಸಲಿದ್ದಾರೆ.  ಅಖ್ತರ್ ಹುಸೇನ್ ಬಂಧನ ಹಿನ್ನಲೆ ರೂಂ ಮೇಟ್ ಸೇರಿ ಸಿಸಿಬಿ ಹಲವ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಮತ್ತೋರ್ವ ಅಖ್ತರ್ ಉಗ್ರ ಚಟುವಟಿಕೆ ಸಂಚಿಗೆ ಸಾಥ್ ನೀಡಿರುವುದು ಬೆಳಕಿಗೆ ಬಂದಿದೆ.  

10 ದಿನಗಳ ಕಾಲ ಸಿಸಿಬಿ ವಶಕ್ಕೆ:  ಶಂಕಿತ ಉಗ್ರ ಅಖ್ತರ್‌ನನ್ನು ಕೋರ್ಟ್ ಆಗಸ್ಟ್ 3 ರ ವರೆಗೂ ಸಿಸಿಬಿ ವಶಕ್ಕೆ‌ ನೀಡಿ ಆದೇಶ ಹೊರಡಿಸಿದೆ. ಆರೋಪಿಯ ಜೊತೆ ಒಂದು ದೊಡ್ಡ ಗುಂಪು ಇದೆ..  ಆ ಗುಂಪಿನ್ನು ಪತ್ತೆ ಹಚ್ಚಬೇಕಾದ ಅಗತ್ಯ ಇದೆ.  ಆರೋಪಿ ಟೆಲಿಗ್ರಾಂ, ಫೇಸ್ ಬುಕ್ ಮೆಸೆಂಜರ್ ಸೇರಿ ಹಲವು ಗ್ರೂಪ್‌ಗಳನ್ನ ಹೊಂದಿದ್ದಾನೆ. ಅಲ್ಲದೆ, ಆರೋಪಿ ಜೊತೆ ಚೆನ್ನೈ, ಅಸ್ಸಾಂ ಹಾಗೂ ವೆಸ್ಟ್ ಬೆಂಗಾಲದಲ್ಲಿ ತನಿಖೆ‌ ಅಗತ್ಯ ಇದೆ. ತನಿಖೆ ಸಂಬಂಧ ಸಾಕಷ್ಟು ಸಾಕ್ಷ್ಯ ಗಳ ಸಂಗ್ರಹ ಅಗತ್ಯ ಇದೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ನೀಡುವಂತೆ‌ ಸಿಸಿಬಿ ಮನವಿ ಮಾಡಿತ್ತು.  ಸಿಸಿಬಿ ಮನವಿ ಪುರಸ್ಕರಿಸಿ‌ ಕೋರ್ಟ್ ಶಂಕಿತ ಉಗ್ರನನ್ನು 10 ದಿನಗಳ ಕಾಲ ಸಿಸಿಬಿ ವಶಕ್ಕೆ‌ ನೀಡಿದೆ

ಅಲ್‌ಖೈದಾ ಜೊತೆ ಅಖ್ತರ್‌ ಹುಸೇನ್‌ಗೆ ಲಿಂಕ್‌: ಇನ್ನು ಶಂಕಿತ ಉಗ್ರ ಅಖ್ತರ್‌ ಹುಸೇನ್‌ಗೆ  ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಜೊತೆ ಆತನ ಸಂಪರ್ಕವಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.  ಸೋಮವಾರ ಮುಂಜಾನೆ ತಿಲಕ್‌ ನಗರದಲ್ಲಿರುವ ಬಾಡಿಗೆ ಮನೆಯಲ್ಲಿ ಅಖ್ತರ್‌ ಹುಸೇನ್‌ ಬಂಧಿಸಲಾಗಿತ್ತು. ಸದ್ಯ ಆಡುಗೋಡಿಯ ಟೆಕ್ನಿಕಲ್‌ ಸೆಲ್‌ನಲ್ಲಿ ಆತನ ವಿಚಾರಣೆ ನಡೆಯುತ್ತಿದೆ. ಇದರ ಬೆನ್ನಲ್ಲಿಯೇ ಆತನ ಲಿಂಕ್‌ಗಳು ಹಾಗೂ ಉದ್ದೇಶಗಳು ಬಹಳ ಆತಂಕಕಾರಿಯಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಅಸ್ಸಾಂ ಮೂಲದ ಶಂಕಿತ ಉಗ್ರ ಬೆಂಗಳೂರು ಸಿಸಿಬಿ ಪೊಲೀಸರ ವಶಕ್ಕೆ

ಉಗ್ರನ ವಿದೇಶಿ ಸಂಘಟನೆ ಸಂಪರ್ಕದ ಬಗ್ಗೆ ಹಲವು ದಿನಗಳಿಂದ ಅಂತರಿಕ ಗುಪ್ತಚರ (ಐಬಿ) ನಿಗಾ ವಹಿಸಿತ್ತು. ಆತ ಎಲ್ಲಿರುತ್ತಾನೆ ಎನ್ನುವ ಸೂಕ್ತ ಮಾಹಿತಿಯನ್ನು ಬೆಂಗಳೂರು ಪೊಲೀಸರೊಂದಿಗೆ ಹಂಚಿಕೊಂಡ ಬಳಿಕ, ಈತನನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. 

ಉಗ್ರ ಅಖ್ತರ್‌ ಹುಸೇನ್‌ ಕೇವಲ 10ನೇ ತರಗತಿ ಓದಿದ್ದ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ಮಾಡುವುದು ಈತನ ಪ್ರಮುಖ ಕೆಲಸವಾಗಿತ್ತು. ಸೋಷಿಯಲ್ ಮೀಡಿಯಾ ಬಳಸಿಕೊಂಡು ಭಾರತದಲ್ಲಿ ಹಾಗೂ ಬೆಂಗಳೂರಲ್ಲಿ ಈತ ಗಲಭೆ ಎಬ್ಬಿಸುವ ನಿಟ್ಟಿನಲ್ಲಿ ಪೋಸ್ಟ್‌ಗಳನ್ನು ಮಾಡುತ್ತಿದ್ದ ಎನ್ನಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!