ಕಾಣೆಯಾಗಿದ್ದ 4 ವಿದ್ಯಾರ್ಥಿನಿಯರಲ್ಲಿ ಇಬ್ಬರು ಪತ್ತೆ, ಇನ್ನಿಬ್ಬರಿಗಾಗಿ ಶೋಧ

By Suvarna News  |  First Published Jul 25, 2022, 5:05 PM IST

ಕಾಣೆಯಾಗಿದ್ದ ರಾಯಚೂರು ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರ ಪೈಕಿ ಇಬ್ಬರು ಪತ್ತೆಯಾಗಿದ್ದು, ಇನ್ನಿಬ್ಬರ ಪತ್ತೆಗೆ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.


ರಾಯಚೂರು, (ಜುಲೈ. 25): ನಾಪತ್ತೆಯಾಗಿದ್ದ ನಾಲ್ವರು ರಾಯಚೂರು ಪಿಯು ಕಾಲೇಜು ವಿದ್ಯಾರ್ಥಿನಿಯರ ಪೈಕಿ ಇಬ್ಬರು ಪತ್ತೆಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪತ್ತೆಯಾಗಿದ್ದು, ಇನ್ನಿಬ್ಬರು ವಿದ್ಯಾರ್ಥನಿಯರ ಪತ್ತೆಗೆ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.

ಜುಲೈ 23ರಂದು ಕಾಲೇಜಿಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದವರು ಕಾಣೆಯಾಗಿದ್ದರು. ಈ ಬಗ್ಗೆ ರಾಯಚೂರು ಮಹಿಳಾ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು. ಈ ದೂರಿನ ಮೇರೆಗೆ ರಾಯಚೂರು ಪೊಲೀಸರು ಕಾರ್ಯಚರಣೆಗಿಳಿದಿದ್ದರು. ಇದೀಗ ಇಬ್ಬರನ್ನು ಪೊಲೀಸರು ಪತ್ತೆ ಮಾಡಿದ್ದು, ಪತ್ತೆಯಾದ ವಿದ್ಯಾರ್ಥಿನಿಯನ್ನ ನಂದಿನಿ ಮತ್ತು ಭಾಗ್ಯಶ್ರೀ ಎಂದು ಹೇಳಲಾಗುತ್ತಿದೆ.

Tap to resize

Latest Videos

ಕಾಲೇಜಿಗೆ ಹೋದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ!

ಇನ್ನಿಬ್ಬರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸಂಜೆಯೊಳಗೆ ಪತ್ತೆ ಹಚ್ಚುವ ಸಾಧ್ಯತೆ ಇದೆ. ನಾಲ್ವರೂ ಗೋವಾಗೆ ತೆರಳಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಇವರಷ್ಟೇ ಹೋಗಿದ್ದರಾ ಅಥವಾ ಯಾರಾದ್ರೂ ಇವರನ್ನ ಕರೆದೊಯ್ದಿದ್ದರಾ ಎಂಬ ಬಗ್ಗೆ ಪೊಲೀಸರು ತನಿಖೆ. ನಡೆಸಿದ್ದಾರೆ.

ಸ್ಟೇಷನ್‌ ರಸ್ತೆಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಇವರಾಗಿದ್ದಾರೆ. ಇವರಲ್ಲಿ ಮೂವರು ವಿದ್ಯಾರ್ಥಿನಿಯರು ಅಪ್ರಾಪ್ತರಾಗಿದ್ದರೆ, ಒಬ್ಬಳು ವಯಸ್ಕ ಹುಡುಗಿಯಾಗಿದ್ದಾಳೆ. ಇಬ್ಬರು ವಿದ್ಯಾರ್ಥಿನಿಯರು ಶಕ್ತಿನಗರದ ನಿವಾಸಿಗಳಾಗಿದ್ದು, ಇನ್ನಿಬ್ಬರು ರಾಯಚೂರಿನವರಾಗಿದ್ದಾರೆ. ಮಕ್ಕಳು ಕಾಣೆಯಾದ ಬೆನ್ನಲ್ಲಿಯೇ ವಿದ್ಯಾರ್ಥಿನಿಯರ ಪೋಷಕರು ಮಹಿಳಾ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆ ತನಿಖೆ ಆರಂಭಿಸಿದೆ. ವಿದ್ಯಾರ್ಥಿನಿಯರ ಹುಡುಕಾಟಕ್ಕಾಗಿ ಎರಡು ತಂಡ ರಚನೆ ಮಾಡಲಾಗಿದ್ದು, ಸದರಬಜಾರ ಠಾಣೆ ಪಿಎಸ್ ಐ ಹಾಗೂ ಮಹಿಳಾ ಠಾಣಾ ಪಿಎಸ್ಐ ನೇತೃತ್ವದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಇದರ ನಡುವೆ ಸರ್ಕಾರಿ ಪಿಯು ಕಾಲೇಜಿಗೆ ರಾಯಚೂರು ಡಿವೈಎಸ್ ಪಿ ವೆಂಕಟೇಶ ಭೇಟಿ ನೀಡಿ ವಿದ್ಯಾರ್ಥಿನಿಯರ ಬಗ್ಗೆ ವಿಚಾರಣೆ ನಡೆಸಿದ್ದರು.

ವಿದ್ಯಾರ್ಥಿನಿಯರು ಸರಿಯಾಗಿ ಕಾಲೇಜಿಗೆ ಬರುತ್ತಿರಲಿಲ್ಲ: 
ಪಿಯು ಕಾಲೇಜಿಗೆ ಭೇಟಿ‌ ನೀಡಿದ ಕಾಲೇಜಿನ ಕಾರ್ಯಾಧ್ಯಕ್ಷ ರವಿ ಜಲ್ದಾರ್, ವಿದ್ಯಾರ್ಥಿನಿಯರು ಸರಿಯಾಗಿ ಕಾಲೇಜಿಗೆ ಬರುತ್ತಿರಲಿಲ್ಲ. ಕಳೆದ ನಾಲ್ಕು ದಿನಗಳಿಂದ ಅವರು ಕಾಲೇಜಿಗೆ ಬಂದಿಲ್ಲ ಎಂದು ಹೇಳಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ಹಾಗೂ ಪೊಲೀಸರ ಜೊತೆಗೆ ಅವರೂ ಚರ್ಚೆ ನಡೆಸಿದ್ದಾರೆ. ಚರ್ಚೆ ಬಳಿಕ ಕಾಲೇಜಿನ ಕಾರ್ಯಾಧ್ಯಕ್ಷ ರವಿ ಜಲ್ದಾರ್ ಈ ಮಾಹಿತಿ ನೀಡಿದ್ದಾರೆ.
 

click me!